ವಿದ್ಯುತ್​ ಖಾಸಗೀಕರಣಕ್ಕೆ ವಿರೋಧ

ವಿದ್ಯುತ್​ ಖಾಸಗೀಕರಣ ವಿರೋಧಿಸಿ ಜೆಸ್ಕಾಂ ನೌಕರರ ಸಂ ಹಾಗೂ ಇತರೆ ಸಂಟನೆಗಳು ಹುಮನಾಬಾದ್​ನಲ್ಲಿ ಬುಧವಾರ ಮಾಜಿ ಸಚಿವ ರಾಜಶೇಖರ ಪಾಟೀಲ್​ ಅವರಿಗೆ ಮನವಿ ಸಲ್ಲಿಸಿದರು. ಇಇ ಗುರುಶಾಂತ ವಾರದ, ಎಇಇ ರಮೇಶ ಮೈನಾಳೆ, ಥಾಮಸ್​ ಕಟ್ಟಿಮನಿ, ಶಂಕರ ಪಸಾರ್ಗಿ, ಗಣಪತಿ ಖೇಣಿಕರ, ಸೂರ್ಯಕಾಂತ ಇತರರಿದ್ದರು
ವಿದ್ಯುತ್​ ಖಾಸಗೀಕರಣ ವಿರೋಧಿಸಿ ಜೆಸ್ಕಾಂ ನೌಕರರ ಸಂ ಹಾಗೂ ಇತರೆ ಸಂಟನೆಗಳು ಹುಮನಾಬಾದ್​ನಲ್ಲಿ ಬುಧವಾರ ಮಾಜಿ ಸಚಿವ ರಾಜಶೇಖರ ಪಾಟೀಲ್​ ಅವರಿಗೆ ಮನವಿ ಸಲ್ಲಿಸಿದರು. ಇಇ ಗುರುಶಾಂತ ವಾರದ, ಎಇಇ ರಮೇಶ ಮೈನಾಳೆ, ಥಾಮಸ್​ ಕಟ್ಟಿಮನಿ, ಶಂಕರ ಪಸಾರ್ಗಿ, ಗಣಪತಿ ಖೇಣಿಕರ, ಸೂರ್ಯಕಾಂತ ಇತರರಿದ್ದರು
Published on

ಪ್ರಮುಖ ಮುಖ್ಯಾಂಶಗಳು

  • ಸರ್ಕಾರದ ಮೇಲೆ ಒತ್ತಡ ಹಾಕಲು ಮಾಜಿ ಸಚಿವ ರಾಜಶೇಖರ ಪಾಟೀಲ್​ಗೆ ಒತ್ತಾಯ
ಹುಮನಾಬಾದ್​: ವಿದ್ಯುತ್​ ಖಾಸಗೀಕರಣ ವಿರೋಧಿಸಿ ಸರ್ಕಾರದ ಮೇಲೆ ಒತ್ತಡ ಹೇರುವಂತೆ ಜೆಸ್ಕಾಂ ನೌಕರರು ಹಾಗೂ ಇತರೆ ಸಂಟನೆಗಳು ಬುಧವಾರ ಪಟ್ಟಣದಲ್ಲಿ ಮಾಜಿ ಸಚಿವ ರಾಜಶೇಖರ ಪಾಟೀಲ್​ ಅವರಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು.
ಕರ್ನಾಟಕ ವಿದ್ಯುತ್​ ಪ್ರಸರಣ ನಿಗಮ ನೌಕರರ ಸಂದ ಪದಾಧಿಕಾರಿಗಳು ಹಾಗೂ ಜೆಸ್ಕಾಂ ಅಧಿಕಾರಿಗಳು ಮತ್ತು ಸಿಬ್ಬಂದಿ ಪಟ್ಟಣದ ಅವರ ನಿವಾಸಕ್ಕೆ ತೆರಳಿ ಮನವಿ ಸಲ್ಲಿಸಿ, ರಾಜ್ಯದಲ್ಲಿ ವಿದ್ಯುತ್​ ವ್ಯವಸ್ಥೆಯನ್ನು ಖಾಸಗೀಕರಣಗೊಳಿಸುವ ಪ್ರಸ್ತಾವದಿಂದ ಉಂಟಾಗಬಹುದಾದ ಸಮಸ್ಯೆಗಳ ಕುರಿತು ಸಮಾಲೋಚನೆ ನಡೆಸಿದರು. ಈ ವೇಳೆ ಖಾಸಗೀಕರಣದಿಂದ ಸಾರ್ವಜನಿಕರಿಗೆ ಹಾಗೂ ಸಿಬ್ಬಂದಿಗೆ ಉಂಟಾಗುವ ತೊಂದರೆಗಳ ಬಗ್ಗೆ ವಿವರಿಸಿದ ನೌಕರರು, ವಿದ್ಯುತ್​ ವಿತರಣಾ ವ್ಯವಸ್ಥೆಯನ್ನು ಖಾಸಗಿ ಸಂಸ್ಥೆಗಳಿಗೆ ನೀಡದಂತೆ ಸರ್ಕಾರದ ಗಮನ ಸೆಳೆದು ಅಗತ್ಯ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.
ಮನವಿ ಸ್ವೀಕರಿಸಿ ಮಾತನಾಡಿದ ಮಾಜಿ ಸಚಿವ ರಾಜಶೇಖರ ಪಾಟೀಲ್​, ಜೆಸ್ಕಾಂ ಅಧಿಕಾರಿಗಳು ಹಾಗೂ ಸಿಬ್ಬಂದಿ ಆತಂಕವನ್ನು ಸರ್ಕಾರದ ಗಮನಕ್ಕೆ ತಂದು ವಿದ್ಯುತ್​ ವ್ಯವಸ್ಥೆಯನ್ನು ಖಾಸಗೀಕರಣಕ್ಕೆ ಒಪ್ಪಿಸದಂತೆ ಸರ್ಕಾರದ ಮೇಲೆ ಒತ್ತಡ ಹೇರುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಭರವಸೆ ನೀಡಿದರು.
ಇಇ ಗುರುಶಾಂತ ವಾರದ, ಎಇಇ ರಮೇಶ ಮೈನಾಳೆ, ಸಂದ ಪ್ರಮುಖರಾದ ಥಾಮಸ್​ ಕಟ್ಟಿಮನಿ, ಶಂಕರ ಪಸಾರ್ಗಿ, ಗಣಪತಿ ಖೇಣಿಕರ, ಸೂರ್ಯಕಾಂತ, ರಮೇಶ ಸಂಗಮಕರ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net