ವಿಪಕ್ಷದ ಆರೋಪದಲ್ಲಿ ಹುರುಳಿಲ್ಲ

ರಾಮದುರ್ಗ ನಗರದಲ್ಲಿ ನೂರು ಹಾಸಿಗೆ ಸಾಮರ್ಥ್ಯದ ತಾಲೂಕು ಸಾರ್ವಜನಿಕ ಆಸ್ಪತ್ರೆ ನಿರ್ಮಾಣ ಕಾಮಗಾರಿಗೆ ಸಚಿವ ದಿನೇಶ ಗುಂಡೂರಾವ್​ ಭೂಮಿಪೂಜೆ ನೆರವೇರಿಸಿದರು. ಶಾಸಕ ಅಶೋಕ ಪಟ್ಟಣ, ವಿನಯ ನಾವಲಗಟ್ಟಿ, ಡಾ.ಪುಷ್ಪಾ ಎಚ್​.ಆರ್​ ಇತರರಿದ್ದರು.
ರಾಮದುರ್ಗ ನಗರದಲ್ಲಿ ನೂರು ಹಾಸಿಗೆ ಸಾಮರ್ಥ್ಯದ ತಾಲೂಕು ಸಾರ್ವಜನಿಕ ಆಸ್ಪತ್ರೆ ನಿರ್ಮಾಣ ಕಾಮಗಾರಿಗೆ ಸಚಿವ ದಿನೇಶ ಗುಂಡೂರಾವ್​ ಭೂಮಿಪೂಜೆ ನೆರವೇರಿಸಿದರು. ಶಾಸಕ ಅಶೋಕ ಪಟ್ಟಣ, ವಿನಯ ನಾವಲಗಟ್ಟಿ, ಡಾ.ಪುಷ್ಪಾ ಎಚ್​.ಆರ್​ ಇತರರಿದ್ದರು.
Published on
ರಾಮದುರ್ಗ: ಪಂಚ ಗ್ಯಾರಂಟಿ ಯೋಜನೆಯಿಂದ ರಾಜ್ಯದ ಜಿಡಿಪಿ ದೇಶದಲ್ಲಿಯೇ ನಂ.1 ಸ್ಥಾನ ತಲುಪಿದೆ. ಕೇಂದ್ರಕ್ಕೆ ತೆರಿಗೆ ನೀಡುವಲ್ಲೂ ಕರ್ನಾಟಕ ಎರಡನೇ ಸ್ಥಾನದಲ್ಲಿದೆ. ಅವೆಲ್ಲ ಬಿಟ್ಟು ಸರ್ಕಾರದಲ್ಲಿ ಅಭಿವೃದ್ಧಿ ಕೆಲಸ ನಡೆಯುತ್ತಿಲ್ಲ ಎನ್ನುವ ವಿಪಕ್ಷದ ಆರೋಪದಲ್ಲಿ ಹುರುಳಿಲ್ಲ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ ಗುಂಡೂರಾವ್​ ಹೇಳಿದರು.
ನಗರದಲ್ಲಿ 33 ಕೋಟಿ ರೂ.ವೆಚ್ಚದಲ್ಲಿ 100 ಹಾಸಿಗೆಗಳ ಸಾಮರ್ಥ್ಯದ ತಾಲೂಕು ಸಾರ್ವಜನಿಕ ಆಸ್ಪತ್ರೆಯ ಕಟ್ಟಡ ನಿರ್ಮಾಣ ಕಾಮಗಾರಿಗೆ ಸೋಮವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿ, ಹಿಂದಿನ ಸರ್ಕಾರದ ಅವಧಿಯಲ್ಲಿ ಜಿಲ್ಲೆಗೆ ಒಂದು ಹೊಸ ಬಸ್​ ನೀಡಿಲ್ಲ. ಆದರೆ, ನಮ್ಮ ಸರ್ಕಾರ ಜಿಲ್ಲೆಗೆ 500 ಹೊಸ ಬಸ್​ ನೀಡಿದೆ. ಬಾಣಂತಿ ಸಾವು ಗಂಭೀರವಾಗಿ ಪರಿಗಣಿಸಿದ ಹಿನ್ನೆಲೆಯಲ್ಲಿ ಅದರ ಪ್ರಮಾಣ ಶೇ.25ರಷ್ಟು ಇಳಿಕೆಯಾಗಿದೆ ಎಂದರು.
ಶಾಸಕ ಅಶೋಕ ಪಟ್ಟಣ ಮಾತನಾಡಿ, ತಾಲೂಕಿನ ಜನರಿಗೆ ಆರೋಗ್ಯ ಸೇವೆ ಒದಗಿಸಲು 100 ಹಾಸಿಗೆಯುಳ್ಳ ಆಸ್ಪತ್ರೆ ಮಂಜೂರಾಗಿದೆ. ಹೊಸ ಕಟ್ಟಡ ಕಾಮಗಾರಿ ಪೂರ್ಣಗೊಂಡ ಬಳಿಕ ಹಳೇ ಕಟ್ಟಡ ನೆಲಸಮಗೊಳಿಸಿ, ತಾಯಿ ಮಕ್ಕಳ ಆಸ್ಪತ್ರೆ ನಿರ್ಮಾಣಕ್ಕೆ ಅನುಮೋದನೆ ನೀಡಬೇಕೆಂದು ಸಚಿವರಿಗೆ ಮನವಿ ಮಾಡಿದರು. ಗ್ಯಾರಂಟಿ ಅನುಷ್ಠಾನ ಸಮಿತಿ ಜಿಲ್ಲಾಧ್ಯ ವಿನಯ ನಾವಲಗಟ್ಟಿ, ಆರೋಗ್ಯ ಇಲಾಖೆ ಜಂಟಿ ನಿರ್ದೇಶಕಿ ಡಾ.ಪುಷ್ಪಾ ಎಚ್​.ಆರ್​., ಡಿಎಚ್​ಒ ಡಾ.ಐ.ಪಿ.ಗಡಾದ, ಸಾರಿಗೆ ನಿಗಮದ ಉಪಾಧ್ಯ ಸುನೀಲ ಹನುಮನ್ನವರ, ತಹಸೀಲ್ದಾರ್​ ಪ್ರಕಾಶ ಹೊಳೆಪ್ಪಗೋಳ, ತಾಪಂ ಇಒ ಬಸವರಾಜ ಐನಾಪುರ, ಗ್ಯಾರಂಟಿ ಅನುಷ್ಠಾನ ಸಮಿತಿ ತಾಲೂಕಾಧ್ಯ ಜಿ.ಬಿ.ರಂಗನಗೌಡ್ರ, ವಿರಕ್ತಮಠ ಟ್ರಸ್ಟ್​ ಅಧ್ಯ ಪ್ರದಿಪ ಪಟ್ಟಣ ಇತರರಿದ್ದರು. ಶೋಭಾ ಚಚಡಿ ಸ್ವಾಗತಿಸಿದರು. ಟಿಎಚ್​ಒ ಡಾ.ನವೀನ ನಿಜಗುಲಿ ಪ್ರಾಸ್ತಾವಿಕ ಮಾತನಾಡಿದರು. ಎನ್​.ಎ.ಶೇಖ ನಿರೂಪಿಸಿದರು.
ಎಸ್​.ಡಿ.ಐನಾಪೂರ ವಂದಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net