ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ರಾಜ್ಯದಿಂದ ಕೇಂದ್ರಕ್ಕೆ 5.83 ಲಕ್ಷ ಮೆಟ್ರಿಕ್ ಟನ್ ರಸಗೊಬ್ಬರ ಪೂರೈಕೆಗೆ ಬೇಡಿಕೆವೊಡ್ಡಲಾಗಿತ್ತು. 6 ಲಕ್ಷ ಮೆಟ್ರಿಕ್ ಟನ್ ಹಂಚಿಕೆ ಮಾಡಿದರೂ ಪೂರೈಕೆ ಮಾತ್ರ 1.64 ಲಕ್ಷ ಮೆಟ್ರಿಕ್ ಟನ್ ಮಾಡಿದೆ. ಅಂದರೆ ಬೇಡಿಕೆಯಲ್ಲಿ ಕೇವಲ ಶೇ.30 ರಸಗೊಬ್ಬರ ಪೂರೈಸಿದ್ದು, ಇದರಿಂದ ತೀವ್ರ ಅಭಾವ ಸೃಷ್ಟಿಯಾಗಿದೆ ಎಂದು ಸಚಿವರು ಆರೋಪಿಸಿದರು.