ಆನ್‌ಲೈನ್ ರಮ್ಮಿ ಮತ್ತು ಪೋಕರ್‌ನಂತಹ ಅಪ್ಲಿಕೇಶನ್‌ಗಳಲ್ಲಿ ಬೆಟ್ಟಿಂಗ್ ನಡೆಸುವ ಅಭ್ಯಾಸವನ್ನು ತೀವ್ರವಾಗಿ ಖಂಡಿಸಿದ ಪೀಠ, ಸಂವಿಧಾನದ ಪ್ರಕಾರ ಬೆಟ್ಟಿಂಗ್ ಮತ್ತು ಜೂಜಾಟದ ಬಗ್ಗೆ ಕಾನೂನುಗಳನ್ನು ಮಾಡುವ ಏಕೈಕ ಅಧಿಕಾರ ರಾಜ್ಯಗಳಿಗೆ ಇದೆ. ಆಟವನ್ನು ಆಡಲು ಕೌಶಲ್ಯ ಅಗತ್ಯವಿದ್ದರೂ, ಅದರ ಮೇಲೆ ಹಣವನ್ನು ಪಣತೊಟ್ಟರೆ ಮಾತ್ರ ಅದು ಜೂಜಾಟದ ವರ್ಗಕ್ಕೆ ಸೇರುತ್ತದೆ ಎಂದು ಹೇಳಿದೆ.