ಬಿಹಾರದ ಖ್ಯಾತ ಶಿಕ್ಷಕ ಖಾನ್ ಸರ್ ಕೋಚಿಂಗ್ ಸೆಂಟರ್ ಮೇಲೆ ದಾಳಿ; ಫೈರಿಂಗ್: ಭದ್ರತಾ ಸಿಬ್ಬಂದಿಗೆ ಗಾಯ | Khan Sir

ಖಾನ್ ಸರ್
ಖಾನ್ ಸರ್
Published on
ಪಾಟ್ನಾ: ಬಿಹಾರದ ಪಾಟ್ನಾದ ಮುಸಲ್ಲಾಪುರ್ ಹಾತ್ ಬಳಿಯ ಶಿಕ್ಷಕ ಖಾನ್ ಸರ್(Khan Sir) ಅವರ ಕೋಚಿಂಗ್ ಸೆಂಟರ್​​ ಹೊರಗೆ ಮತ್ತು ಒಳಗೆ ಮಂಗಳವಾರ(ಜೂ. 02) ಸಂಜೆ ದಾಳಿ ನಡೆದಿದ್ದು, ಗುಂಡು ಹಾರಿಸಲಾಗಿದೆ. ಘಟನೆಯಲ್ಲಿ ಭದ್ರತಾ ಸಿಬ್ಬಂದಿಯೊಬ್ಬರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
ಘಟನೆಯ ಬಳಿಕ ಪಾಟ್ನಾ ಎಸ್‌ಎಸ್‌ಪಿ, ಎಸ್‌ಪಿ ಮತ್ತು ಹಲವಾರು ಪೊಲೀಸ್ ತಂಡಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಆರಂಭಿಸಿದ್ದಾರೆ. ಗಾಯಗೊಂಡ ಭದ್ರತಾ ಸಿಬ್ಬಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ಕುರಿತು ಮಾತನಾಡಿರುವ ಎಸ್‌ಪಿ ಕಾರ್ತಿಕೇಯ ಕೆ ಶರ್ಮಾ, ಇದು ದೈಹಿಕ ಹಲ್ಲೆಗೆ ಸಂಬಂಧಿಸಿದ ಪ್ರಕರಣ. ಕಾವಲುಗಾರನಿಗೆ ಗಾಯಗಳಾಗಿವೆ. ಅವರ ಹೇಳಿಕೆ ಮತ್ತು ಸ್ಥಳೀಯ ಹೇಳಿಕೆ ದಾಖಲಿಸಲಾಗುತ್ತಿದೆ. ತನಿಖೆಯನ್ನು ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಪ್ರತಿಸ್ಪರ್ಧಿ ಮೇಲೆ ಅನುಮಾನ

ಇನ್ನೂ ಗುಂಡಿನ ದಾಳಿ ಬಗ್ಗೆ ಪ್ರತಿಸ್ಪರ್ಧಿ ಕೋಚಿಂಗ್ ಸೆಂಟರ್ ಮೇಲೆ ಅನುಮಾನ ವ್ಯಕ್ತಪಡಿಸಿರುವ ಖಾನ್ ಸರ್, ನಾವು ಕಡಿಮೆ ಶುಲ್ಕಕ್ಕೆ ಬೋಧಿಸುತ್ತಿರುವುದು ಕೆಲವರಿಗೆ ಮುಖ್ಯ ಸಮಸ್ಯೆಯಾಗಿದೆ. ತರಗತಿಗಳು ಮುಗಿದಿದ್ದವು, ಬಿಹಾರ ಪೊಲೀಸ್ ನೇಮಕಾತಿಯ ಫಲಿತಾಂಶಗಳು ಬಂದವು, ಸಾವಿರಾರು ಜನರು ಅರ್ಹತೆ ಪಡೆದಿದ್ದಾರೆ.
ಕೆಲವು ಸಮಾಜ ವಿರೋಧಿಗಳು ನಮಗೆ ಬೆದರಿಕೆ ಹಾಕಲು ಪ್ರಾರಂಭಿಸಿದ್ದಾರೆ. ನಾವು ಕಡಿಮೆ ಶುಲ್ಕಕ್ಕೆ ಬೋಧಿಸುವುದು ಅವರಿಗೆ ಸಮಸ್ಯಯಾಗಿದೆ. ದಾಳಿಕೋರರು ಕಚೇರಿಯನ್ನು ಸಂಪೂರ್ಣವಾಗಿ ಧ್ವಂಸ ಮಾಡಿ ಗುಂಡು ಹಾರಿಸಿದ್ದಾರೆ. ಇದು ಹತ್ತಿರದ ಕೋಚಿಂಗ್ ಸೆಂಟರ್ ಜನರ ಕೆಲಸ ಆರೋಪಿಗಳನ್ನು ಗುರುತಿಸಲಾಗಿದೆ. ನಮಗೆ ಭದ್ರತೆ ಸಿಗಬೇಕು, ಆದರೆ ಅದು ಆಡಳಿತಕ್ಕೆ ಬಿಟ್ಟದ್ದು. ಘಟನೆಯ ಸಿಸಿಟಿವಿ ದೃಶ್ಯಾವಳಿಗಳನ್ನು ಹಸ್ತಾಂತರಿಸಲಾಗಿದೆ ಎಂದು ಹೇಳಿದ್ದಾರೆ (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net