ಒನ್ ಟೈಮ್ ಕ್ರಾಪ್, ವೈಬ್ರೆಂಟ್ ಲೀಡರ್

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್
Published on
ಬೆಂಗಳೂರು :ವಿಧಾನಮಂಡಲ ಮುಂಗಾರು ಅಧಿವೇಶನ ನೂತನ ಸಚಿವ ಸಂಪುಟಕ್ಕೆ ಮೊದಲ ಅಧಿವೇಶನ ಗಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಶುಕ್ರವಾರ ಕ್ಯಾಬಿನೆಟ್ ಸದಸ್ಯರನ್ನು ಸದನಕ್ಕೆ ವಿಶೇಷ ರೀತಿಯಾಗಿ ಪರಿಚಯ ಮಾಡಿಕೊಟ್ಟರು.
ಮೊದಲು ಡಾ. ಜಿ. ಪರಮೇಶ್ವರ್, ಕುರಿತು ಮಾಡನಾಡಿದ ಡಿ.ಕೆ. ಶಿವಕುಮಾರ್, ಸೀನಿಯರ್ ಮೋಸ್ಟ್ ಲೀಡರ್. ಯುವಕರು. ಯುವಜನ ಮತ್ತು ಕ್ರೀಡಾ ಇಲಾಖೆ ಪಡೆದು ಜತೆಗೆ ಕಂದಾಯ ಸೇವೆಯನ್ನೂ ಮಾಡುತ್ತಿದ್ದಾರೆ. ಕೃಷ್ಣಬೈರೇಗೌಡ ವಿದೇಶದಲ್ಲಿ ಓದಿಕೊಂಡು ಬಹಳ ಸಾಮರ್ಥ್ಯ ಹೊಂದಿರುವ ಲೀಡರ್, ಬೆಂಗಳೂರು ನಗರಾಭಿವೃದ್ಧಿ ಸಚಿವನಾಗಿ ಕಸ ಕ್ಲೀನ್ ಮಾಡಿಕೊಂಡು ಜನರಿಂದ ಬೈಯಿಸಿಕೊಳ್ಳುತ್ತಾ ಇದ್ದಾರೆ. ಯು.ಟಿ.ಖಾದರ್, ಆರೋಗ್ಯ ಸಚಿವರು. ಸ್ಪೀಕರ್ ಆಗಿ ನಮಗೆಲ್ಲ ಪಾಠ ಹೇಳುತ್ತಿದ್ದರು. ಈಗ ಹೇಗೆ ಪಾಠ ಹೇಳುತ್ತಾರೋ ನೋಡಬೇಕಾಗಿದೆ ಎಂದರು.
ಅಜಯ್ ಸಿಂಗ್, ವೈಬ್ರೆಂಟ್ ಲೀಡರ್, ಸಣ್ಣ ನೀರಾವರಿ ಸಚಿವರು. ಅವರ ತಂದೆ ಧರ್ಮಸಿಂಗ್ ನಮಗೆ ಮುಖ್ಯಮಂತ್ರಿ ಆಗಿದ್ದವರು. ಮಧು ಬಂಗಾರಪ್ಪ, ಇವರ ತಂದೆ ಬಂಗಾರಪ್ಪ ಕೆಳಗೆ ನಾನು ಕೆಲಸ ಮಾಡಿದ್ದೆ. ಈಗ ನನ್ನ ಕೈ ಕೆಳಗೆ ಅವರ ಪುತ್ರ ಸಚಿವರಾಗಿದ್ದಾರೆ.
ಬಸವರಾಜ ರಾಯರಡ್ಡಿ, 83 ಮಾಡೇಲ್. ರಾಮಕೃಷ್ಣ ಹೆಗಡೆ ಕಾಲದವರು. ಬ್ರಿಗೇಡ್ ರಸ್ತೆಯಲ್ಲಿ ಓಡಾಡಿಕೊಂಡು ಇದ್ದವರು. ಕೆ.ಎನ್. ಶಿವಲಿಂಗೇಗೌಡ, ಹಾಸನ ಜಿಲ್ಲೆಯ ಪಟ್ಟಾ ರೈತ. ಅಬಕಾರಿ ಸಚಿವರು. ಸಿ. ಪುಟ್ಟರಂಗ ಶೆಟ್ಟಿ-ರೇಷ್ಮೆ ಪಶು ಸಂಗೋಪನೆ ಸಚಿವ. ನಾನು ಮತ್ತು ಗುಲಾಂ ನಬಿ ಆಜಾದ್ ಚುನಾವಣಾ ಪ್ರಚಾರಕ್ಕೆ ಹೋದಾಗ ಪುಟ್ಟರಂಗ ಶೆಟ್ಟಿಯನ್ನು ನೋಡಿ ಡಿಕೆ ಇದು ಒನ್ ಟೈಮ್ ಕ್ರಾಪ್ ಎಂದರು. ನೋಡಿದರೆ ಮೂರು ಬಾರಿ ಕ್ರಾಪ್ ಬೆಳೆದು 2 ಬಾರಿ ಮಂತ್ರಿ ಆಗಿದ್ದಾರೆ.
ಸಂತೋಷ್ ಲಾಡ್, ಡೈನಾಮಿಕ್ ಲೆಬರ್ ಮಿನಿಸ್ಟರ್. ಕ್ರಾಂತಿಯನ್ನೇ ಮಾಡುತ್ತಿದ್ದಾರೆ. ಕೆ.ಎಸ್. ಬಸಂತಪ್ಪ, ಪೌರ ಕಾರ್ಮಿಕನ ಪುತ್ರ ಇಂದು ಮುಜರಾಯಿ ಸಚಿವರಾಗಿದ್ದಾರೆ. ದೇಶದ ಪ್ರಜಾಪ್ರಭುತ್ವದಲ್ಲಿ ಪ್ರತಿಯೊಬ್ಬರಿಗೂ ಸ್ಥಾನಮಾನ ಇದ್ದೆ ಇರಲಿದೆ. ಎಸ್.ಎಸ್. ಮಲ್ಲಿಕಾರ್ಜುನ್, ನಮ್ಮ ಧಣಿಗಳು, ಗಣಿ ಮತ್ತು ಭೂ ವಿಜ್ಞಾನ ತೋಟಗಾರಿಕೆ ಸಚಿವ ಮತ್ತು ರಿಜ್ವಾನ್ ಅರ್ಷದ್ ಯಂಗ್ ್ರೆಂಡ್. ಐದು ಪಾಲಿಕೆ ಮಾಡಿ ಬೆಂಗಳೂರಿಗೆ ಹೊಸರೂಪ ಕೊಟ್ಟವರು. ಶಾಸಕರಿಂದ ನಿಂದನೆಗೆ ಒಳಗಾದವರು ಎಂದು ಪ್ರತಿಯೊಬ್ಬ ಸಚಿವರನ್ನು ಕುರಿತು ಅವರದೇ ರೀತಿಯಲ್ಲಿ ವರ್ಣನೆ ಮಾಡಿ ಸದನಕ್ಕೆ ಪರಿಚಯ ಮಾಡಿಕೊಟ್ಟಿದ್ದು, ವಿಶೇಷವಾಗಿತ್ತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net