ಬೆಂಗಳೂರು: ಮಕ್ಕಳಲ್ಲಿ ಪುಸ್ತಕ ಪ್ರೀತಿ ಬೆಳೆಸುವ ಸಲುವಾಗಿ ಕರ್ನಾಟಕ ಕನ್ನಡ ಬರಹಗಾರರ ಮತ್ತು ಪ್ರಕಾಶಕರ ಸಂಘವು ‘ನೂರು ಶಾಲೆಗಳಿಗೆ ನೂರು ಪುಸ್ತಕ’ ಯೋಜನೆ ಹಮ್ಮಿಕೊಂಡಿದೆ.
ಹಾಸನದ ನೂರು ಸರ್ಕಾರಿ ಪ್ರಾಥಮಿಕ ಹಾಗೂ ಹಿರಿಯ ಪ್ರಾಥಮಿಕ ಶಾಲೆಗಳ ಗ್ರಂಥಾಲಯಗಳಿಗೆ ದಾನಿಗಳಿಂದ ಸಂಗ್ರಹಿಸಿದ ಒಟ್ಟು 10 ಸಾವಿರ ಉಪಯುಕ್ತ ಮಕ್ಕಳ ಪುಸ್ತಕಗಳನ್ನು ವಿತರಿಸುವ ಕಾರ್ಯಕ್ರಮವನ್ನು ಸೆ.12ರಂದು ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಅಧ್ಯಕ್ಷ ನಿಡಸಾಲೆ ಪುಟ್ಟಸ್ವಾಮಯ್ಯ ಹಾಗೂ ಕಾರ್ಯದರ್ಶಿ ಆರ್. ದೊಡ್ಡೆಗೌಡ ತಿಳಿಸಿದ್ದಾರೆ. ಈಗಾಗಲೇ 10 ಜಿಲ್ಲೆಗಳ ಸಾವಿರ ಸರ್ಕಾರಿ ಶಾಲೆಗಳಿಗೆ ಒಂದು ಲಕ್ಷ ಪುಸ್ತಕ ವಿತರಿಸಲಾಗಿದೆ. ಗುಣಮಟ್ಟದ ಮೌಲ್ಯಯುತವಾದ ಒಂದು ಶೀರ್ಷಿಕೆಯ ನೂರು ಪ್ರತಿಗಳಂತೆ ಹೆಚ್ಚು ಶೀರ್ಷಿಕೆಗಳ ಮಕ್ಕಳ ಪುಸ್ತಕಗಳನ್ನು ಬರಹಗಾರರು, ಪ್ರಕಾಶಕರು, ಸಂಘಸಂಸ್ಥೆಗಳು, ಅಕಾಡೆಮಿಗಳು, ಪುಸ್ತಕ ಪ್ರಾಧಿಕಾರ, ವಿಶ್ವವಿದ್ಯಾಲಯದ ಪ್ರಸಾರಂಗ, ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಆಸಕ್ತ ದಾನಿಗಳು ಉಚಿತವಾಗಿ ನೀಡುವ ಮೂಲಕ ಯೋಜನೆ ಯಶಸ್ವಿಯಾಗಲು ಸಹಕರಿಸಬೇಕು ಎಂದು ಮನವಿ ಮಾಡಿದ್ದಾರೆ.
ವಿಳಾಸ:
ಆರ್. ದೊಡ್ಡೇಗೌಡ, ಕಾರ್ಯದರ್ಶಿ, ಬಿ.ಎಂ. ಚಂದ್ರಕೀರ್ತಿ ಸಂಘಟನಾ ಕಾರ್ಯದರ್ಶಿ, ನಿಡಸಾಲೆ ಪಿ. ವಿಜಯ್, ಸಾಹಿತ್ಯ ಸುಗ್ಗಿ, ನಂ.40, 3ನೇ ಬ್ಲಾಕ್, 2ನೇ ಹಂತ, ನಾಗರಬಾವಿ, ಬೆಂಗಳೂರು- 72. ದೂ: 94487 53991 ಮೂಲಕ ಸಂಪರ್ಕಿಸಿದರೆ ಸಂಘದ ಪ್ರತಿನಿಧಿಗಳು ಬಂದು ಪುಸ್ತಕ ಸ್ವೀಕರಿಸುತ್ತಾರೆ.