ತೈಲ ಬೆಲೆ ಹೆಚ್ಚಳ, ನೀಟ್​ ಅಕ್ರಮ ಉತ್ತರಿಸಲಿ

,
,
Published on

ಪ್ರಮುಖ ಮುಖ್ಯಾಂಶಗಳು

  • ಮೋದಿಗೆ ಪ್ರಿಯಾಂಕ್​ ಸವಾಲು
  • ಆರ್ಥಿಕ ಸ್ಥಿತಿ ಹದಗೆಡಲು ಕಾರಣರಾರು? ಖಂಡ್ರೆ- ಖರ್ಗೆ ಕಿಡಿ
ಕಲಬುರಗಿ: ಪ್ರಧಾನಿ ನರೇಂದ್ರ ಮೋದಿ ಒಳ್ಳೆ ಸುದ್ದಿ ಇದ್ದರೆ ರಾತ್ರಿ ಬಂದು ಹೇಳ್ತಾರೆ. ತೈಲ ಬೆಲೆ ಹೆಚ್ಚಳವನ್ನು ರಾತ್ರೋ ರಾತ್ರಿ ಮಾಡಿದ್ದಾರೆ. ಪರೀಾ ಪೇ ಚರ್ಚೆ ಮಾಡುವ ಮೋದಿ ನೀಟ್​ ಅಕ್ರಮದ ಬಗ್ಗೆ ಉತ್ತರಿಸಲ್ಲ. ವಿದೇಶಕ್ಕೆ ಹೋಗುತ್ತಾರೆ. ದೇಶದ ಆರ್ಥಿಕ ಸ್ಥಿತಿ ಭೀಕರವಾಗಲಿದೆ ಎಂದು ರಾಹುಲ್​ ಗಾಂಧಿ ಸಂಸತ್ತಿನಲ್ಲಿ ಪ್ರಶ್ನಿಸಿದಾಗ ಎಲ್ಲ ಸರಿಯಾಗಿದೆ ಎಂದವರು ಈಗೇಕೆ ನೆದರ್​ಲ್ಯಾಂಡ್​ಗೆ ಹೋಗಿ ಹೇಳುತ್ತಿದ್ದಾರೆ. ಅದನ್ನೇ ಸಂಸತ್ತಿನಲ್ಲಿ ಉತ್ತರಿಸಬೇಕಿತ್ತು ಎಂದು ಸಚಿವ ಪ್ರಿಯಾಂಕ್​ ಖರ್ಗೆ ಕಿಡಿಕಾರಿದರು.
ಬಿಜೆಪಿ ನಾಯಕರು ಮೆಟ್ರೋ ಪ್ರಯಾಣ ಮಾಡುತ್ತಿದ್ದು, ಈ ಸ್ಥಿತಿಗೆ ತಂದವರು ಯಾರು ಎಂಬುದಕ್ಕೆ ಉತ್ತರ ದೊರೆಯಬೇಕಿದೆ. ಸಾಮಾನ್ಯ ಜನರಿಗೆ ಮೋದಿ ನೀತಿಯಿಂದ ಆರ್ಥಿಕ ಹೊಡೆತ ಆಗಿದೆ ಎಂಬುದನ್ನು ತಿಳಿಸಲಿ.ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಮೆಟ್ರೋ ಪ್ರಯಾಣ ಮಾಡಿದ್ರೆ ಪರಿಹಾರ ಆಗುತ್ತಾ ಎಂದು ಪತ್ರಕರ್ತರಿಗೆ ಪ್ರಶ್ನಿಸಿದರು.
ವೈಲ್ಯ ಮರೆಮಾಚಲು ಯತ್ನ: ಸಂಸತ್ತಿನಲ್ಲಿ ಎಲ್ಲ ಸಂಪನ್ಮೂಲ ಇದೆ. ನಮ್ಮಲ್ಲಿ ಪೆಟ್ರೋಲ್​, ಗ್ಯಾಸ್​, ಡೀಸೆಲ್​ ಕೊರತೆ ಇಲ್ಲ. ಚುನಾವಣೆ ಪೂರ್ವದಲ್ಲಿ ಎಲ್ಲವನ್ನು ಸರಿಯಾಗಿ ಪೂರೈಸುತ್ತೇವೆ ಎಂದಿದ್ದವರು. ಚುನಾವಣೆ ನಂತರ ವಿಷಯಾಂತರ ಮಾಡಿದ್ದಾರೆ. ಮೋದಿ ಇದೀಗ ಎಲ್ಲ ಕಡೆ ಕೊರತೆ ಕಾಣಿಸುತ್ತಿದೆ ಆರ್ಥಿಕ ಸ್ಥಿತಿ ಹದಗೆಡಲು ಕಾರಣ ಯಾರು ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ಮತ್ತು ಐಟಿ&ಬಿಟಿ ಸಚಿವ ಪ್ರಿಯಾಂಕ್​ ರ್ಖಗೆ ಟೀಕಿಸಿದರು.
"

ನೀಟ್​ ಪರೀಕ್ಷೆ ಅಕ್ರಮದಿಂದ 22 ಲಕ್ಷ ಮಕ್ಕಳ ಭವಿಷ್ಯ ಆಪತ್ತಿಗೆ ಸಿಲುಕಿದೆ. ಪದೇ ಪದೆ ನೀಟ್​ ಅಕ್ರಮ ನಡೆಯುತ್ತಿದೆ. ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ ರಾಜೀನಾಮೆ ಏಕೆ ಪಡೆಯುತ್ತಿಲ್ಲ. ನೀಟ್​, ಪುಲ್ವಾಮಾ, ಬಾಂಬ್​ ಬ್ಲಾಸ್ಟ್​ ಸೇರಿ ಯಾವುದಕ್ಕೂ ಉತ್ತರವಿಲ್ಲ, ಕ್ರಮಗಳು ಇಲ್ಲ. ಶಿಕ್ಷೆ ಯಾರಿಗೆ ಆಗಿದೆ ಎಂಬುದು ತಿಳಿಸಲಿ.

— > ಈಶ್ವರ ಖಂಡ್ರೆ, ಅರಣ್ಯ ಸಚಿವ


ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net