ವಿದ್ಯುತ್​ ಖಾಸಗೀಕರಣ ಮಾಡುವುದು ಬೇಡ

 ವಿದ್ಯುತ್​ ಖಾಸಗೀಕರಣ ವಿರೋಧಿಸಿ ಅಫಜಲಪುರ ತಹಸಿಲ್​ ಕಚೇರಿ ಎದುರು ಕರ್ನಾಟಕ ಪ್ರಾಂತ ರೈತ ಸಂಘ, ಸ್ವಾಭಿಮಾನಿ ಕಬ್ಬು ಬೆಳೆಗಾರರ ಸಂದಿಂದ ಸೋಮವಾರ ಪ್ರತಿಭಟನೆ ನಡೆಸಿ ತಹಸೀಲ್ದಾರ್​ಗೆ ಮನವಿಪತ್ರ ಸಲ್ಲಿಸಲಾಯಿತು. ಶ್ರೀಮಂತ ಬಿರಾದಾರ, ಗುರು ಚಾಂದಕವಟೆ, ರಮೇಶ ಪಾಟೀಲ್​, ಲತೀಪ್​ ಪಟೇಲ್​ ಇತರರಿದ್ದರು.
ವಿದ್ಯುತ್​ ಖಾಸಗೀಕರಣ ವಿರೋಧಿಸಿ ಅಫಜಲಪುರ ತಹಸಿಲ್​ ಕಚೇರಿ ಎದುರು ಕರ್ನಾಟಕ ಪ್ರಾಂತ ರೈತ ಸಂಘ, ಸ್ವಾಭಿಮಾನಿ ಕಬ್ಬು ಬೆಳೆಗಾರರ ಸಂದಿಂದ ಸೋಮವಾರ ಪ್ರತಿಭಟನೆ ನಡೆಸಿ ತಹಸೀಲ್ದಾರ್​ಗೆ ಮನವಿಪತ್ರ ಸಲ್ಲಿಸಲಾಯಿತು. ಶ್ರೀಮಂತ ಬಿರಾದಾರ, ಗುರು ಚಾಂದಕವಟೆ, ರಮೇಶ ಪಾಟೀಲ್​, ಲತೀಪ್​ ಪಟೇಲ್​ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಅಫಜಲಪುರದಲ್ಲಿ ಪ್ರಾಂತ ರೈತ ಸಂಘ
  • ಸ್ವಾಭಿಮಾನಿ ಕಬ್ಬು ಬೆಳೆಗಾರರ ಸಂಘದಿಂದ ಹೋರಾಟ
ಅಫಜಲಪುರ: ಕರ್ನಾಟಕದ ವಿವಿಧ ಸಾರ್ವಜನಿಕ ವಿದ್ಯುತ್​ ವಿತರಣಾ ಕಂಪನಿಯ 19 ಕಂದಾಯ ಜಿಲ್ಲೆಗಳಲ್ಲಿ ವಿದ್ಯುತ್​ ಪರವಾನಗಿ ಕೋರಿರುವ ದಿ ಟಾಟಾ ಪವರ್​ ಕಂಪನಿ ಲಿಮಿಟೆಡ್​ನ ಅರ್ಜಿ ತಿರಸ್ಕರಿಸಬೇಕು. ರೈತರ ಮತ್ತು ನಿಗಮಗಳ ನೌಕರರ ಹಿತ ಕಾಪಾಡಬೇಕು ಎಂದು ಕರ್ನಾಟಕ ಪ್ರಾಂತ ರೈತ ಸಂಘದ ತಾಲೂಕು ಅಧ್ಯಕ್ಷ ಶ್ರೀಮಂತ ಬಿರಾದಾರ ಆಗ್ರಹಿಸಿದರು.
ವಿದ್ಯುತ್​ ಖಾಸಗೀಕರಣ ವಿರೋಧಿಸಿ ತಹಸಿಲ್​ ಕಚೇರಿ ಎದುರು ಕರ್ನಾಟಕ ಪ್ರಾಂತ ರೈತ ಸಂಘ, ಸ್ವಾಭಿಮಾನಿ ಕಬ್ಬು ಬೆಳೆಗಾರರ ಸಂದಿಂದ ಸೋಮವಾರ ಹಮ್ಮಿಕೊಂಡಿದ್ದ ಹೋರಾಟದಲ್ಲಿ ಮಾತನಾಡಿ, ಮಂಗಳೂರ, ದುದ್ದಣಗಿಯಲ್ಲಿ ಪಂಪಸೆಟ್​ಗಳ ವಿದ್ಯುತ್​ ಸಂಪರ್ಕ ಕಡಿತ ಮಾಡಿರುವುದರಿಂದ ಜನ-ಜಾನುವಾರುಗಳಿಗೆ ಕುಡಿವ ನೀರಿನ ತೊಂದರೆಯಾಗುತ್ತಿದೆ. ಶ್ರೀ ಮರು ಸಂಪರ್ಕ ಮಾಡಬೇಕು. ಮುಂಗಾರು ಬಿತ್ತನೆಗಾಗಿ ರೈತರಿಗೆ ರಸಗೊಬ್ಬರ ಕೊರತೆಯಾಗದಂತೆ ಕ್ರಮವಹಿಸಬೇಕು ಎಂದು ಹೇಳಿದರು.
ತಹಸೀಲ್ದಾರ್​ ಸಂಜೀವಕುಮಾರ ದಾಸರ ಅವರಿಗೆ ಮನವಿಪತ್ರ ಸಲ್ಲಿಸಲಾಯಿತು. ಪ್ರಮುಖರಾದ ಗುರು ಚಾಂದಕವಟೆ, ರಮೇಶ ಪಾಟೀಲ್​, ಲತೀಫ್​ ಪಟೇಲ್​, ಅರ್ಜುನ ಸೋಮಜಾಳ, ಪಾಂಡು ಕುಲಕರ್ಣಿ, ಶ್ರೀಶೈಲ ದುದ್ದಣಗಿ, ಪುಂಡಲೀಕ ಸೋಲಾಪುರ, ಬಸವರಾಜ ಹೆರೂರ, ಚನ್ನವಿರಯ್ಯ ಮಠ, ವಿಠ್ಠಲ್​ ಪೂಜಾರಿ, ಶಾಂತುಗೌಡ ಪಾಟೀಲ್​, ರಾಮಣ್ಣ ಬಟೋಲಿ, ಶರಣು ನಂದಿಗೌಡ, ಸೋಮು ಪೂಜರಿ, ಶ್ರೀಶೈಲ ಬಾದನಳ್ಳಿ, ಸೋಮಯ್ಯ ಮಠ, ರಾಜು ಬೆನೂರ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net