ಸ್ಪರ್ಧಾತ್ಮಕ ಪರೀಕ್ಷೆಗೆ ಹೆದರಬೇಕಿಲ್ಲ

ಕಲಬುರಗಿ ಸಿಯುಕೆ ಸಮಾನ ಅವಕಾಶ ಕೋಶ ಮಂಗಳವಾರ ಏರ್ಪಡಿಸಿದ್ದ ಎಡಿಜಿ ಮತ್ತು ನಾಗರಿಕ ಸೇವಾ ಪರೀೆ ತರಬೇತಿ ತರಗತಿಗಳ ಉದ್ಘಾಟನೆ, ಸಂವಾದ ಕಾರ್ಯಕ್ರಮದಲ್ಲಿ ಪ್ರೊ.ಬಟ್ಟು ಸತ್ಯನಾರಾಯಣ, ಪ್ರೊ.ಆರ್​.ಆರ್​.ಬಿರಾದಾರ್​, ಡಾ.ಶರಣಪ್ಪ ಎಸ್​.ಡಿ, ಡಾ.ಬಸವರಾಜ ಸೋಮನಮರಡಿ, ಡಾ.ಕುಬಕಡ್ಡಿ ಇತರರಿದ್ದರು.
ಕಲಬುರಗಿ ಸಿಯುಕೆ ಸಮಾನ ಅವಕಾಶ ಕೋಶ ಮಂಗಳವಾರ ಏರ್ಪಡಿಸಿದ್ದ ಎಡಿಜಿ ಮತ್ತು ನಾಗರಿಕ ಸೇವಾ ಪರೀೆ ತರಬೇತಿ ತರಗತಿಗಳ ಉದ್ಘಾಟನೆ, ಸಂವಾದ ಕಾರ್ಯಕ್ರಮದಲ್ಲಿ ಪ್ರೊ.ಬಟ್ಟು ಸತ್ಯನಾರಾಯಣ, ಪ್ರೊ.ಆರ್​.ಆರ್​.ಬಿರಾದಾರ್​, ಡಾ.ಶರಣಪ್ಪ ಎಸ್​.ಡಿ, ಡಾ.ಬಸವರಾಜ ಸೋಮನಮರಡಿ, ಡಾ.ಕುಬಕಡ್ಡಿ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ವಿದ್ಯಾರ್ಥಿಗಳಿಗೆ ಸಿಯುಕೆ ಕುಲಪತಿ ಪ್ರೊ.ಬಟ್ಟು ಕಿವಿಮಾತು
  • ಯುಜಿಸಿ ನೆಟ್​&ಜೆಆರ್​ಎಫ್​ ತರಬೇತಿ
ಕಲಬುರಗಿ: ಸ್ಪರ್ಧಾತ್ಮಕ ಜಗತ್ತಿನಲ್ಲಿ ಬದುಕುತ್ತಿದ್ದೇವೆ. ಆದರೆ ವಿದ್ಯಾರ್ಥಿಗಳು ಪರೀೆಗಳಲ್ಲಿನ ಸ್ಪರ್ಧೆಗೆ ಹೆದರಬೇಕಿಲ್ಲ. ಸ್ಪರ್ಧೆಯನ್ನು ಸಕಾರಾತ್ಮಕವಾಗಿ ತೆಗೆದುಕೊಳ್ಳಬೇಕು. ಯುವಕರೇ ನಿಜವಾದ ರಾಷ್ಟ್ರ ನಿರ್ಮಾಪಕರಾಗಿದ್ದು, ವಿಕಸಿತ ಭಾರತ&2047ಗೆ ಕೊಡುಗೆ ನೀಡಲಿದ್ದಾರೆ ಎಂದು ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ ಕುಲಪತಿ ಪ್ರೊ.ಬಟ್ಟು ಸತ್ಯನಾರಾಯಣ ಹೇಳಿದರು.
ವಿವಿಯಲ್ಲಿ ಸಮಾನ ಅವಕಾಶ ಕೋಶ ಮಂಗಳವಾರ ಏರ್ಪಡಿಸಿದ್ದ ಎಡಿಜಿ ಮತ್ತು ನಾಗರಿಕ ಸೇವಾ ಪರೀೆ ತರಬೇತಿ ತರಗತಿಗಳ ಉದ್ಘಾಟನೆ ಮತ್ತು ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಮ್ಮ ವಿವಿ ಸ್ಪರ್ಧಾತ್ಮಕ ಪರೀೆಗಳಿಗೆ ಪೂರ್ಣ ಸಮಯದ ಉಚಿತ ತರಬೇತಿ ಕೇಂದ್ರ ಸ್ಥಾಪಿಸಲು ಯೋಜಿಸುತ್ತಿದೆ. ಇದು ಎಲ್ಲ ವರ್ಗದ ವಿದ್ಯಾರ್ಥಿಗಳು ವೃತ್ತೀಜಿವನದಲ್ಲಿ ಉನ್ನತ ಗುರಿ ಸಾಧಿಸಲು ನೆರವಾಗಲಿದ್ದು, ಕೇಂದ್ರ ಸರ್ಕಾರ ಸಂಪೂರ್ಣ ಬೆಂಬಲ ನೀಡುತ್ತಿದೆ ಎಂದು ತಿಳಿಸಿದರು.
ನಗರ ಪೊಲೀಸ್​ ಆಯುಕ್ತ ಡಾ.ಶರಣಪ್ಪ ಎಸ್​.ಡಿ. ಮಾತನಾಡಿ, ಯಶಸ್ಸಿಗೆ ಕಠಿಣ ಪರಿಶ್ರಮ ಮತ್ತು ಸಮರ್ಪಣೆ ಮಾತ್ರ ಮುಖ್ಯ. ನಾಗರಿಕ ಸೇವಾ ಪರೀೆಗಳಲ್ಲಿ ಯಶಸ್ಸು ಸಾಧಿಸಲು ನಮ್ಮ ಕಾರ್ಯಯೋಜನೆಯಲ್ಲಿ ಆತ್ಮಾವಲೋಕನ, ಸಕಾರಾತ್ಮಕ ಸಲಹೆ, ದೃಢನಿಶ್ಚಯ ಅಳವಡಿಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಕುಲಸಚಿವ ಪ್ರೊ.ಆರ್​.ಆರ್​. ಬಿರಾದಾರ್​ ಮಾತನಾಡಿ, ಜೀವನದಲ್ಲಿ ಕಷ್ಟಗಳೇ ಸವಾಲುಗಳು. ಯಾವುದೂ ಅಸಾಧ್ಯವಲ್ಲ. ನಾವು ಜ್ಞಾನದ ಯುಗದಲ್ಲಿದ್ದೇವೆ. ಜ್ಞಾನವು ಕಠಿಣ ಪರಿಶ್ರಮಿಗಳ ಆಸ್ತಿ. ವಿದ್ಯಾರ್ಥಿಗಳು ಜೀವನದಲ್ಲಿ ಉನ್ನತ ಸಾಧನೆ ಮಾಡಲು ವಿಶ್ವವಿದ್ಯಾಲಯ ಬೆಂಬಲ ನೀಡುತ್ತಿದ್ದು, ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.
ವಿದ್ಯಾರ್ಥಿ ಕಲ್ಯಾಣ ವಿಭಾಗದ ಡೀನ್​ ಡಾ.ಕುಬಕಡ್ಡಿ ಮಾತನಾಡಿ, ವಿದ್ಯಾರ್ಥಿಯ ಭಾಷೆ ಮತ್ತು ಹಿನ್ನೆಲೆ ಸಾಧನೆಗೆ ಅಡ್ಡಿಯಾಗುವುದಿಲ್ಲ ಎಂದು ಹೇಳಿದರು.
ಮುಖ್ಯ ವಾರ್ಡನ್​ ಡಾ.ಬಸವರಾಜ ಸೋಮನಮರಡಿ, ಪ್ರೊ.ಪಾಂಡುರಂಗ, ಪ್ರೊ.ಪಾಸೋಡಿ, ಪ್ರೊ.ಪಾಂಡೆ, ಪ್ರೊ.ಅಂಗಡಿ, ಡಾ.ರಾಜಶ್ರೀ ಇತರರಿದ್ದರು. ಕಾರ್ಯಕ್ರಮದ ಸಂಯೋಜಕ ಪ್ರೊ.ದೇವರಾಜಪ್ಪ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಸಂಗೀತ ವಿಭಾಗದ ವಿದ್ಯಾರ್ಥಿನಿ ರಾಷ್ಟ್ರಗೀತೆ ಹಾಡಿದರು. ಡಾ.ಶೈಲಜಾ ಕೊನೇಕ್​ ನಿರೂಪಣೆ ಮಾಡಿದರು. ಡಾ.ರಂಗನಾಥಮ್​ ವಂದಿಸಿದರು.
"

ಕಾನೂನುಬದ್ಧ ಅಧಿಕಾರ ಸಮಾಜದಲ್ಲಿ ಬದಲಾವಣೆ ತರಬಹುದು. ಬಡವರ ಕಣ್ಣೀರು ಒರೆಸಲು ಮತ್ತು ನಿರ್ಗತಿಕರ ಸಹಾಯ ಮಾಡಲು ನಾಗರಿಕ ಸೇವೆ ಒಂದು ಉತ್ತಮ ಅವಕಾಶ.

> ಡಾ.ಶರಣಪ್ಪ ಎಸ್​.ಡಿ.

ನಗರ ಪೊಲೀಸ್​ ಆಯುಕ್ತ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net