2026-27ನೇ ಸಾಲಿನ ಮೊದಲ ದಿನದಿಂದಲೇ ಜಾರಿಗೊಳಿಸಲು ‘ನಿರಂತರ’ ಎಂಬ ಮೊಬೈಲ್ ಆೃಪ್ ಸಿದ್ಧ
ಈ ಕಾರ್ಯಕ್ರಮದ ಜಾರಿಗೆ 2.16 ಕೋಟಿ ರೂ.ಗಳನ್ನು ಶಾಲಾ ಶಿಕ್ಷಣ ಇಲಾಖೆಯು ಬಿಡುಗಡೆ
ಸರ್ಕಾರಿ ಮತ್ತು ಅನುದಾನಿತ ಶಾಲಾ ಮಕ್ಕಳ ಮುಖಚಹರೆ ಆಧಾರಿತ ಹಾಜರಾತಿ
ಬೆಂಗಳೂರು: ಸರ್ಕಾರಿ ಮತ್ತು ಅನುದಾನಿತ ಶಾಲಾ ಮಕ್ಕಳ ಮುಖಚಹರೆ ಆಧಾರಿತ ಹಾಜರಾತಿಯನ್ನು 2026-27ನೇ ಸಾಲಿನ ಮೊದಲ ದಿನದಿಂದಲೇ ಜಾರಿಗೊಳಿಸಲು ‘ನಿರಂತರ’ ಎಂಬ ಮೊಬೈಲ್ ಆೃಪ್ ಸಿದ್ಧಪಡಿಸಿದ್ದು, ಈ ಕಾರ್ಯಕ್ರಮದ ಜಾರಿಗೆ 2.16 ಕೋಟಿ ರೂ.ಗಳನ್ನು ಶಾಲಾ ಶಿಕ್ಷಣ ಇಲಾಖೆಯು ಬಿಡುಗಡೆ ಮಾಡಿದೆ.
ಕೃತಕ ಬುದ್ಧಿಮತ್ತೆ ಆಧಾರಿತ ವಿದ್ಯಾರ್ಥಿಗಳ ಮುಖಚಹರೆಯನ್ನು ನಿರ್ವಹಿಸುವ ಮೊಬೈಲ್ ಅಪ್ಲಿಕೇಷನ್ ವ್ಯವಸ್ಥೆ ಇದಾಗಿದೆ. ಮುಂದಿನ ಶೈಕ್ಷಣಿಕ ವರ್ಷದ ಆರಂಭದಿಂದಲೇ ಒಂದರಿಂದ ದ್ವಿತೀಯ ಪಿಯುಸಿವರೆಗೆ ಕಡ್ಡಾಯವಾಗಿ ಎಲ್ಲ ಸರ್ಕಾರಿ ಮತ್ತು ಅನುದಾನಿತ ಶಾಲಾ ಕಾಲೇಜುಗಳಲ್ಲಿ ಅನುಷ್ಠಾನಗೊಳಿಸುವಂತೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ವಿಶೇಷಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ.
ವಿದ್ಯಾರ್ಥಿಗಳ ನೋಂದಣಿಯನ್ನು ಸ್ಯಾಟ್ಸ್ ತಂತ್ರಾಂಶದೊಂದಿಗೆ ಕಡ್ಡಾಯವಾಗಿ ದೃಢೀಕರಣ ಮಾಡಬೇಕು. ಇದಕ್ಕೆ ಅವಶ್ಯವಿರುವ ದತ್ತಾಂಶಗಳನ್ನು ಸಂಬಂಧಪಟ್ಟ ಇಲಾಖಾ ಮುಖ್ಯಸ್ಥರಿಗೆ ಇ- ಆಡಳಿತ ಕೇಂದ್ರಕ್ಕೆ ಒದಗಿಸಬೇಕು. ವಿದ್ಯಾರ್ಥಿಗಳು ಶಾಲಾ/ಕಾಲೇಜಿನಿಂದ ಹೊರಗುಳಿಯದಂತೆ ಟ್ರ್ಯಾಕ್ ಮಾಡಲು ಹಾಗೂ ವಿದ್ಯಾರ್ಥಿಗಳು ಶಾಲೆಯಿಂದ ಹೊರಗುಳಿಯದಂತೆ ಈ ತಂತ್ರಾಂಶದ ನೆರವಿನಿಂದ ಕ್ರಮ ವಹಿಸಬಹುದಾಗಿದೆ.
ವಿವಿಧ ಪ್ರೋತ್ಸಾಹಕ ವಿದ್ಯಾರ್ಥಿಗಳ ಯೋಜನೆಗಳಿಗೆ ಮಕ್ಕಳ ದಾಖಲಾತಿಯನ್ನು ಹೆಚ್ಚಾಗಿ ತೋರಿಸುವುದನ್ನು ಕಾನೂನು ಬಾಃಇರ ಕೃತ್ಯವೆಂದು ಪರಿಗಣಿಸಲಾಗುತ್ತದೆ ಎಂಬ ಎಚ್ಚರಿಕೆ ನೀಡಲಾಗಿದೆ.