ಮುಂದಿನ 20 ವರ್ಷ ನಗರದ ಯಾವ ಭಾಗದಲ್ಲಿ ಜನಸಂಖ್ಯೆ ಜಾಸ್ತಿಯಾಗಲಿದೆ, ಒಳಚರಂಡಿ, ಕುಡಿಯವ ನೀರು, ವಿದ್ಯುತ್, ರಸ್ತೆ ಅಗಲೀಕರಣ, ಭೂಬಳಕೆ, ವಸತಿ, ವಾಣಿಜ್ಯ, ಸಾರಿಗೆ, ನೀರು, ಘನತ್ಯಾಜ್ಯ ನಿರ್ವಹಣೆ ಮತ್ತು ಹಸಿರು ವಲಯ ಸೇರಿ ಇತ್ಯಾದಿ ಅಂಶಗಳ ಆಧಾರದಲ್ಲಿ ಸಿಡಿಪಿ ತಯಾರಿಸಲಾಗುತ್ತದೆ. ನಗರದ ಭವಿಷ್ಯದ ಬೆಳವಣಿಗೆಯನ್ನು ನಕ್ಷೆ ಮಾಡುವ ಶಾಸನಬದ್ಧ ದಾಖಲೆ ಸಿಡಿಪಿಯಾಗಿದೆ. ಹಸಿರು ವಲಯಗಳಿಗೆ ಸಂಬಂಧಿಸಿದಂತೆ ಕಾನೂನು, ಕಾರ್ಯತಂತ್ರದ ನೀಲಿನಕ್ಷೆ ಕಾರ್ಯನಿರ್ವಹಿಸಲಿದೆ. ಕಾನೂನು, ಯೋಜಿತ, ಅನುಮೋದಿತ ಭೂಬಳಕೆ ನಿರ್ಧರಿಸಲಾಗುತ್ತದೆ. ಆರ್‌ಎಂಪಿ ಸಿದ್ಧವಾದ ಬಳಿಕ ವಲಯ ವಿಗಂಡಣೆ, ರಸ್ತೆ ವಿಸ್ತರಣೆ, ಭೂಬಳಕೆ, ವಾಣಿಜ್ಯ, ವಸತಿ ಮತ್ತು ಕೈಗರಿಕಾ ಪ್ರದೇಶದ ವಿಸ್ತರಣೆ, ರಸ್ತೆಗಳ ವಿಸ್ತೀರ್ಣ, ಉದ್ಯಾನ, ಸಾರ್ವಜನಿಕ ಮೂಲಸೌಕರ್ಯಕ್ಕೆ ಅಗತ್ಯವಿರುವ ಜಮೀನನ್ನು ಕಾಯ್ದಿರಿಸಲಾಗುತ್ತದೆ. ಸಂಚಾರಸಿಕ್ಕು, ಪ್ರವಾಹ ಪರಿಸ್ಥಿತಿ, ನೀರಿನ ಅಭಾವ ಮತ್ತು ಅನಿಯಂತ್ರಿತ ನಗರೀಕರಣ ತಡೆಗಟ್ಟಲು ಈ ಯೋಜನೆ ಒತ್ತು ನೀಡಲಿದೆ.