ಕಾಂಗ್ರೆಸ್​ ಸಂಘಟನೆ ಬಲಪಡಿಸುವ ಅಗತ್ಯ

ಹಳ್ಳಿಖೇಡ(ಬಿ)ದಲ್ಲಿ ಗುರುವಾರ ಆಯೋಜಿಸಿದ್ದ ಜಿಪಂ ವೃತ್ತದ ಕಾಂಗ್ರೆಸ್​ ಕಾರ್ಯಕರ್ತರ ಸಮಾವೇಶವನ್ನು ಮಾಜಿ ಸಚಿವ ರಾಜಶೇಖರ ಪಾಟೀಲ್​ ಉದ್ಘಾಟಿಸಿದರು. ಅರವಿಂದ ಅರಳಿ, ಅಭಿಷೇಕ ಪಾಟೀಲ್​, ಧನರಾಜ ತಾಳಂಪಳ್ಳಿ, ಕೇಶವರಾವ ತಳಟಕರ, ದಿಲೀಪಕುಮಾರ ತಾಳಂಪಳ್ಳಿ, ಲಕ್ಷ$್ಮಣರಾವ ಬುಳ್ಳಾ, ಮಲ್ಲಿಕಾರ್ಜುನ ಪ್ರಭಾ, ರಮೇಶ ಡಾಕುಳಗಿ ಇತರರಿದ್ದರು.
ಹಳ್ಳಿಖೇಡ(ಬಿ)ದಲ್ಲಿ ಗುರುವಾರ ಆಯೋಜಿಸಿದ್ದ ಜಿಪಂ ವೃತ್ತದ ಕಾಂಗ್ರೆಸ್​ ಕಾರ್ಯಕರ್ತರ ಸಮಾವೇಶವನ್ನು ಮಾಜಿ ಸಚಿವ ರಾಜಶೇಖರ ಪಾಟೀಲ್​ ಉದ್ಘಾಟಿಸಿದರು. ಅರವಿಂದ ಅರಳಿ, ಅಭಿಷೇಕ ಪಾಟೀಲ್​, ಧನರಾಜ ತಾಳಂಪಳ್ಳಿ, ಕೇಶವರಾವ ತಳಟಕರ, ದಿಲೀಪಕುಮಾರ ತಾಳಂಪಳ್ಳಿ, ಲಕ್ಷ$್ಮಣರಾವ ಬುಳ್ಳಾ, ಮಲ್ಲಿಕಾರ್ಜುನ ಪ್ರಭಾ, ರಮೇಶ ಡಾಕುಳಗಿ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಮಾಜಿ ಸಚಿವ ರಾಜಶೇಖರ ಪಾಟೀಲ್​ ಅಭಿಪ್ರಾಯ
  • ಹಳ್ಳಿಖೇಡ(ಬಿ)ದಲ್ಲಿ ಕಾರ್ಯಕರ್ತರ ಬೃಹತ್​ ಸಮಾವೇಶ
ಹುಮನಾಬಾದ್​: ಮುಂಬರುವ ಎಲ್ಲ ಚುನಾವಣೆಗಳನ್ನು ಗಮನದಲ್ಲಿ ಇಟ್ಟುಕೊಂಡು ಇಂದಿನಿಂದಲೇ ಕಾರ್ಯಕರ್ತರು, ಮುಖಂಡರು ಬೂತ್​ ಮಟ್ಟದಿಂದ ಕಾಂಗ್ರೆಸ್​ ಸಂಟನೆಗೆ ಬಲಪಡಿಸುವಲ್ಲಿ ತೊಡಗಿಸಿಕೊಳ್ಳಬೇಕು ಎಂದು ಮಾಜಿ ಸಚಿವ ರಾಜಶೇಖರ ಪಾಟೀಲ್​ ಹೇಳಿದರು.
ಹಳ್ಳಿಖೇಡ(ಬಿ)ದ ಜಿ.ಎಸ್​. ತೀರ್ಥ ಕಲ್ಯಾಣ ಮಂಟಪದಲ್ಲಿ ಗುರುವಾರ ಬ್ಲಾಕ್​ ಕಾಂಗ್ರೆಸ್​ ಸಮಿತಿ ಆಯೋಜಿಸಿದ್ದ ಹಳ್ಳಿಖೇಡ(ಬಿ) ಜಿಲ್ಲಾ ಪಂಚಾಯಿತಿ ವೃತ್ತದ ಕಾರ್ಯಕರ್ತರ ಬೃಹತ್​ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಕಳೆದುಹೋದ ಸಮಯ ಮರೆತು ಮುಂಬರುವ ಎಲ್ಲ ಹಂತದ ಚುನಾವಣೆಗಳಲ್ಲಿ ಪದ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಂಡು ಬರುವ ನಿಟ್ಟಿನಲ್ಲಿ ಕಾರ್ಯಕರ್ತರು, ಮುಖಂಡರು ತಮ್ಮ ತಮ್ಮಲ್ಲಿರುವ ಸಣ್ಣಪುಟ್ಟ ಭಿನ್ನಾಭಿಪ್ರಾಯ ಬದಿಗೊತ್ತಿ ಸಂಟನೆಗೆ ಶ್ರಮಿಸಬೇಕೆಂದು ಕರೆ ನೀಡಿದರು.
ನಾನು ಶಾಸಕನಾಗಿದ್ದಾಗ ಈ ಭಾಗ ಮತ್ತು ೇತ್ರದಲ್ಲಿ ಹಲವಾರು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದೇನೆ. ಇದೀಗ ಅಧಿಕಾರದಲ್ಲಿ ಇಲ್ಲದಿದ್ದರೂ ಜನರ ಮಧ್ಯೆ ಸದಾ ಇದ್ದು ಸೇವೆ ಸಲ್ಲಿಸುವ ಕೆಲಸ ಮುಂದುವರಿಸಿದ್ದೇನೆ. ರಾಜ್ಯ ಸರ್ಕಾರದ ಜನಪರ ಯೋಜನೆ, ಪಂಚ ಗ್ಯಾರಂಟಿಗಳು ಬಡ ಜನತೆಗೆ ಸಾಕಷ್ಟು ಉಪಯುಕ್ತವಾಗಿವೆ ಎಂದರು.
ೇತ್ರದ ಜನತೆಗೆ ನಿಜ ಯಾವುದು, ಸುಳ್ಳು ಯಾವುದು ಎಂಬುದು ಗೊತ್ತಿದೆ. ಬರುವ ದಿನಗಳು ಉತ್ತಮವಾಗಿದ್ದು, ಈಗಿನಿಂದಲೇ ಕಾರ್ಯಕರ್ತರು ಹುಮ್ಮಸ್ಸಿನಿಂದ ಸರ್ಕಾರದ ಯೋಜನೆಗಳ ಲಾಭ ಜನತೆಗೆ ತಲುಪಿಸುವ ಮೂಲಕ ವ್ಯಾಪಕ ಪ್ರಚಾರ ನಡೆಸಿ ಸಂಟನೆಗೆ ಒತ್ತು ನೀಡಬೇಕು ಎಂದು ಹೇಳಿದರು.
ವಿಧಾನ ಪರಿಷತ್​ ಸದಸ್ಯರಾದ ಡಾ.ಚಂದ್ರಶೇಖರ ಪಾಟೀಲ್​, ಭೀಮರಾವ ಪಾಟೀಲ್​, ಮಾಜಿ ಎಂಎಲ್​ಸಿ ಅರವಿಂದ ಅರಳಿ, ಕೆಪಿಸಿಸಿ ಸಹಕಾರ ವಿಭಾಗದ ಅಧ್ಯ ಧನರಾಜ ತಾಳಂಪಳ್ಳಿ, ಮುಖಂಡರಾದ ಗುಂಡುರೆಡ್ಡಿ ಕಮಲಾಪುರೆ, ಕೇಶವರಾವ ತಳಟಕರ, ರಮೇಶ ಡಾಕುಳಗಿ, ಮಲ್ಲಿಕಾರ್ಜುನ ಪ್ರಭಾ ಇತರರು ಮಾತನಾಡಿ, ೇತ್ರದ ಅಭಿವೃದ್ಧಿಗೆ ಮಾಜಿ ಸಚಿವ ರಾಜಶೇಖರ ಪಾಟೀಲ್​ ಸಾಕಷ್ಟು ಶ್ರಮಿಸಿದ್ದಾರೆ. ಮುಂದೆ ಅವರು ಅಧಿಕಾರಕ್ಕೆ ಬರುವುದು ಶತಸಿದ್ಧ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಪದ ಪ್ರತಿಯೊಬ್ಬ ಕಾರ್ಯಕರ್ತ ೇತ್ರದ ಪ್ರತಿ ಬೂತ್​ ಮಟ್ಟದಲ್ಲಿ ಕಾಂಗ್ರೆಸ್​ ಸಂಟನೆಯನ್ನು ಇನ್ನಷ್ಟು ಬಲಪಡಿಸಲು ಮುಂದಾಗಬೇಕು. ಕಾರ್ಯಕರ್ತರನ್ನು ಸಕ್ರಿಯಗೊಳಿಸಿ ಪದ ತತ್ವ ಸಿದ್ಧಾಂತ ಹಾಗೂ ಸರ್ಕಾರದ ಯೋಜನೆಗಳನ್ನು ಜನರಿಗೆ ಪರಿಣಾಮಕಾರಿಯಾಗಿ ತಲುಪಿಸಬೇಕು ಎಂದು ಕೋರಿದರು.
ಪ್ರಮುಖರಾದ ಅಭಿಷೇಕ ಪಾಟೀಲ್​, ದಿಲೀಪಕುಮಾರ ತಾಳಂಪಳ್ಳಿ, ಮಹಾಂತಯ್ಯ ತೀರ್ಥ, ಲಕ್ಷ$್ಮಣರಾವ ಬುಳ್ಳಾ, ರಾಜಶೇಖರ ಪಾಟೀಲ್​ ಮದರಗಾಂವ, ಶಿವರಾಜ ಗಂಗಶೆಟ್ಟಿ, ಇಸೂಫ್​ ಸೌದಾಗರ್​, ನಾಗರಾಜ ಹಿಬಾರೆ, ಆರಿಫ್​ ಬಾವಗಿ, ರಜಾಕ್​, ವಿಜಯಕುಮಾರ ಶಹಾಪುರಕರ್​, ಅಫ್ಸರ್​ಮಿಯಾ, ಓಂಕಾರ ತುಂಬಾ ಇತರರಿದ್ದರು.

ಬೀದರ್​ ಸಹಕಾರ ಸಕ್ಕರೆ ಕಾರ್ಖಾನೆಯನ್ನು ಪುನಶ್ಚೇತನಗೊಳಿಸುವ ನಿಟ್ಟಿನಲ್ಲಿ ಲೀಜ್​ಗೆ ಕೊಟ್ಟು ಪ್ರಾರಂಭಿಸಬೇಕೆಂದು ಇತ್ತೀಚೆಗೆ ಜಿಲ್ಲೆಗೆ ಆಗಮಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದ್ದು, ಜಿಲ್ಲೆಯ ಎಲ್ಲ ಜನಪ್ರತಿನಿಧಿಗಳೊಂದಿಗೆ ಇನ್ನಷ್ಟು ಒತ್ತಡ ಹೇರಲಾಗುವುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net