ವಿಶ್ವವೇ ಭಾರತದತ್ತ ನೋಡುವಂತೆ ಮಾಡಿದ ನಮೋ

ದೀರ್ಘಾವಧಿ ಪ್ರಧಾನಿಯಾಗಿ ನರೇಂದ್ರ ಮೋದಿ ಹೊಸ ದಾಖಲೆ ನಿರ್ಮಿಸಿದ್ದಕ್ಕೆ ಸೇಡಂನ ಶ್ರೀ ಕೊತ್ತಲ ಬಸವೇಶ್ವರ ದೇವಾಲಯದಲ್ಲಿ ಮಾಜಿ ಶಾಸಕ ರಾಜಕುಮಾರ ಪಾಟೀಲ್​ ತೆಲ್ಕೂರ ನೇತೃತ್ವದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು. ಶ್ರೀ ಸದಾಶಿವ ಸ್ವಾಮೀಜಿ, ಸಂತೋಷಿರಾಣಿ ಪಾಟೀಲ್​, ಓಂಪ್ರಕಾಶ ಪಾಟೀಲ್​, ಶಿವಶರಣಪ್ಪ ಇತರರಿದ್ದರು.
ದೀರ್ಘಾವಧಿ ಪ್ರಧಾನಿಯಾಗಿ ನರೇಂದ್ರ ಮೋದಿ ಹೊಸ ದಾಖಲೆ ನಿರ್ಮಿಸಿದ್ದಕ್ಕೆ ಸೇಡಂನ ಶ್ರೀ ಕೊತ್ತಲ ಬಸವೇಶ್ವರ ದೇವಾಲಯದಲ್ಲಿ ಮಾಜಿ ಶಾಸಕ ರಾಜಕುಮಾರ ಪಾಟೀಲ್​ ತೆಲ್ಕೂರ ನೇತೃತ್ವದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು. ಶ್ರೀ ಸದಾಶಿವ ಸ್ವಾಮೀಜಿ, ಸಂತೋಷಿರಾಣಿ ಪಾಟೀಲ್​, ಓಂಪ್ರಕಾಶ ಪಾಟೀಲ್​, ಶಿವಶರಣಪ್ಪ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಮಾಜಿ ಶಾಸಕ ರಾಜಕುಮಾರ ಪಾಟೀಲ್​ ಬಣ್ಣನೆ
  • ದೀರ್ಘಾವಧಿ ಪ್ರಧಾನಿ, ಸೇಡಂನಲ್ಲಿ ವಿಶೇಷ ಪೂಜೆ
ಸೇಡಂ: ಪ್ರಧಾನಿ ನರೇಂದ್ರ ಮೋದಿ ಅವರು ಅಭಿವೃದ್ಧಿ ಜತೆಗೆ ಭಾರತಕ್ಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮನ್ನಣೆ ತಂದುಕೊಡುವ ಮೂಲಕ ಇಡೀ ಜಗತ್ತು ದೇಶದತ್ತ ತಿರುಗಿ ನೋಡುವಂತೆ ಮಾಡಿದ್ದಾರೆ ಎಂದು ಮಾಜಿ ಶಾಸಕ ರಾಜಕುಮಾರ ಪಾಟೀಲ್​ ತೆಲ್ಕೂರ ಬಣ್ಣಿಸಿದರು.
ದೀರ್ಘಾವಧಿಗೆ ಪ್ರಧಾನಿಯಾಗಿ ನರೇಂದ್ರ ಮೋದಿ ಅವರು ಹೊಸ ದಾಖಲೆ ನಿರ್ಮಿಸಿದ್ದಕ್ಕೆ ಶ್ರೀ ಕೊತ್ತಲ ಬಸವೇಶ್ವರ ದೇವಾಲಯದಲ್ಲಿ ಬುಧವಾರ ವಿಶೇಷ ಪೂಜೆ ನೆರವೇರಿಸಿ ಮಾತನಾಡಿ, ಭಾರತೀಯರಾದ ನಾವೆಲ್ಲರೂ ಸುವರ್ಣ ಯುಗದಲ್ಲಿದ್ದೇವೆ. ನಮೋ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದಾಗಿನಿಂದ ದೇಶ ಹಿಂದಿರುಗಿ ನೋಡಿಲ್ಲ. ಕೋವಿಡ್​ ಅಲೆಯಲ್ಲಿ ಅನೇಕ ದೇಶಗಳು ಆರ್ಥಿಕವಾಗಿ ನೆಲಕಚ್ಚಿದ್ದು, ಭಾರತ ಮಾತ್ರ ಸ್ಥಿರತೆ ಕಾಪಾಡಿಕೊಂಡಿತ್ತು. ಕೋವಿಡ್​ ಮಹಾಮಾರಿಗೆ ಲಸಿಕೆ ಕಂಡುಹಿಡಿಯುವ ಕೆಲಸ ಮಾಡಿದ್ದು ಮೋದಿ ಸರ್ಕಾರ ಎಂದು ಶ್ಲಾಸಿದರು.
ಶ್ರೀ ಕೊತ್ತಲ ಬಸವೇಶ್ವರ ದೇವಾಲಯದ ಶ್ರೀ ಸದಾಶಿವ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಬಿಜೆಪಿ ಜಿಲ್ಲಾ ಉಪಾಧ್ಯೆ ಸಂತೋಷಿರಾಣಿ ಪಾಟೀಲ್​ ತೆಲ್ಕೂರ, ಕಾರ್ಯದರ್ಶಿ ಓಂಪ್ರಕಾಶ ಪಾಟೀಲ್​, ತಾಲೂಕು ಅಧ್ಯಕ್ಷ ಶಿವಶರಣಪ್ಪ, ಪ್ರಮುಖರಾದ ವೆಂಕಟೇಶ ಪಾಟೀಲ್​, ವೀರೇಶ ಹೂಗಾರ, ತಿರುಪತಿ ಶಹಾಬಾದಕರ್​, ರಾವೇಂದ್ರ ಮೆಕಾನಿಕ್​, ರಾಮು ನಾಯಕ ರಾಠೋಡ್​, ಶ್ರೀಮಂತ ಅವಂಟಿ, ಶಿವಾನಂದಸ್ವಾಮಿ, ರಾಮು ಕಣೇಕಲ್​, ನೀಲಾಧರ ಶೆಟ್ಟಿ, ರಾಜು ಗುತ್ತೇದಾರ್​, ಸುರೇಶ ಆಡಕಿ, ಹಣಮಂತ ಭರತನೂರ, ಪರಮೇಶ್ವರ ತೇಗಲತಿಪ್ಪಿ, ಭೀಮು ನಾಯಕ್​, ನಾಗು ಸಾಹುಕಾರ, ರವೀಂದ್ರ ಭಂಟನಳ್ಳಿ, ಸಂದೀಪ ಪ್ಯಾಟಿ, ಮಹಾವೀರ ಅಳ್ಳೊಳ್ಳಿ, ವಿಷ್ಣು ಊಡಗಿ, ಮಹಾದೇವ ಗೋಣಿ, ಸಿದ್ದಲಿಂಗ ಗೌತಮ್​, ನಾಗರಾಜ ಹಾಬಾಳ, ಶೈಲಜಾ ಹಿತ್ತಲ್​, ಚನ್ನಮ್ಮ ಪಾಟೀಲ್​, ಶೋಭಾದೇವಿ ಹೂಗಾರ, ಶಿಲ್ಪಾ ಮಾಲಿಪಾಟೀಲ್​, ಮಹಾನಂದಾ ಸಾಹು, ಬಸವರಾಜೇಶ್ವರಿ, ಆರತಿ ನಿಷ್ಟಿ, ವಿಜಯಲಕ್ಷಿ$್ಮ, ವಾಣಿ ದೇಶಕ್​ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net