ನನ್ನ ಅಂಬೇಡ್ಕರ್​ ನಾಟಕ ಪ್ರದರ್ಶನ 25ರಂದು

ಎ.ಬಿ.ಹೊಸಮನಿ
ಎ.ಬಿ.ಹೊಸಮನಿ
Published on
ಕಲಬುರಗಿ: ನಗರದ ಡಾ.ಎಸ್​.ಎಂ.ಪಂಡಿತ್​ ರಂಗಮಂದಿರದಲ್ಲಿ ಮೇ 25ರಂದು ಸಂಜೆ 4ಕ್ಕೆ ಬುದ್ಧ, ಬಸವ, ಅಂಬೇಡ್ಕರ್​ ಜಯಂತ್ಯುತ್ಸವ ಮತ್ತು ಡಾ.ಬಿ.ಆರ್​.ಅಂಬೇಡ್ಕರ್​ ಜೀವನಾಧಾರಿತ ನನ್ನ ಅಂಬೇಡ್ಕರ್​ ನಾಟಕ ಪ್ರದರ್ಶನ ನಡೆಯಲಿದೆ ಎಂದು ಆರ್​ಪಿಐ ದಕ್ಷಿಣ ಭಾರತ ಪ್ರಧಾನ ಕಾರ್ಯದರ್ಶಿ ಎ.ಬಿ.ಹೊಸಮನಿ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆರ್​ಪಿಐ ಮತ್ತು ಸಮತಾ ಸೈನಿಕದಳದ ಸಹಯೋಗದಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.
ಆರ್​ಪಿಐ ರಾಷ್ಟ್ರೀಯ ಅಧ್ಯರೂ ಆಗಿರುವ ಕೇಂದ್ರ ಸಚಿವ ರಾಮದಾಸ್​ ಅಠವಲೆ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಪಕ್ಷದ ರಾಷ್ಟ್ರೀಯ ಕಾರ್ಯಾಧ್ಯ ಎಂ.ವೆಂಕಟಸ್ವಾಮಿ ಅಧ್ಯಕ್ಷತೆ ವಹಿಸಲಿದ್ದು, ಬೀದರ್​ನ ಭಂತೆ ರೇವಂತ್​, ಬಸವಕಲ್ಯಾಣದ ಸಿದ್ಧರಾಮ ಬೆಲ್ದಾಳ ಶರಣರು, ಮೈಸೂರಿನ ಉರಿಲಿಂಗ ಪೆದ್ದಿಮಠದ ಜ್ಞಾನಪ್ರಕಾಶ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ ಎಂದರು.
ವಿವಿಧ ಕ್ಷೆತ್ರಗಳಲ್ಲಿ ಗಣನೀಯ ಸಾಧನೆಗೈದ ಪ್ರಮುಖರಾದ ಸಿದ್ಧರಾಮ ಬೆಲ್ದಾಳ ಶರಣರು, ಬಸಣ್ಣ ಸಿಂಗೆ, ಹನುಮಂತರಾವ ದೊಡ್ಡಮನಿ, ಶಿವರಾಯ ದೊಡ್ಡಮನಿ ಹಾಗೂ ಎ.ಬಿ.ಹೊಸಮನಿ ಅವರಿಗೆ ಸನ್ಮಾನಿಸಿ ಗೌರವಿಸಲಾಗುವುದು ಎಂದು ತಿಳಿಸಿದರು.
ಕಾರ್ಯಕ್ರಮದ ನಂತರ ಡಾ.ಬಿ.ಆರ್​.ಅಂಬೇಡ್ಕರ್​ ಜೀವನಾಧಾರಿತ ನನ್ನ ಅಂಬೇಡ್ಕರ್​ ನಾಟಕ ಪ್ರದರ್ಶನಗೊಳ್ಳಲಿದೆ. ಕೋಟಿಗಾನಹಳ್ಳಿ ರಾಮಯ್ಯ ರಚಿಸಿರುವ ಈ ನಾಟಕಕ್ಕೆ ಬೆಳಗಾವಿಯ ಬಾಬಾಸಾಹೇಬ ಕಾಂಬಳೆ ನಿರ್ದೇಶನ ನೀಡಿದ್ದಾರೆ. ಸುಮಾರು 50 ಕಲಾವಿದರು ಅಂಬೇಡ್ಕರ್​ ಜೀವನದ ಮಹತ್ವಾಕಾಂ ಟನೆಗಳನ್ನು ರಂಗದ ಮೇಲೆ ಪ್ರದರ್ಶಿಸಲಿದ್ದಾರೆ ಎಂದರು.
ಡಿ.ಜೆ ಸಂಸತಿಗೆ ಪರ್ಯಾಯವಾಗಿ ವೈಚಾರಿಕ ನಾಟಕ ಇತ್ತೀಚಿನ ದಿನಗಳಲ್ಲಿ ಬುದ್ಧ, ಬಸವ, ಅಂಬೇಡ್ಕರ್​ ಜಯಂತಿಗಳಲ್ಲಿ ಡಿ.ಜೆ ಸಂಸತಿ ಹೆಚ್ಚಾಗುತ್ತಿದೆ. ಆದರೆ, ಡಿ.ಜೆ ಸಂಸತಿಯಿಂದ ಈ ಮಹನೀಯರ ಉದಾತ್ತ ಸಿದ್ಧಾಂತ ಸಮಾಜಕ್ಕೆ ಪಸರಿಸಲು ಸಾಧ್ಯವಿಲ್ಲ. ಹೀಗಾಗಿ, ನಾಟಕದಂತಹ ಕಲಾ ಪ್ರಕಾರದ ಮೂಲಕ ಅವರ ವ್ಯಕ್ತಿತ್ವ ಮತ್ತು ವಿಚಾರಗಳನ್ನು ಜನರ ಮುಂದಿಡಲು ಈ ನಾಟಕ ಆಯೋಜಿಸಲಾಗಿದೆ ಎಂದು ವಿವರಿಸಿದರು.
ಮಿಲಿಂದ ಕಣಮುಸ, ಪಾಂಡುರಂಗ ಕೊಟ್ರೆ, ಹುಸೇನ್​ಬಾಬಾ, ಅಮೃತ ಬಂದೆ, ಶ್ರೀಮಂತ ಎಸ್​, ರೇವಣಸಿದ್ಧಪ್ಪ ಹುಳಿಪಲ್ಲೆ, ಶಿವಾನಂದ ಪಾಟೀಲ, ಬಾಲಾಜಿ ಕಾಂಬಳೆ, ಬಾಬುರಾವ ಎಸ್​.ಕೆ ಇದ್ದರು
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net