

ಬಸವಕಲ್ಯಾಣ: ರಕ್ತದಾನ, ಅಂಗದಾನ ಮಾನವೀಯತೆಯ ಮಹತ್ವದ ಸೇವೆಯಾಗಿದೆ ಎಂದು ಪರ್ತಾಪುರ ರೈತ ಸಂಘದ ಗ್ರಾಮ ಘಟಕದ ಅಧ್ಯಕ್ಷ ಶ್ರೀಮಂತ ಮಹಾಜನ ಹೇಳಿದರು. ಬ್ರಹ್ಮಕುಮಾರಿ ಈಶ್ವರಿಯ ವಿಶ್ವವಿದ್ಯಾಲದಿಂದ ಶುಭ ಮಂಗಲ ಕಾರ್ಯಾಲಯದಲ್ಲಿ ಸೋಮವಾರ ರಾಜಯೋಗಿನಿ ದಾದಿ ಪ್ರಕಾಶಮಣಿ ಜೀ ಅವರ 19ನೇ ಪುಣ್ಯಸ್ಮ$ತಿ ನಿಮಿತ್ತ ಆಯೋಜಿಸಿದ ವಿಶ್ವ ಬಂಧುತ್ವ ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿ, ಸಮಾಜದಲ್ಲಿ ಪರಸ್ಪರ ಸಹಕಾರ ಅಗತ್ಯ. ವಿಶ್ವ ಬಂಧುತ್ವ ಹಾಗೂ ಸೇವಾ ಮನೋಭಾವ ಬೆಳೆಸುವಲ್ಲಿ ಇಂತಹ ಕಾರ್ಯಕ್ರಮಗಳು ಮಹತ್ವದ ಪಾತ್ರ ವಹಿಸುತ್ತವೆ ಎಂದು ಹೇಳಿದರು. ಬಿ.ಕೆ. ಪಾರ್ವತಿ ನೇತೃತ್ವ ವಹಿಸಿದ್ದರು. ಸೋಹಂ ಎಲೆಕ್ಟ್ರಾನಿಕ್ ಶೋ ರೂಂ ಮಾಲೀಕ ಕಲ್ಯಾಣರಾವ್ ಶಿವಣಕರ, ಬೀದರ್ ಬ್ಲಡ್ ಬ್ಯಾಂಕ್ನ ಡಾ.ಕುರಾತುಲಾ ಎಂ. ಪ್ರಮುಖರಾದ ಸತೀಶ್ ಚದರಗೆ, ಬಸವರಾಜ್ ಬೋನೆ, ಬಿಕೆ ರೋಹಿದಾಸ, ವಿಜಯಕುಮಾರ್, ವೀರಯ್ಯ ಸ್ವಾಮಿ, ಆಕಾಶ ಬೀದರ್, ಮುರಳೀಧರ ಪಾಟೀಲ್ ಇತರರಿದ್ದರು. ಬಿ.ಕೆ ಚಿತ್ರಲೇಖಾ ಪಾಟೀಲ್ ನಿರೂಪಿಸಿ, ವಂದಿಸಿದರು.