ಮಾವಿನಮಟ್ಟಿ ಗ್ರಾಮದಲ್ಲಿ ಸೋಮವಾರ ಹಮ್ಮಿಕೊಂಡ ಸಂಗೀತ ಸಂಭ್ರಮ ಮತ್ತು ಸಾಂಸತಿಕ ಕಾರ್ಯಕ್ರಮದಲ್ಲಿ ಯಮುನೇಶ ಯಾಳಗಿ ಸಂಗೀತ ಕಾರ್ಯಕ್ರಮ ನೀಡಿದರು. ಸಂಗನಗೌಡ ಮಾಲಿ ಪಾಟೀಲ್, ನಿಂಗಯ್ಯ ಹಿರೇಮಠ, ಸರಸ್ವತಿ, ಶರಣಕುಮಾರ ಯಾಳಗಿ ಇದ್ದರು.
ಕೆಂಭಾವಿ: ಸಂಗೀತದಲ್ಲಿ ಅದ್ಭುತ ಶಕ್ತಿ ಅಡಗಿದ್ದು, ಅದನ್ನು ಶುದ್ಧ ಮನಸ್ಸಿನಿಂದ ಆಲಿಸಿದರೆ ಮಾತ್ರ ಎಂಥ ರೋಗ ಕೂಡ ಗುಣಪಡಿಸಬಹುದು ಎಂದು ಪೇಠ ಅಮ್ಮಾಪುರ ಗ್ರಾಪಂ ಮಾಜಿ ಅಧ್ಯಕ್ಷ ಸಂಗನಗೌಡ ಮಾಲಿ ಪಾಟೀಲ್ ಹೇಳಿದರು.
ಮಾವಿನಮಟ್ಟಿ ಗ್ರಾಮದಲ್ಲಿ ಸೋಮವಾರ ಪಂ. ಪುಟ್ಟರಾಜ ಕವಿ ಗವಾಯಿಗಳ ಸಂಗೀತ ಮತ್ತು ಸಾಂಸ್ಕೃತಿಕ ಕಲಾ ಸಂಘ ಯಾಳಗಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರ ಇವರ ಆಶ್ರಯದಲ್ಲಿ ಹಮ್ಮಿಕೊಂಡ ಸಂಗೀತ ಸಂಭ್ರಮ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಸಪ್ತಸ್ವರಗಳಿಂದ ಹೊರಹೊಮ್ಮುವ ಸಂಗೀತದ ಪ್ರತಿಯೊಂದು ನಿನಾದ ಮನಸ್ಸಿಗೆ ಮುದ ನೀಡುವುದರ ಜತೆಗೆ ಶಾಂತಿ ನೆಲೆಸಲು ಬಹಳ ಸಹಕಾರಿಯಾಗಿದ್ದು, ಇದು ವೈಜ್ಞಾನಿಕ ಸಂಶೋಧನೆಯಿಂದಲೂ ದೃಢಟ್ಟಿದೆ ಎಂದರು.
ಇಂಥ ಕಾರ್ಯಕ್ರಮಗಳು ನಮ್ಮ ಗ್ರಾಮಾಂತರ ಪ್ರದೇಶಗಳಲ್ಲಿ ನಡೆಯುತ್ತಿರುವುದು ಅತ್ಯಂತ ಸಂತಸ. ಇಲ್ಲಿರುವ ಸಂಗೀತ ಪ್ರತಿಭೆಗಳನ್ನು ಗುರುತಿಸಲು ಇಂಥ ಕಾರ್ಯಕ್ರಮದ ವೇದಿಕೆ ಅತ್ಯಂತ ಸಹಕಾರಿಯಾಗಿದೆ ಎಂದು ಹೇಳಿದರು.
ಕಲಾ ಸಂಘದ ಅಧ್ಯಕ್ಷ ಶರಣಕುಮಾರ ಯಾಳಗಿ ಪ್ರಾಸ್ತಾವಿಕ ಮಾತನಾಡಿ, ಪಂ.ಪುಟ್ಟರಾಜ ಗವಾಯಿಗಳ ಆಶೀರ್ವಾದದಿಂದ ನಮ್ಮ ಕಲಾ ಸಂಘದಿಂದ ಸಂಗೀತ ಕಾರ್ಯಕ್ರಮ ಆಯೋಜನೆ ಮಾಡಲಾಗುತ್ತಿದ್ದು, ಗ್ರಾಮೀಣ ಭಾಗದಲ್ಲಿ ಇಂಥ ಕಾರ್ಯಕ್ರಮ ಆಯೋಜನೆ ಮಾಡಲು ಗುರಿ ಹೊಂದಲಾಗಿದ್ದು ಇದಕ್ಕೆ ಗ್ರಾಮಸ್ಥರ ಸಹಕಾರ ಬಹಳ ಮುಖ್ಯವಾಗಿದೆ ಎಂದರು.
ನಂತರ ಕಲಾ ಸಂಘ ನಡೆದು ಬಂದ ದಾರಿ ಮತ್ತು ಅವುಗಳ ಕಾರ್ಯದ ಬಗ್ಗೆ ವಿವರಿಸಿದರು. ಶ್ರೀ ನಿಂಗಯ್ಯ ಹಿರೇಮಠ ಸಾನ್ನಿಧ್ಯ ವಹಿಸಿದ್ದರು. ಗ್ರಾಪಂ ಅಧ್ಯೆ ಸರಸ್ವತಿ ಅಧ್ಯಕ್ಷತೆ ವಹಿಸಿದ್ದರು. ತಾಪಂ ಮಾಜಿ ಸದಸ್ಯ ನಿಂಗಣ್ಣ ಗೊರ್ಕಿ, ಗ್ರಾಪಂ ಸದಸ್ಯ ರಾಯಪ್ಪ ಗೊರ್ಕಿ, ಗ್ರಾಪಂ ಮಾಜಿ ಸದಸ್ಯ ರಾಮಯ್ಯ ಪೂಜಾರಿ, ಅರ್ಚಕ ರಾಯಪ್ಪ ಪೂಜಾರಿ, ಕರೆಪ್ಪ ಪೂಜಾರಿ, ಬೀರಪ್ಪ ಪೂಜಾರಿ ಇದ್ದರು.
ಸಂಗೀತ ಬಳಗದ ಯಮುನೇಶ ಯಾಳಗಿ, ಮಾರುತಿ ಶಾಂತಪುರ, ಬೂದಯ್ಯ ಹಿರೇಮಠ, ದೇವರಾಜ ಯರಕಿಹಾಳ, ಉಮೇಶ ಯಾದವ, ಸಿದ್ದಲಿಂಗಯ್ಯ ಹಿರೇಮಠ ಅವರಿಂದ ಸಂಗೀತ ಕಾರ್ಯಕ್ರಮ ನೆರವೇರಿತು. ಸುರೇಶ ಅಂಬುರೆ, ಪ್ರಾಣೇಶ ಶಹಾಪೂರ, ಶಶಿಧರ ಯಾಳಗಿ, ಭೀಮರಾಯ ಶಾಂತಪುರ ವಾದ್ಯ ಸಹಕಾರ ನೀಡಿದರು. ಸೋಮನಾಥ ಯಾಳಗಿ ಸ್ವಾಗತಿಸಿ ವಂದಿಸಿದರು.