ಸಂಗೀತದಿಂದ ಮಾನಸಿಕ ನೆಮ್ಮದಿ ಸಾಧ್ಯ

ಕಲಬುರಗಿ ಮಹಾಂತ ಜ್ಯೋತಿ ಪ್ರತಿಷ್ಠಾನದ ಆವರಣದ ಸಾಂಸ್ಕೃತಿಕ ಭವನದಲ್ಲಿ ಸದ್ಗುರು ಕಲಾ ಸಂಸ್ಥೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಗುರುವಾರ ನಡೆದ ಜಾನಪದ ಸಾಂಸತಿಕ ಸಮಾವೇಶಕ್ಕೆ ಕಸಾಪ ಅಧ್ಯಕ್ಷ ವಿಜಯಕುಮಾರ ಪಾಟೀಲ್​ ತೇಗಲತಿಪ್ಪಿ ಚಾಲನೆ ನೀಡಿದರು. ಶಂಕರ ಕೋಡ್ಲಾ, ಶಿವಾನಂದ ಮಾಳಗೆ, ಶರಣಬಸಪ್ಪ ಉಪ್ಪಿನ್​, ಧರ್ಮಣ್ಣ ಧನ್ನಿ, ಪ್ರಭಾ ಪ್ರಧಾನಿ, ಮಾಯಾ ಪಾಟೀಲ್​, ಪ್ರೊ.ಶಿವರಾಜ್​ ಪಾಟೀಲ್​ ಇತರರಿದ್ದರು.
ಕಲಬುರಗಿ ಮಹಾಂತ ಜ್ಯೋತಿ ಪ್ರತಿಷ್ಠಾನದ ಆವರಣದ ಸಾಂಸ್ಕೃತಿಕ ಭವನದಲ್ಲಿ ಸದ್ಗುರು ಕಲಾ ಸಂಸ್ಥೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಗುರುವಾರ ನಡೆದ ಜಾನಪದ ಸಾಂಸತಿಕ ಸಮಾವೇಶಕ್ಕೆ ಕಸಾಪ ಅಧ್ಯಕ್ಷ ವಿಜಯಕುಮಾರ ಪಾಟೀಲ್​ ತೇಗಲತಿಪ್ಪಿ ಚಾಲನೆ ನೀಡಿದರು. ಶಂಕರ ಕೋಡ್ಲಾ, ಶಿವಾನಂದ ಮಾಳಗೆ, ಶರಣಬಸಪ್ಪ ಉಪ್ಪಿನ್​, ಧರ್ಮಣ್ಣ ಧನ್ನಿ, ಪ್ರಭಾ ಪ್ರಧಾನಿ, ಮಾಯಾ ಪಾಟೀಲ್​, ಪ್ರೊ.ಶಿವರಾಜ್​ ಪಾಟೀಲ್​ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಕಸಾಪ ಜಿಲ್ಲಾಧ್ಯಕ್ಷ ವಿಜಯಕುಮಾರ ತೇಗಲತಿಪ್ಪಿ ಹೇಳಿಕೆ
  • ಕಲಬುರಗಿಯಲ್ಲಿ ಜಾನಪದ ಸಾಂಸ್ಕೃತಿಕ ಸಮಾವೇಶ
ಕಲಬುರಗಿ: ಸಂಗೀತವು ದೇವಾದಿ ದೇವತೆಗಳಿಗೂ ಪ್ರಿಯವಾದ ಮಹಾವಿದ್ಯೆ. ಮನಸ್ಸಿಗೆ ಸಂತೋಷ, ಶಾಂತಿ ಮತ್ತು ಸಂಸ್ಕೃತಿಯ ಅರಿವು ಮೂಡಿಸುವ ಶಕ್ತಿ ಸಂಗೀತದಲ್ಲಿದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ವಿಜಯಕುಮಾರ್​ ತೇಗಲತಿಪ್ಪಿ ಹೇಳಿದರು.
ನಗರದ ಮಹಾಂತ ಜ್ಯೋತಿ ಪ್ರತಿಷ್ಠಾನದ ಆವರಣದಲ್ಲಿರುವ ಸಾಂಸತಿಕ ಭವನದಲ್ಲಿ ಸದ್ಗುರು ಕಲಾ ಸಂಸ್ಥೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಗುರುವಾರ ನಡೆದ ಜಾನಪದ ಸಾಂಸ್ಕೃತಿಕ ಸಮಾವೇಶ ಉದ್ಘಾಟಿಸಿ ಮಾತನಾಡಿದರು.
ಸಂಗೀತವು ಸಮೂಹಕ ವಿದ್ಯೆಯಾಗಿದ್ದು, ದೇವಲೋಕದಲ್ಲಿಯೂ ಗಂಧರ್ವರು, ಕಿನ್ನರರು ಹಾಗೂ ಕಿಂಪುರುಷರು ಶ್ರೇಷ್ಠ ಕಲಾವಿದರಾಗಿದ್ದರು. ಅವರ ಸಂಗೀತ ನಿನಾದಕ್ಕೆ ದೇವಾದಿ ದೇವತೆಗಳೇ ಮನಸೋತಿದ್ದರು ಎಂದರು.
ಹೊತ್ತಾರೆ ನಾನೆದ್ದು ಯಾರ್ಯಾರ ನೆನೆಯಲಿ ಎಂಬ ಧ್ವನಿಸುರುಳಿ ಬಿಡುಗಡೆ ಮಾಡಲಾಯಿತು. ಈ ಗೀತೆಯನ್ನು ಪೂಜ್ಯ ಸದ್ಗುರು ಬಸವಪ್ರಭು ಸ್ವಾಮೀಜಿ ಹಾಗೂ ವಿಜಯಲಕ್ಷ್ಮೀ ಕೆಂಗನಾಳ ಅವರು ಯುಗಳ ಧ್ವನಿಯಲ್ಲಿ ಹಾಡಿದ್ದು, ಹಿರಿಯ ಪತ್ರಕರ್ತ ಶಂಕರ್​ ಕೋಡ್ಲಾ ಇತರರು ಧ್ವನಿಸುರುಳಿ ಬಿಡುಗಡೆಗೊಳಿಸಿದರು.
ಶಶಿಕಲಾ ಮತ್ತು ತಂಡದವರು ಸಂಪ್ರದಾಯಿಕ ಜಾನಪದ ಗೀತೆಗಳನ್ನು ಹಾಡುವ ಮೂಲಕ ಪ್ರೇಕ್ಷಕರ ಮನಗೆದ್ದರು. ಶಿವಾನಂದ ಮಾಳಗೆ, ಶರಣಬಸಪ್ಪ ಉಪ್ಪಿನ್​, ಧರ್ಮಣ್ಣ ಧನ್ನಿ, ಪ್ರಭಾ ಪ್ರಧಾನಿ ಹಾಗೂ ಮಾಯಾ ಪಾಟೀಲ್​ ಉಪಸ್ಥಿತರಿದ್ದರು. ಪ್ರೊ.ಶಿವರಾಜ್​ ಪಾಟೀಲ್​ ಅಧ್ಯಕ್ಷತೆ ವಹಿಸಿದ್ದರು.
ಜಾನಪದ ಹಾಗೂ ಸಾಂಸತಿಕ ಕ್ಷೇತ್ರದ ಅನುಭವಿ ಕಲಾವಿದರಾದ ನಾಗಲಿಂಗಯ್ಯ ಸ್ಥಾವರಮಠ, ರಾಜ್ಯೋತ್ಸವ ಪ್ರಶಸ್ತಿ ಪುರಸತ ಬಾಬುರಾವ್​ ಕೋಬಾಳ್​, ಶಿವಶರಣಯ್ಯ ನಿಂಗದಳ್ಳಿ, ಸೈದಪ್ಪ ಸಪ್ಪನಗೋಳ, ಶಾಂತಕುಮಾರ ಸಾವಳಗಿ, ಬಸಯ್ಯ ಗುತ್ತೇದಾರ್​, ವಿನೋದ್​ ಕುಮಾರ್​ ಸೇರಿ ಅನೇಕ ಕಲಾವಿದರು ಸಾಂಸ್ಕೃತಿಕ ರಂಗಕ್ಕೆ ಮೆರುಗು ತಂದರು.
ಪ್ರಶಾಂತಕುಮಾರ್​ ಗೋಲ್ಡ್​ಸ್ಮಿತ್​ ಕೊಳಲು ವಾದನ ನಡೆಸಿದರೆ, ಶಿವಕುಮಾರ ಸ್ವಾಮಿ ಜಾಲಹಳ್ಳಿ ಹಾಮೋರ್ನಿಯಂ ಸಾಥ್​ ನೀಡಿದರು. ರವಿಸ್ವಾಮಿ ಗೋಟೂರ್​, ಶ್ರೀಶೈಲ್​ ಸೇಡಂ ಹಾಗೂ ಮೌನೇಶ ಪಂಚಾಳ ಅವರು ವಾದ್ಯ ಸಹಕಾರ ನೀಡಿದರು.
ಶಾಂತಾ ವಾಲಿ ನಿರೂಪಿಸಿದರು. ಶಿವಲಿಂಗ ಕೆಂಗನಾಳ ಸ್ವಾಗತಿಸಿದರು. ಬಸವಕುಮಾರ ಕೆಂಗನಾಳ ವಂದಿಸಿದರು.
"

​ ಸಂಗೀತವು ಗಂಧರ್ವ ವಿದ್ಯೆಯಾಗಿದ್ದು, ಕಲಾವಿದರು ನಾಡಿನ ಪುಣ್ಯದ ಫಲ ಹಾಗೂ ಭುವನದ ಭಾಗ್ಯವಾಗಿ ಅವತರಿಸುತ್ತಾರೆ. ಆದ್ದರಿಂದ ಸಂಗೀತ ಮತ್ತು ಕಲೆಯನ್ನು ಪ್ರತಿಯೊಬ್ಬರೂ ಪ್ರೀತಿಸಿ, ಗೌರವಿಸಬೇಕು. ಸಂಗೀತ ಆಲಿಸುವ ಮೂಲಕ ಮನಸ್ಸನ್ನು ಸದಾ ಆನಂದದಲ್ಲಿರಿಸಬೇಕು.

— ವಿಜಯಕುಮಾರ ಪಟೀಲ್​ ತೇಗಲತಿಪ್ಪಿ, ಅಧ್ಯಕ್ಷ, ಕಸಾಪ ಕಲಬುರಗಿ.


ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net