ಅಂತಾರಾಷ್ಟ್ರೀಯ ವಸ್ತು ಸಂಗ್ರಹಾಲಯ ದಿನಾಚರಣೆ ಅಂಗವಾಗಿ ಸ್ವಚ್ಛತಾ ಕಾರ್ಯ ಹಮ್ಮಿಕೊಳ್ಳಲಾಯಿತು. ಕಲಬುರಗಿ ಹಿರಿಯ ಕಲಾವಿದ ನಾರಾಯಣ ಜೋಶಿ ಹಾಗೂ ಉಪಪ್ರಾಚಾರ್ಯ ನಾಗೇಶ ಮಡಿವಾಳ ಮಾತನಾಡಿದರು. ಇನ್ ಟ್ಯಾಕ್ ಪದಾಧಿಕಾರಿಗಳು, ಇಲಾಖೆಯ ಸಿಬ್ಬಂದಿ, ಸ್ಥಳಿಯ ನಾಗರಿಕರು ಹಾಗೂ ವಿಶ್ವನಾಥ ರೆಡ್ಡಿ ಮುದ್ನಾಳ ಕಾಲೇಜಿನ ವಿದ್ಯಾರ್ಥಿಗಳು ಮತ್ತು ಪ್ರಾಧ್ಯಾಪಕರು ಪಾಲ್ಗೊಂಡಿದ್ದರು. ಪ್ರಾಧ್ಯಾಪಕಿ ಜ್ಯೋತಿ ನಿರೂಪಿಸಿ, ವಂದಿಸಿದರು.