ಅಪರಾಧ ತಡೆಗೆ ಜನರ ಸಹಕಾರ ಅಗತ್ಯ

ಮಳಗಲಿ ಗ್ರಾಮದ ವಾಲ್ಮೀಕಿ ದೇವಸ್ಥಾನದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಮನೆಮನೆಗೆ ಪೊಲೀಸ್​ ಕಾರ್ಯಕ್ರಮದಲ್ಲಿ  ಜಾಗೃತಿ ಮೂಡಿಸಿದರು.
ಮಳಗಲಿ ಗ್ರಾಮದ ವಾಲ್ಮೀಕಿ ದೇವಸ್ಥಾನದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಮನೆಮನೆಗೆ ಪೊಲೀಸ್​ ಕಾರ್ಯಕ್ರಮದಲ್ಲಿ ಜಾಗೃತಿ ಮೂಡಿಸಿದರು.
Published on
ಮುರಗೋಡ: ಸಮಾಜದಲ್ಲಿ ಕಾನೂನುಬಾಹಿರ ಚಟುವಟಿಕೆ ತಡೆಗಟ್ಟಲು ಸಾರ್ವಜನಿಕರು ಪೊಲೀಸರಿಗೆ ಮಾಹಿತಿ ನೀಡುವುದು ಅಗತ್ಯ ಎಂದು ಮುರಗೋಡ ಠಾಣೆ ಪಿಐ ವೀರಯ್ಯ ಮಠಪತಿ ಹೇಳಿದರು. ಸಮೀಪದ ಮಳಗಲಿ ಗ್ರಾಮದ ವಾಲ್ಮೀಕಿ ದೇವಸ್ಥಾನದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಮನೆಮನೆಗೆ ಪೊಲೀಸ್​ ಕಾರ್ಯಕ್ರಮದಲ್ಲಿ ಮಾತನಾಡಿ, ಜೂಜಾಟ, ಮಟ್ಕಾ, ನಕಲಿ ಸಾರಾಯಿ ಮಾರಾಟ, ದೌರ್ಜನ್ಯ, ಅತ್ಯಾಚಾರ, ಮನೆ ಕಳ್ಳತನದಂಥ ಪ್ರಕರಣ ತಡೆಯುವಲ್ಲಿ ಪೊಲೀಸರಿಗೆ ಮಾಹಿತಿ ನೀಡಿದರೆ ಅಪರಾಧ ತಡೆಯಲು ಸಹಕಾರಿಯಾಗುತ್ತದೆ ಎಂದರು. ಪಿಎಸ್​ಐ ಡಬ್ಲು.ಎಚ್​.ಯಾದವಾಡ, ಸುರೇಶ ಹುಂಬಿ, ಈರಣ್ಣ ವಕ್ಕುಂದ, ಯಲ್ಲಪ್ಪ ಮೆಟಗುಪ್ಪಿ, ತಿಮ್ಮಣ್ಣ ಬಂಡಿವಡ್ಡರ, ರಾವೇಂದ್ರ ರುದ್ರಪ್ಪನವರ, ದಿಲಾವರ ಪೆಂಡಾರಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net