ನಗರಸಭೆ ಪೌರಾಯುಕ್ತ ಉಮೇಶ ಚವ್ಹಾಣ್ ಮಾತನಾಡಿ, ನಗರದ ಹತ್ತು ಉದ್ಯಾನಗಳಲ್ಲಿ ಈ ಕಾರ್ಯಕ್ರಮ ಹಾಕಿಕೊಳ್ಳಲಾಗಿದೆ. ಪ್ರತಿ ಉದ್ಯಾನವನದಲ್ಲೂ ಕನಿಷ್ಟ ಐವತ್ತು ಸಸಿಗಳನ್ನು ಆಯಾ ಏರಿಯಾಗಳ ನಿವಾಸಿಗಳಿಂದಲ್ಲೆ ನೆಟ್ಟು, ಪ್ರತಿಯೊಂದು ಸಸಿಗೂ ನೆಟ್ಟವರ ಮನೆ ಹೆಸರು ಕೊಟ್ಟು, ಅದರ ಹೊಣೆಗಾರಿಕೆ ಅವರಿಗೆ ವಹಿಸಲಾಗುವುದು ಎಂದರು. ನಗರಸಭೆ ಸಿಬ್ಬಂದಿ ಶಿವಪುತ್ರ, ಲಕ್ಷ್ಮೀ ನಗರದದ ಸಾರ್ವಜನಿಕರು ಭಾಗವಹಿಸಿದ್ದರು.