ಕಲಬುರಗಿ ಜಿಲ್ಲೆಯಲ್ಲಿ 27ರಂದು 1.8 ಮಿ.ಮೀ ವಾಡಿಕೆ ಮಳೆಗೆ 31.1 ಮಿ.ಮೀ ಮಳೆ ಸುರಿದಿದೆ. ಅಫಜಲಪುರ 15.2, ಆಳಂದ 12.4, ಚಿಂಚೋಳಿ 37.3, ಚಿತ್ತಾಪುರ 51, ಕಲಬುರಗಿ 25.9, ಜೇವರ್ಗಿ 48.6, ಸೇಡಂ 56.5, ಕಾಳಗಿ 35, ಕಮಲಾಪುರ 12.5, ಯಡ್ರಾಮಿ 21.4, ಶಹಾಬಾದ್ 32.4 ಮಿ.ಮೀ ಮಳೆ ಬಿದ್ದಿದೆ. ಮೇ 21ರಿಂದ 27ರವರೆಗೆ ವಾಡಿಕೆ ಮಳೆ 10.1 ಮಿ.ಮೀ ಇದ್ದರೆ 48.7 ಮಿ.ಮೀ ಸುರಿದಿದೆ. ಮೇ 1ರಿಂದ 27ರವರೆಗೆ 28 ಮಿ.ಮೀ ವಾಡಿಕೆ ಮಳೆಗೆ 68.2 ಮೀ.ಮೀ ಮಳೆ ಬಂದಿದೆ. ಜನವರಿ 1ರಿಂದ ಮೇ 27ರವರೆಗೆ ವಾಡಿಕೆ ಮಳೆ 61.3 ಮಿ.ಮೀ ಇದ್ದು, 125.5 ಮಿ.ಮೀ ಮಳೆ ಬಂದಿದೆ.