ಕಲ್ಯಾಣ ಕರ್ನಾಟಕಕ್ಕೆ ಮೋದಿ ಕೊಡುಗೆ

,
,
Published on

ಪ್ರಮುಖ ಮುಖ್ಯಾಂಶಗಳು

  • ವಂದೇ ಭಾರತ್​ ಸ್ಲೀಪರ್​ ರೈಲು
ಕಲಬುರಗಿ: ಬಹುನಿರೀಕ್ಷಿತ ವಂದೇ ಭಾರತ್​ ಸ್ಲೀಪರ್​ ರೈಲು ಶುಭಾರಂಭಗೊಳ್ಳುತ್ತಿದ್ದು ಮುಂಬೈ-ಬೆಂಗಳೂರು ಮಧ್ಯೆ ಈ ರೈಲು ಕಲ್ಯಾಣ ಕರ್ನಾಟಕದ ಕಲಬುರಗಿ ಮೂಲಕ ಸಂಚರಿಸುವ ಕೊಡುಗೆ ನೀಡಿದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು ಕೇಂದ್ರ ಸರ್ಕಾರಕ್ಕೆ ಮಾಜಿ ಸಂಸದ ಡಾ.ಉಮೇಶ ಜಾಧವ್​ ಅಭಿನಂದನೆ ಸಲ್ಲಿಸಿದ್ದಾರೆ.
ಮುಂಬೈ&ಬೆಂಗಳೂರು ವಂದೇ ಭಾರತ್​ ಸ್ಲೀಪರ್​ ರೈಲು ಕಲ್ಯಾಣ ಕರ್ನಾಟಕದ ಜಿಲ್ಲೆಗಳನ್ನು ಸಂಪರ್ಕಿಸುತ್ತಿರುವುದರಿಂದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಸರ್ಕಾರವು ಈ ಭಾಗದ ಪ್ರಯಾಣಿಕರಿಗೆ ನೀಡಿದ ಕೊಡುಗೆಯಿಂದ ಇಲ್ಲಿನ ಜನ ಸಂತಸ ಪಟ್ಟಿದ್ದಾರೆ.
ಕಳೆದ ಎರಡು ವರ್ಷಗಳಲ್ಲಿ ಕಲಬುರಗಿ ಬೆಂಗಳೂರು ಮಧ್ಯೆ ಸಂಚರಿಸುವ ವಂದೇ ಭಾರತ್​ ಪ್ರಯಾಣಿಕರ ದಟ್ಟಣೆಯಿಂದ ಲಾಭದಾಯಕವಾಗಿ ನಡೆಯುತ್ತಿದ್ದು ವಂದೇ ಭಾರತ್​ ಸ್ಲೀಪರ್​ ರೈಲುಗಾಡಿಗೆ ಪ್ರಯಾಣಿಕರು ಉತ್ತಮ ಸ್ಪಂದನ ನೀಡಬೇಕು. ಶ್ರೀದಲ್ಲಿ ಕಲಬುರಗಿ ವಿಮಾನ ನಿಲ್ದಾಣದಿಂದ ಪ್ರಮುಖ ನಗರಗಳಿಗೆ ವಿಮಾನ ಸಂಚಾರ ಪ್ರಾರಂಭವಾಗುವ ಸೂಚನೆ ಬಂದಿದ್ದು, ಕೇಂದ್ರ ಸರ್ಕಾರ ಅತ್ಯಂತ ಹಿಂದುಳಿದ ಪ್ರದೇಶಗಳ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದು, ಕೇಂದ್ರ ಸರ್ಕಾರದ ಈ ಘೋಷಣೆಯಿಂದ ಮತ್ತಷ್ಟು ಪ್ರಗತಿಗೆ ಪೂರಕವಾಗಲಿದೆ ಎಂದು ಡಾ. ಜಾಧವ್​ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net