ಆಧುನಿಕ, ಬಿತ್ತನೆ ವಿಧಾನ ಅನುಸರಿಸಲಿ

ಖಾನಾಪುರ ಪಟ್ಟಣದಲ್ಲಿ ಹಮ್ಮಿಕೊಂಡಿದ್ದ ಒಂದು ದಿನದ ಮಾರ್ಗದರ್ಶನ ಶಿಬಿರದಲ್ಲಿ ಸಹಾಯಕ ಕೃಷಿ ನಿರ್ದೇಶಕ ಸತೀಶ ಮಾವಿನಕೊಪ್ಪ ಮಾತನಾಡಿದರು. ಮಂಜುನಾಥ ಕಿತ್ತೂರು, ಖಾಜಾ ರುಬೀನಾ ಇತರರಿದ್ದರು.
ಖಾನಾಪುರ ಪಟ್ಟಣದಲ್ಲಿ ಹಮ್ಮಿಕೊಂಡಿದ್ದ ಒಂದು ದಿನದ ಮಾರ್ಗದರ್ಶನ ಶಿಬಿರದಲ್ಲಿ ಸಹಾಯಕ ಕೃಷಿ ನಿರ್ದೇಶಕ ಸತೀಶ ಮಾವಿನಕೊಪ್ಪ ಮಾತನಾಡಿದರು. ಮಂಜುನಾಥ ಕಿತ್ತೂರು, ಖಾಜಾ ರುಬೀನಾ ಇತರರಿದ್ದರು.
Published on
ಖಾನಾಪುರ: ತಾಲೂಕಿನ ಸರಾಸರಿ ಉತ್ಪಾದನೆಯಲ್ಲಿ ಕಬ್ಬು ಬೆಳೆ ನಿರೀತ ಸುಧಾರಣೆ ಕಂಡಿಲ್ಲ. ಎಕರೆಗೆ 25&30 ಟನ್​ ಇಳುವರಿ ಬರುತ್ತಿದೆ. ರೈತರು ಆಧುನಿಕ, ಸುರತ ಬಿತ್ತನೆ ವಿಧಾನ ಅನುಸರಿಸಬೇಕು ಎಂದು ಸಹಾಯಕ ಕೃಷಿ ನಿರ್ದೇಶಕ ಸತೀಶ ಮಾವಿನಕೊಪ್ಪ ತಿಳಿಸಿದರು.
ಪಟ್ಟಣದ ಕೃಷಿ ಇಲಾಖೆ ಸಭಾಂಗಣದಲ್ಲಿ ಗುರುವಾರ ಜಿಪಂ, ಕೃಷಿ ಇಲಾಖೆ ಮತ್ತು ಸಕ್ಕರೆ ಕಾರ್ಖಾನೆ ಜಂಟಿಯಾಗಿ ಹಮ್ಮಿಕೊಂಡಿದ್ದ ಒಂದು ದಿನದ ಮಾರ್ಗದರ್ಶನ ಶಿಬಿರದಲ್ಲಿ ಮಾತನಾಡಿದರು.
ಜಿಲ್ಲಾ ಉಪ ಕೃಷಿ ನಿರ್ದೇಶಕ ಸಲೀಂ ಸಂತರಾಜ ಮಾತನಾಡಿ, ರಾಜ್ಯದಲ್ಲಿ ಕಬ್ಬು ಉತ್ಪಾದನೆ ಹೆಚ್ಚಿಸುವ ನಿಟ್ಟಿನಲ್ಲಿ ಬೆಳಗಾವಿ, ಬಾಗಲಕೋಟೆ, ವಿಜಯಪುರ ಹಾಗೂ ಕಲಬುರಗಿ ಜಿಲ್ಲೆಗಳಲ್ಲಿ 3,000 ಹೆಕ್ಟೇರ್​ ಭೂಮಿಯಲ್ಲಿ ಸುಧಾರಿತ ಕಬ್ಬು ಉತ್ಪಾದನಾ ಯೋಜನೆ ಜಾರಿಗೆ ತರಲು ಸಿದ್ಧತೆ ನಡೆದಿದೆ. ಮಣ್ಣಿನ ಆರೋಗ್ಯ ಮತ್ತು ನೀರಿನ ಸಂರಣೆ ಅಗತ್ಯ ಎಂದು ಸಲಹೆ ನೀಡಿದರು. ಕೃಷಿ ಸಹಾಯಕ ನಿರ್ದೇಶಕ ಮಂಜುನಾಥ ಕಿತ್ತೂರು, ಕೃಷಿ ಕಾರ್ಯನಿರ್ವಾಹಕ ಅಧಿಕಾರಿ ಖಾಜಾ ರುಬೀನಾ, ಡಾ.ಸುನೀಲಕುಮಾರ ನೂಲಿ, ಮಂಜುನಾಥ ಕುಸಗಲ್ಲ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net