ಕಲಬುರಗಿಯ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಶುಕ್ರವಾರ ಆಯೋಜಿಸಿದ್ದ ರಾಷ್ಟ್ರೀಯ ಕಾರ್ಯಾಗಾರದಲ್ಲಿ ಕುಲಪತಿ ಪ್ರೊ.ಬಟ್ಟು ಸತ್ಯನಾರಾಯಣ, ಪ್ರೊ.ತಾರಕೇಶ್ವರ ವಿ.ಬಿ, ಪ್ರೊ.ಬಸವರಾಜ ಡೋಣೂರ್, ಪ್ರೊ.ವಿಕ್ರಮ್ ವಿಸಾಜಿ, ಡಾ.ಮಹೇಂದ್ರ, ಡಾ.ರೇಣುಕಾ ಇತರರಿದ್ದರು.ಕಲಬುರಗಿಯ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಶುಕ್ರವಾರ ಆಯೋಜಿಸಿದ್ದ ರಾಷ್ಟ್ರೀಯ ಕಾರ್ಯಾಗಾರದಲ್ಲಿ ಕುಲಪತಿ ಪ್ರೊ.ಬಟ್ಟು ಸತ್ಯನಾರಾಯಣ, ಪ್ರೊ.ತಾರಕೇಶ್ವರ ವಿ.ಬಿ, ಪ್ರೊ.ಬಸವರಾಜ ಡೋಣೂರ್, ಪ್ರೊ.ವಿಕ್ರಮ್ ವಿಸಾಜಿ, ಡಾ.ಮಹೇಂದ್ರ, ಡಾ.ರೇಣುಕಾ ಇತರರಿದ್ದರು.
ಸಿಯುಕೆನಲ್ಲಿ ಸಂಶೋಧನಾ ವಿಧಾನ, ಶೈಣಿಕ ಬರವಣಿಗೆ ಕಾರ್ಯಾಗಾರ
ಕಲಬುರಗಿ: ಭಾಷೆ ಮಾನವನ ವಿಶಿಷ್ಟ ಲಣ. ಆಧುನಿಕ ತಂತ್ರಾನವನ್ನು ಸಂಶೋಧನೆಯಲ್ಲಿ ಮಿತವಾಗಿ ಬಳಸಬೇಕು, ಇಲ್ಲವಾದರೆ ಮಾನವ ಸೃಜನಶೀಲತೆ ಅಪಾಯಕ್ಕೀಡಾಗಲಿದೆ ಎಂದು ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಬಟ್ಟು ಸತ್ಯನಾರಾಯಣ ಹೇಳಿದರು.
ಕಲಬುರಗಿ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ ಇಂಗ್ಲಿಷ್ ವಿಭಾಗದಲ್ಲಿ ಶುಕ್ರವಾರ ಆಯೋಜಿಸಲಾಗಿದ್ದ ಎರಡು ದಿನಗಳ ರಾಷ್ಟ್ರೀಯ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ನಾವು ಭಾಷೆಯನ್ನು ಕೇವಲ ಸಂವಹನಕ್ಕೆ ಮಾತ್ರವಲ್ಲ, ಜೀವನದ ಸೌಂದರ್ಯಕ್ಕೂ ಬಳಸಬೇಕು ಎಂದು ಹೇಳಿದರು.
ಸಂಪನ್ಮೂಲ ವ್ಯಕ್ತಿ ಹೈದರಾಬಾದ್ನ ಇಎಫ್ಎಲ್ಯು ಸಂಸ್ಥೆಯ ಪ್ರೊ.ತಾರಕೇಶ್ವರ ವಿ.ಬಿ. ಮಾತನಾಡಿ, ಸಂಶೋಧನೆಗೆ ಶೈಣಿಕ ಸಮರ್ಥನೆ ಅಗತ್ಯ. ವಿವಿಧ ವಿಧಾನಗಳು ಮತ್ತು ವಿಧಾನಶಾಸಗಳು ಮಾನವಿಕ ಶಾಸಗಳಲ್ಲಿ ವಿವಿಧ ಪಠ್ಯ ರೂಪಗಳನ್ನು ವಿಶ್ಲೇಷಿಸಲು ನೆರವಾಗಲಿವೆ. ಇತರ ವಿಷಯಗಳಿಂದ ಭಿನ್ನವಾಗಿ, ಸಾಹಿತ್ಯವು ಬಹುಶಾಖಾತ್ಮಕ ಅಧ್ಯಯನವಾಗಿದ್ದು, ಸಮಾಜಶಾಸ ಹಾಗೂ ಶುದ್ಧ ವಿಾನಗಳನ್ನೂ ಒಳಗೊಂಡಿದೆ. ಮಾನವಿಕ ಶಾಸ ಮತ್ತು ಭಾಷೆಗಳ ಸಂಶೋಧನೆ ಸಂಸತಿಯ ಅರಿವು, ವಿಮರ್ಶಾತ್ಮಕ ಚಿಂತನೆ ಮತ್ತು ಮಾನವೀಯ ಾನ ನಿರ್ಮಾಣದ ಮೂಲಸ್ತಂಭವಾಗಿದೆ ಎಂದು ಹೇಳಿದರು.
ಅಧ್ಯತೆ ವಹಿಸಿದ್ದ ಪ್ರೊ.ಬಸವರಾಜ ದೋಣೂರು ಮಾತನಾಡಿದರು. ಡೀನ್ ಪ್ರೊ.ವಿಕ್ರಮ್ ವಿಸಾಜಿ ಇದ್ದರು. ಕಾರ್ಯಾಗಾರ ಆಯೋಜನಾ ಕಾರ್ಯದರ್ಶಿ ಡಾ.ಮಹೇಂದ್ರ ಎಂ. ಸ್ವಾಗತಿಸಿ, ಪ್ರಸ್ತಾವಿಕ ಮಾತನಾಡಿದರು.
ಹೈದರಾಬಾದ್ನ ಇಂಗ್ಲಿಷ್ ಮತ್ತು ವಿದೇಶಿ ಭಾಷೆಗಳ ವಿಶ್ವವಿದ್ಯಾಲಯದ ಚಲನಚಿತ್ರ ಅಧ್ಯಯನ ವಿಭಾಗದ ಪ್ರೊ.ನಿಖಿಲ್ ಎಚ್., ಡಾ.ರೇಣುಕಾ, ಡಾ.ಪ್ರಕಾಶ, ಪ್ರೊ.ಕೊಡಗುಂಟಿ ಹಾಗೂ ಡಾ.ವಿಜಯಕುಮಾರ್ ಇತರರಿದ್ದರು. ಕಾರ್ಯಾಗಾರದಲ್ಲಿ ಸಂಶೋಧನಾ ವಿದ್ಯಾರ್ಥಿಗಳು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು. ಡಾ.ಆಶೀಷ್ ವಂದಿಸಿದರು. ಅನಿಲ್.ಕೆ. ನಿರೂಪಿಸಿದರು. ಇಂಗ್ಲಿಷ್ ವಿಭಾಗದ ವಿದ್ಯಾರ್ಥಿಗಳು ರಾಷ್ಟ್ರಗೀತೆ ಹಾಡಿದರು.
ಈ ಕಾರ್ಯಾಗಾರವು ಸಂಶೋಧಕರಿಗೆ ಗುಣಮಟ್ಟದ ಸಂಶೋಧನೆ ಮತ್ತು ಶೈಣಿಕ ಬರವಣಿಗೆಗಾಗಿ ಅಗತ್ಯ ಜ್ಞಾನ, ಕೌಶಲ ಮತ್ತು ಆತ್ಮವಿಶ್ವಾಸ ನೀಡುವ ಉದ್ದೇಶದಿಂದ ರೂಪಿಸಲಾಗಿದೆ. ಸಂಶೋಧಕರು ಸರಿಯಾದ ಮತ್ತು ಅರ್ಥಪೂರ್ಣ ಪ್ರಶ್ನೆ ಕೇಳಿ, ಸಮರ್ಪಕ ಜ್ಞಾ ನ ಪಡೆದುಕೊಳ್ಳಬೇಕು.