ವಾರ್ತಾ ಇಲಾಖೆ ಆಯುಕ್ತರಾಗಿ ಎಂ.ಎನ್. ಅನುಚೇತ್

ಡಿಐಜಿ ಎಂ.ಎನ್. ಅನುಚೇತ್
ಡಿಐಜಿ ಎಂ.ಎನ್. ಅನುಚೇತ್
Published on
ಬೆಂಗಳೂರು: ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಆಯುಕ್ತರಾಗಿ ಡಿಐಜಿ ಎಂ.ಎನ್. ಅನುಚೇತ್ ಅವರನ್ನು ನಿಯೋಜನೆ ಮಾಡಿ ರಾಜ್ಯ ಸರ್ಕಾರ ಬುಧವಾರ ಆದೇಶ ಹೊರಡಿಸಿದೆ. ಜತೆಗೆ ಯುವ ಜನ ಮತ್ತು ಕ್ರೀಡಾ ಇಲಾಖೆ ಆಯುಕ್ತರ ಹುದ್ದೆಯನ್ನು ಹೆಚ್ಚುವರಿ ಹೊಣೆ ನೀಡಲಾಗಿದೆ.
ವಾರ್ತಾ ಇಲಾಖೆ ಆಯುಕ್ತರಾಗಿದ್ದ ಹೇಮಂತ್ ಎಂ. ನಿಂಬಾಳ್ಕರ್ ಅವರ ಸ್ಥಳಕ್ಕೆ ಅನುಚೇತ್ ಅವರನ್ನು ನಿಯೋಜನೆ ಮಾಡಲಾಗಿದೆ. ನಿಂಬಾಳ್ಕರ್ ಅವರಿಗೆ ಸ್ಥಳ ನಿಯೋಜನೆ ಮಾಡಿಲ್ಲ.
ಮತ್ತೊಂದೆಡೆ ಯುವಜನ ಮತ್ತು ಕ್ರೀಡಾ ಇಲಾಖೆ ಆಯುಕ್ತರಾಗಿದ್ದ ಐಎಎಸ್ ಟಿ.ಎಚ್. ಕುಮಾರ್ ಅವರಿಗೂ ಹುದ್ದೆ ತೋರಿಸಿಲ್ಲ. ಇವರ ಜಾಗಕ್ಕೆ ಸಿಐಡಿಯಲ್ಲಿ ನೇಮಕಾತಿ ವಿಭಾಗದಲ್ಲಿ ಡಿಐಜಿ ಆಗಿದ್ದ ಅನುಚೇತ್ ಅವರನ್ನು ನಿಯೋಜನೆ ಮಾಡಲಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net