ಎಸ್ಸಿ-ಎಸ್ಟಿ ಅನುದಾನದಲ್ಲಿ ನಡೆದಿರುವ ದುರುಪಯೋಗವನ್ನು ತನಿಖೆ ನಡೆಸುವಂತೆ ಒತ್ತಾಯಿಸಿ ಭಾರತೀಯ ದಲಿತ ಪ್ಯಾಂಥರ್ ಸಂಟನೆ ತಾಲೂಕು ಟಕದಿಂದ ಬುಧವಾರ ಶಾಸಕ ಡಾ.ಸಿದ್ದಲಿಂಗಪ್ಪ ಪಾಟೀಲ್ ಅವರಿಗೆ ಮನವಿ ಸಲ್ಲಿಸಲಾಯಿತು. ಅಧ್ಯ ಗಣಪತಿ ಅಷ್ಟೂರೆ, ಪ್ರಮುಖರಾದ ಸುಶೀಲಕುಮಾರ ಭೋಲಾ, ಅನಂತ ಮಾಳಗೆ ಇತರರಿದ್ದರು.
ಹುಮನಾಬಾದ್: ತಾಲೂಕಿನ ಗ್ರಾಮ ಪಂಚಾಯಿತಿಗಳಲ್ಲಿ 15ನೇ ಹಣಕಾಸು ಆಯೋಗದ ಅನುದಾನದಲ್ಲಿ ಪರಿಶಿಷ್ಟ ಜಾತಿ (ಎಸ್ಸಿ) ಹಾಗೂ ಪರಿಶಿಷ್ಟ ಪಂಗಡ (ಎಸ್ಟಿ) ಸಮುದಾಯಗಳಿಗೆ ಮೀಸಲಿರಬೇಕಾದ ಅನುದಾನವನ್ನು ನಿಯಮಾನುಸಾರ ಬಳಸದೆ ಅಕ್ರಮ ಹಾಗೂ ದುರುಪಯೋಗ ನಡೆಸಲಾಗಿದ್ದು, ಸಮಗ್ರ ತನಿಖೆ ನಡೆಸುವಂತೆ ಭಾರತೀಯ ದಲಿತ ಪ್ಯಾಂಥರ್ ಸಂಟನೆ ತಾಲೂಕು ಟಕದಿಂದ ಬುಧವಾರ ಶಾಸಕ ಡಾ. ಸಿದ್ದಲಿಂಗಪ್ಪ ಪಾಟೀಲ್ ಅವರಿಗೆ ಮನವಿ ಸಲ್ಲಿಸಲಾಯಿತು.
ನಂತರ ಮಾತನಾಡಿದ ಸಂಟನೆಯ ಮುಖಂಡರು, ತಾಲೂಕಿನ 19 ಗ್ರಾಮ ಪಂಚಾಯಿತಿಗಳಲ್ಲಿ 2025-26ನೇ ಸಾಲಿನ 15ನೇ ಹಣಕಾಸು ಆಯೋಗದ ಕ್ರಿಯಾ ಯೋಜನೆ ರೂಪಿಸುವ ವೇಳೆ ಎಸ್ಸಿ-ಎಸ್ಟಿ ಉಪ ಯೋಜನೆಗಳಿಗೆ ಜನಸಂಖ್ಯೆ ಅನುಪಾತದಂತೆ ಮೀಸಲಿಡಬೇಕಾದ ಅನುದಾನವನ್ನು ನಿಯಮಾನುಸಾರ ಕಾಯ್ದಿರಿಸಿಲ್ಲ. ಈ ಮೂಲಕ ಸರ್ಕಾರದ ಮಾರ್ಗಸೂಚಿಗಳು ಹಾಗೂ ಕಾನೂನು ನಿಯಮಗಳನ್ನು ಉಲ್ಲಂಸಲಾಗಿದೆ ಎಂದು ದೂರಿದರು.
ಈ ಹಿನ್ನೆಲೆಯಲ್ಲಿ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಹಾಗೂ ಎಸ್ಸಿ&ಎಸ್ಟಿ ಸಮುದಾಯಕ್ಕೆ ಮೀಸಲಾದ ಅನುದಾನವನ್ನು ಉದ್ದೇಶಿತ ಫಲಾನುಭವಿಗಳ ಅಭಿವೃದ್ಧಿಗೆ ಬಳಸುವಂತೆ ಮೇಲಾಧಿಕಾರಿಗಳಿಗೆ ನಿರ್ದೇಶನ ನೀಡಬೇಕೆಂದು ಒತ್ತಾಯಿಸಿದರು.
ಟಕದ ತಾಲೂಕು ಅಧ್ಯ ಗಣಪತಿ ಅಷ್ಟೂರೆ, ಪ್ರಮುಖರಾದ ಸುಶೀಲಕುಮಾರ ಭೋಲಾ, ಅನಂತ ಮಾಳಗೆ, ಸಿದ್ಧಾರ್ಥ ಜಾನವೀರ, ವಿಠಲ್ ಶಿವನಾಯಕ ಇತರರಿದ್ದರು.