ಸಚಿವ ಪ್ರಿಯಾಂಕ್​ ಜಿಲ್ಲೆ ಸಮಸ್ಯೆಗೆ ಸ್ಪಂದಿಸಲಿ

ಕರಜಗಿ ಮುರಾರ್ಜಿ ದೇಸಾಯಿ ವಸತಿಶಾಲೆಗೆ ಮಾಜಿ ಸಂಸದ ಡಾ.ಉಮೇಶ ಜಾಧವ್​ ಭೇಟಿ ನೀಡಿ ವಿದ್ಯಾರ್ಥಿಗಳ ಸಮಸ್ಯೆ ಆಲಿಸಿದರು. ರಾಜಶೇಖರ ಜಿಡ್ಡಗಿ, ಕಾಂತು ಉಪ್ಪಿನ್​, ವಿನೋದ ಚವ್ಹಾಣ್​ ಯಾಗಾಪುರ ಇತರರಿದ್ದರು.
ಕರಜಗಿ ಮುರಾರ್ಜಿ ದೇಸಾಯಿ ವಸತಿಶಾಲೆಗೆ ಮಾಜಿ ಸಂಸದ ಡಾ.ಉಮೇಶ ಜಾಧವ್​ ಭೇಟಿ ನೀಡಿ ವಿದ್ಯಾರ್ಥಿಗಳ ಸಮಸ್ಯೆ ಆಲಿಸಿದರು. ರಾಜಶೇಖರ ಜಿಡ್ಡಗಿ, ಕಾಂತು ಉಪ್ಪಿನ್​, ವಿನೋದ ಚವ್ಹಾಣ್​ ಯಾಗಾಪುರ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಮಾಜಿ ಸಂಸದ ಡಾ.ಉಮೇಶ ಜಾಧವ್​ ಸಲಹೆ
  • ಕರಜಗಿ ವಸತಿಶಾಲೆಗೆ ಭೇಟಿ
ಕರಜಗಿ: ಜಿಲ್ಲಾ ಉಸ್ತುವಾರಿ ಸಚಿವರಿಗೆ ಜಿಲ್ಲೆಯ ಬಗ್ಗೆ ಗಮನಹರಿಸಲು ಸಮಯವಿಲ್ಲ. ನಿತ್ಯವೂ ಅಂತಾರಾಷ್ಟ್ರೀಯ ವಿಷಯಗಳ ಬಗ್ಗೆ ಮಾತನಾಡುವುದೇ ಮಿನಿಸ್ಟರ್​ ಪ್ರಿಯಾಂಕ್​ ಖರ್ಗೆ ಅವರ ಕರ್ತವ್ಯವಾಗಿದೆ ಎಂದು ಮಾಜಿ ಸಂಸದ ಡಾ.ಉಮೇಶ ಜಾಧವ್​ ವ್ಯಂಗ್ಯವಾಡಿದರು.
ಗ್ರಾಮದ ಮುರಾರ್ಜಿ ದೇಸಾಯಿ ವಸತಿಶಾಲೆಗೆ ಶುಕ್ರವಾರ ರಾತ್ರಿ ಭೇಟಿ ನೀಡಿ ಮಕ್ಕಳ ಆರೋಗ್ಯ ವಿಚಾರಿಸಿದ ಅವರು, ನ್ಯಾಷನಲ್​ ಟನೆಗಳು ಬಿಡಲಿ, ಜಿಲ್ಲೆಯ ಹಾಸ್ಟೆಲ್​ಗಳ ಸ್ಥಿತಿ ಹದಗೆಟ್ಟಿದೆ. ವಿದ್ಯಾರ್ಥಿಗಳು ಗುಣಮಟ್ಟದ ಆಹಾರ ಸಿಗದೆ ಪರದಾಡುತ್ತಿದ್ದಾರೆ. ಇತ್ತೀಚೆಗೆ ಚಿತ್ತಾಪುರ ತಾಲೂಕಿನ ಗುಂಡಗುರ್ತಿ ಮುರಾರ್ಜಿ ದೇಸಾಯಿ ವಸತಿಶಾಲೆಯಲ್ಲಿ ವಿಷಾಹಾರ ಸೇವಿಸಿ ಮಕ್ಕಳು ಅಸ್ವಸ್ಥಗೊಂಡಿದ್ದರು. ಇದೀಗ ಕರಜಗಿ ವಸತಿಶಾಲೆಯಲ್ಲಿ ಸಮಸ್ಯೆ ತಲೆದೂರಿದೆ. ವಿದ್ಯಾರ್ಥಿಗಳು ಹಾಸ್ಟೆಲ್​ಗೆ ಬರುವುದಕ್ಕೂ ಭಯ ಪಡುತ್ತಿದ್ದಾರೆ ಎಂದು ಕಿಡಿಕಾರಿದರು.
ಗುಣಮಟ್ಟದ ಶಿಣ ಜತೆಗೆ ಉತ್ತಮ ಆಹಾರ ನೀಡುವುದು ಸರ್ಕಾರದ ಜವಾಬ್ದಾರಿ ಆಗಿದೆ. ಆದರೆ ಕಳಪೆ ಆಹಾರ ಧಾನ್ಯ ಪೂರೈಸುತ್ತಿರುವುದರಿಂದ ಇಂತಹ ಟನೆಗಳು ಮರುಕಳಿಸುತ್ತಿವೆ. ಅಲ್ಲದೆ ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹಾಳಾಗಿದೆ. ಅಧಿಕಾರಿಗಳು ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸುತ್ತಿಲ್ಲ. ತಕ್ಷಣ ವಸತಿನಿಲಯಗಳತ್ತ ಗಮನಹರಿಸಿ ವಿದ್ಯಾರ್ಥಿಗಳಿಗೆ ಗುಣಮಟ್ಟದ ಆಹಾರ ನೀಡುವ ಕೆಲಸ ಆಗಬೇಕಿದೆ. ಮೂಲ ಸೌಕರ್ಯ ಒದಗಿಸುವ ಕೆಲಸ ನಡೆಯಬೇಕು ಎಂದು ಒತ್ತಾಯಿಸಿದರು.
ಪ್ರಮುಖರಾದ ರಾಜಶೇಖರ ಜಿಡ್ಡಗಿ, ಕಾಂತು ಉಪ್ಪಿನ್​, ವಿನೋದ ಚವ್ಹಾಣ್​ ಯಾಗಾಪುರ, ಸಂತೋಷ ರಾಠೋಡ್​, ವಿನೋದ ರಾಠೋಡ್​, ಸೋಮು ನಾಯ್ಕೋಡಿ, ಪ್ರಶಾಂತ ರೇವೂರ, ಪ್ರಾಂಶುಪಾಲ ಶರಣಬಸಪ್ಪ ಪಾಟೀಲ್​, ವಾರ್ಡನ್​ ರವಿ ವಾಲಿ ಇತರರಿದ್ದರು.
"

ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್​ ಖರ್ಗೆ ಅವರು ಆರ್​ಎಸ್​ಎಸ್​ಗೆ ನೀಡುವಷ್ಟೆ ಮಹತ್ವ ಜಿಲ್ಲೆಯ ಅಭಿವೃದ್ಧಿ ಬಗ್ಗೆ ನೀಡಬೇಕು. ಇದರಿಂದ ಜನರ ಸಮಸ್ಯೆಗಳಿಗೆ ಪರಿಹಾರ ಸಿಗಬಹುದು. ಸರ್ಕಾರ ವಸತಿ ಶಾಲೆಗಳಿಗೆ ಪೂರೈಸುತ್ತಿರುವ ಆಹಾರ ಧಾನ್ಯಗಳನ್ನು ಪರಿಶೀಲಿಸಿ ಗುಣಮಟ್ಟದ ಆಹಾರ ಧಾನ್ಯ ವಿತರಿಸುವ ಕೆಲಸ ಆಗಲಿ.

— > ಡಾ.ಉಮೇಶ ಜಾಧವ್​, ಮಾಜಿ ಸಂಸದ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net