ಸಚಿವ ಪ್ರಿಯಾಂಕ್​ ಖರ್ಗೆಗಿಲ್ಲ ಕ್ಷೇತ್ರದ ಕಾಳಜಿ

ಆರ್​.ರುದ್ರಯ್ಯ
ಆರ್​.ರುದ್ರಯ್ಯ
Published on

ಪ್ರಮುಖ ಮುಖ್ಯಾಂಶಗಳು

  • ಬಿಜೆಪಿ ಕಾರ್ಯಕಾರಿಣಿ ಸದಸ್ಯ ಆರ್​.ರುದ್ರಯ್ಯ ಟೀಕೆ
  • ಎಸ್​ಐಆರ್​ ಕುರಿತು ಕಾಂಗ್ರೆಸ್​ ಅಪಪ್ರಚಾರ
ಚಿತ್ತಾಪುರ: ತಾಲೂಕು ಆಡಳಿತ ಯಂತ್ರ ಕುಸಿದಿದ್ದು, ದುರಾಡಳಿತದ ಹೆಚ್ಚಾಗಿದೆ. ಕ್ಷೇತ್ರದ ಶಾಸಕರಾದ ಸಚಿವ ಪ್ರಿಯಾಂಕ್​ ಖರ್ಗೆ ಅಭಿವೃದ್ಧಿ ಬಗ್ಗೆ ಮಾತನಾಡಲ್ಲ. ಯಾವಾಗಲೂ ಆರ್​ಎಸ್​ಎಸ್​, ಪ್ರಧಾನಿ ನರೇಂದ್ರ ಮೋದಿ ಧ್ಯಾನ ಮಾಡುತ್ತಾರೆ ಎಂದು ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಆರ್​.ರುದ್ರಯ್ಯ ವ್ಯಂಗ್ಯವಾಡಿದರು.
ದಂಡೋತಿ ಮುರಾರ್ಜಿ ವಸತಿಶಾಲೆಯಲ್ಲಿ ವಿಷಾಹಾರ ಸೇವಿಸಿ ಸಾಕಷ್ಟು ಮಕ್ಕಳು ಅಸ್ವಸ್ಥರಾಗಿ ಆಸ್ಪತ್ರೆ ಸೇರಿದ್ದರು. ಇಂತಹ ದುರ್ಟನೆಗಳು ಸಂಭವಿಸಿದಾಗ ತಕ್ಷಣ ಕ್ಷೇತ್ರಕ್ಕೆ ಭೇಟಿ ನೀಡಿ ಪರಿಹಾರೋಪಾಯ ಕ್ರಮ ಕೈಗೊಳ್ಳಬೇಕು. ಆದರೆ ಶಾಸಕರು ಬೆಂಗಳೂರಿನಿಂದಲೇ ಅಧಿಕಾರಿಗಳಿಗೆ ಹೇಳುತ್ತಾರೆ. ಇದರಿಂದಲೇ ಅವರಿಗೆ ಕ್ಷೇತ್ರದ ಬಗ್ಗೆ ಎಷ್ಟು ಕಾಳಜಿ ಇದೆ ಎಂಬುದು ತಿಳಿಯುತ್ತದೆ. ಆರ್​ಎಸ್​ಎಸ್​ ನಿಷೇಧ, ನೋಂದಣಿ ಬಗ್ಗೆ ಮಾಧ್ಯಮಗಳಲ್ಲಿ ಹೇಳಿಕೆ ನೀಡಿ ಪ್ರಚಾರ ಪಡೆಯುವುದಕ್ಕಿಂತ ಮೊದಲು ಕೋರ್ಟ್​ಗೆ ಹೋಗಲಿ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಸವಾಲು ಹಾಕಿದರು.
ನಾನು 2023ರಲ್ಲಿ ಲಿಂಗಸೂಗೂರು ಕ್ಷೇ‘ತ್ರದಿಂದ ಪೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ 14 ಸಾವಿರ ಮತ ಪಡೆದು ಕಾಂಗ್ರೆಸ್​ ಅಭ್ಯರ್ಥಿ ಸೋಲಿಗೆ ಕಾರಣನಾಗಿದ್ದೆ. ಎಸ್​ಐಆರ್​ ಪ್ರಕ್ರಿಯೆ ಅಲ್ಪಸಂಖ್ಯಾತ, ದಲಿತರ ಮತ್ತು ಬಡವರ ವಿರೋಧಿ ಎಂದು ಕಾಂಗ್ರೆಸ್​ ಅಪಪ್ರಚಾರ ಮಾಡುತ್ತಿದೆ. ಆದರೆ ಪ್ರಜಾಪ್ರಭುತ್ವ ವ್ಯವಸ್ಥೆ ಶುದ್ಧ ಮಾಡಲು, ನ್ಯಾಯಯುತ ಹಕ್ಕು ಒದಗಿಸಲು ಎಸ್​ಐಆರ್​ ಅವಶ್ಯಕ ಎಂದರು.
ಮಾಜಿ ಮೇಯರ್​ ವಿಶಾಲ್​ ದರ್ಗಿ, ಬಿಜೆಪಿ ನಗರಾಧ್ಯಕ್ಷ ಆನಂದ ಪಾಟೀಲ್​ ನರಿಬೋಳ, ಪುರಸಭೆ ಮಾಜಿ ಅಧ್ಯಕ್ಷ ನಾಗರಾಜ ಭಂಕಲಗಿ, ಪ್ರಮುಖರಾದ ರಮೇಶ ಬೊಮ್ಮನಳ್ಳಿ, ಪ್ರಭು ಗಂಗಾಣಿ, ಸುರೇಶ ಬೆನಕನಳ್ಳಿ, ದಶರಥ ದೊಡ್ಡಮನಿ, ದೀಪಕ್​ ಹೊಸ್ಸೂರಕರ್​, ನಾಗುಬಾಯಿ ಜಿತುರೆ, ಅಕ್ಕಮಹಾದೇವಿ ನಾಗೇಶ್​, ಚಂದ್ರಶೇಖರ ಉಟಗೂರ, ರವಿ ಮದನಕರ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net