ಸುಸ್ಥಿರ ಅಭಿವೃದ್ಧಿಗೆ ಸೂಕ್ಷ್ಮಜೀವ ವಿಜ್ಞಾನ ಸಹಕಾರಿ

ಗುಲ್ಬರ್ಗ ವಿವಿ ಸೂಕ್ಷ್ಮಜೀವಶಾಸ್ತ್ರ ವಿಭಾಗದ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ಸುವರ್ಣ ಮಹೋತ್ಸವ ಮತ್ತು ರಾಷ್ಟ್ರೀಯ ಸಮ್ಮೇಳನವನ್ನು ಆಂಧ್ರಪ್ರದೇಶ ಶಾಸಕ ಗದ್ದೆ ರಾಮಮೋಹನ್​ ಉದ್ಘಾಟಿಸಿದರು. ಅನುರಾಧ ಗದ್ದೆ, ಕುಲಪತಿ ಪ್ರೊ.ಶಶಿಕಾಂತ ಉಡಿಕೇರಿ, ಪ್ರೊ.ದಯಾನಂದ ಅಗಸರ್​, ಪ್ರೊ.ರಮೇಶ ಲಂಡನಕರ್​, ಪ್ರೊ.ಕೆ.ಲಿಂಗಪ್ಪ, ಪ್ರೊ.ಎಂ.ಬಿ.ಸುಲೋಚನಾ ಇತರರಿದ್ದರು.
ಗುಲ್ಬರ್ಗ ವಿವಿ ಸೂಕ್ಷ್ಮಜೀವಶಾಸ್ತ್ರ ವಿಭಾಗದ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ಸುವರ್ಣ ಮಹೋತ್ಸವ ಮತ್ತು ರಾಷ್ಟ್ರೀಯ ಸಮ್ಮೇಳನವನ್ನು ಆಂಧ್ರಪ್ರದೇಶ ಶಾಸಕ ಗದ್ದೆ ರಾಮಮೋಹನ್​ ಉದ್ಘಾಟಿಸಿದರು. ಅನುರಾಧ ಗದ್ದೆ, ಕುಲಪತಿ ಪ್ರೊ.ಶಶಿಕಾಂತ ಉಡಿಕೇರಿ, ಪ್ರೊ.ದಯಾನಂದ ಅಗಸರ್​, ಪ್ರೊ.ರಮೇಶ ಲಂಡನಕರ್​, ಪ್ರೊ.ಕೆ.ಲಿಂಗಪ್ಪ, ಪ್ರೊ.ಎಂ.ಬಿ.ಸುಲೋಚನಾ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಆಂಧ್ರ ಶಾಸಕ ಗದ್ದೆ ರಾಮಮೋಹನ್​ ಅಭಿಮತ
  • ಗುಲ್ಬರ್ಗ ವಿವಿಯಲ್ಲಿ ಸುವರ್ಣ ಮಹೋತ್ಸವ
ಕಲಬುರಗಿ: ದೇಶದ ಸುಸ್ಥಿರ ಅಭಿವೃದ್ಧಿ ಮತ್ತು ಮಾನವ ಜೀವದ ಸುರಕ್ಷತೆ ಕಾಪಾಡಲು ಸೂಕ್ಷ್ಮಜೀವ ವಿಜ್ಞಾನ ಮತ್ತು ತಂತ್ರಾಜ್ಞಾನ ಸಹಕಾರಿಯಾಗಿದೆ. ಭವಿಷ್ಯದ ನಾಳೆಗಾಗಿ ಆರೋಗ್ಯಕರ ಪ್ರಪಂಚ ರೂಪಿಸಲು ಕೃಷಿ, ಪರಿಸರ, ವೈದ್ಯಕಿಯ, ಕೈಗಾರಿಕೆ ಮತ್ತು ಔಷಧ ಕ್ಷೇತ್ರಗಳಲ್ಲಿನ ಸಂಶೊಧನೆ ಜೀವರಣೆಗೆ ನೆರವಾಗಲಿದೆ ಎಂದು ಆಂಧ್ರಪ್ರದೇಶದ ಶಾಸಕರೂ ಆದ ಗುಲ್ಬರ್ಗ ವಿವಿ ಸೂಕ್ಷ್ಮಜೀವಶಾಸ್ತ್ರ ವಿಭಾಗದ ಹಳೆಯ ವಿದ್ಯಾರ್ಥಿ ಗದ್ದೆ ರಾಮಮೋಹನ್​ ಹೇಳಿದರು.
ಗುಲ್ಬರ್ಗ ವಿಶ್ವವಿದ್ಯಾಲಯದ ಸೂಕ್ಷ್ಮಜೀವಶಾಸ್ತ್ರ ವಿಭಾಗ ಹಾಗೂ ಹಳೆಯ ವಿದ್ಯಾರ್ಥಿಗಳ ಸಂಘದ ಸಹಯೋಗದಡಿ ವಿಭಾಗದ ಪ್ಯಾಶ್ಚರ್​ ಸಭಾಂಗಣದಲ್ಲಿ ಸುವರ್ಣ ಮಹೋತ್ಸವ ವರ್ಷಾಚರಣೆ ಮತ್ತು ಸೂಕ್ಷ್ಮಜೀವಿಗಳ ವ್ಯಾಪ್ತಿ: ಉತ್ತಮ ನಾಳೆಗಾಗಿ ತಂತ್ರಾಜ್ಞಾನ ಕುರಿತ ಎರಡು ದಿನದ ರಾಷ್ಟ್ರೀಯ ಸಮ್ಮೇಳನಕ್ಕೆ ಗುರುವಾರ ಚಾಲನೆ ನೀಡಿದ ಅವರು, ಕೋವಿಡ್​ನಂತಹ ವಿಷಮ ಸ್ಥಿತಿಯಲ್ಲಿ ಜಾಗತಿಕ ಆರೋಗ್ಯ ರಣೆ ಸೂಕ್ಷ್ಮಜೀವ ವಿ ನ ಮತ್ತು ತಂತ್ರಾಜ್ಞಾನ ಕ್ಷೇತ್ರಗಳಿಗೆ ಜೀವ ರಕ್ಷಣೆ ಸವಾಲಾಗಿ ಪರಿಣಮಿಸಿತ್ತು. ಮುಂದಿನ ಪೀಳಿಗೆ ಭವಿಷ್ಯ ಮತ್ತು ಆರೋಗ್ಯಕ್ಕಾಗಿ ಸೋಂಕಿನ ಅರಿವು, ರೋಗದ ಮುನ್ನೆಚ್ಚರಿಕೆ, ನಿಯಂತ್ರಣ, ಲಸಿಕೆ, ಔಷಧ ಮತ್ತು ಚಿಕಿತ್ಸೆ ಸುಧಾರಣೆ ಬಗ್ಗೆ ಮುಂಜಾಗ್ರತೆ ವಹಿಸುವುದು ಅಷ್ಟೇ ಮುಖ್ಯ. ತಂತ್ರಾಜ್ಞಾನ ಬೆಳೆದಂತೆ ವೈದ್ಯ ವಿಜ್ಞಾನದ ಮುಂದೆ ಹಲವು ಸವಾಲುಗಳು ಎದುರಾಗುತ್ತಿವೆ. ಹೀಗಾಗಿ ಸೂಕ್ಷ್ಮಜಜೀವಶಾಸ್ತ್ರ ಮತ್ತು ಮುಂದುವರಿದ ತಂತ್ರಾಜ್ಞಾನದಲ್ಲಿನ ಇತ್ತೀಚಿನ ಪ್ರವೃತ್ತಿ ಮತ್ತು ಪ್ರಯೋಗಗಳ ಬಗ್ಗೆ ವಿದ್ಯಾರ್ಥಿಗಳು ಆಸಕ್ತಿ ವಹಿಸಿ ತಿಳಿದುಕೊಳ್ಳಬೇಕು ಎಂದು ಸಲಹೆ ಮಾಡಿದರು.
ವಿವಿ ಕುಲಪತಿ ಪ್ರೊ.ಶಶಿಕಾಂತ ಉಡಿಕೇರಿ ಮಾತನಾಡಿ, ಸುವರ್ಣ ಮಹೋತ್ಸವ ಮತ್ತು ಸಮ್ಮೇಳನ ಆಯೋಜನೆ ಶಿಕ್ಷಕರು ಮತ್ತು ವಿದ್ಯಾರ್ಥಿಗಳ ಸ್ನೇಹ ಬಾಂಧವ್ಯ ಬೆಸೆಯುವ ಕಾರ್ಯಕ್ರಮ. ವಿಭಾಗ ಆರಂಭದಿಂದ ಪ್ರಾಧ್ಯಾಪಕರು ವಿದ್ಯಾರ್ಥಿಗಳನ್ನು ಬೋಧನೆ ಕಡೆ ಸೆಳೆದು ಉತ್ತಮ ಪ್ರತಿಭೆಗಳನ್ನಾಗಿ ರೂಪಿಸಿದ್ದಾರೆ. ವಿಭಾಗ ಸಾಧನೆಯಿಂದ ಈ ಸಮ್ಮೇಳನ ಜರುಗುತ್ತಿದೆ ಎಂದರು.
ವಿಶ್ರಾಂತ ಕುಲಪತಿ ಪ್ರೊ.ದಯಾನಂದ ಅಗಸರ ಮಾತನಾಡಿ, ಪ್ರಸ್ತುತ ದಿನಗಳಲ್ಲಿ ಮಾನವ ಜೀವರಣೆ ಮತ್ತು ಭವಿಷ್ಯದ ನಾಳೆಗಾಗಿ ಆಲೋಚಿಸುವ ಅಗತ್ಯವಿದೆ. ಆಧುನಿಕ ಜೀವನ ಶೈಲಿಯಿಂದ ಜೀವ ಸಂಕುಲವನ್ನು ಅನೇಕ ಅಪಾಯಕಾರಿ ಬ್ಯಾಕ್ಟೀರಿಯಾ ಮತ್ತು ವೈರಸ್​ಗಳು ಬಾಧಿಸುತ್ತಿವೆ. ಸೂಕ್ಷ್ಮಜೀವಶಾಸ್ತ್ರ ವಿಭಾಗದ ಏಳಿಗೆಗೆ ಶ್ರಮಿಸಿರುವ ಎಲ್ಲ ಪ್ರಾಧ್ಯಾಪಕರನ್ನು ನಾವಿಂದು ಸ್ಮರಿಸಬೇಕು ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ವಿಭಾಗದ ಮುಖ್ಯಸ್ಥೆ ಪ್ರೊ.ಎಂ.ಬಿ. ಸುಲೋಚನಾ ಮಾತನಾಡಿ, ವಿಭಾಗದ ಸುವರ್ಣ ಸಂಭ್ರಮ ಮತ್ತು ಸಮ್ಮೇಳನದಲ್ಲಿ ಭಾಗವಹಿಸುವ ಮೂಲಕ ವಿದ್ಯಾರ್ಥಿಗಳಲ್ಲಿ ಕಲಿಕೆ ಉತ್ಸಾಹ, ಸಂಶೋಧನೆಯಲ್ಲಿನ ಹೊಸ ಪರಿಕಲ್ಪನೆ, ನಾವೀನ್ಯ ಬೆಳವಣಿಗೆ ಮತ್ತು ಇತ್ತೀಚಿನ ತಂತ್ರಾನದ ಅರಿವಿನ ಗ್ರಹಿಕೆ ಸಾಧ್ಯವಾಗಲಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಹಳೆಯ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಪ್ರೊ.ಚಂದ್ರಕಾಂತ ಕೆಳಮನಿ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿ, ಸೂಕ್ಷ್ಮಜೀವಶಾಸ್ತ್ರ ವಿಭಾಗ 50 ವರ್ಷಗಳಲ್ಲಿ ಶೈಕ್ಷಣಿಕ ಮತ್ತು ಸಂಶೋಧನೆಯಲ್ಲಿ ಹಲವು ಪ್ರಥಮಗಳನ್ನು ಸಾಧಿಸಿದೆ. ವಿಭಾಗದ ವಿದ್ಯಾರ್ಥಿಗಳು ದೇಶ-ವಿದೇಶದ ಪ್ರಸಿದ್ಧ ಸಂಸ್ಥೆಗಳಲ್ಲಿ ಬೋಧಕ, ಸಂಶೋಧಕ, ಕೈಗಾರಿಕೋದ್ಯಮಿ, ಉದ್ಯಮಿಗಳಾಗಿ ಔಷಧ ತಯಾರಿಕೆ ಕಂಪನಿಗಳಲ್ಲಿ ವಿಾನಿಗಳಾಗಿ ಗುರುತಿಸಿಕೊಂಡಿದ್ದಾರೆ. ದಕ್ಷಿಣ ಭಾರತದ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಒಂದಾಗಿರುವ ವಿಭಾಗ ಉತಷ್ಟ ಸಂಶೊಧನೆ ಮತ್ತು ಶ್ರೇಷ್ಠ ಪ್ರಕಟಣೆ ತಂದಿದೆ ಎಂದು ತಿಳಿಸಿದರು.
ಧಾರವಾಡ ಕೃಷಿ ವಿಾನ ವಿವಿ ಸೂಕ್ಷ್ಮಜೀವಶಾಸ್ತ್ರ ವಿಭಾಗದ ನಿವೃತ್ತ ಪ್ರಾಧ್ಯಾಪಕ ಡಾ.ವಿಜಯಕುಮಾರ ಸಾವಳಗಿ, ಅನುರಾಧ ಗದ್ದೆ, ಕುಲಸಚಿವ ಪ್ರೊ.ರಮೇಶ ಲಂಡನಕರ್​, ಸಿಂಡಿಕೇಟ್​ ಸದಸ್ಯ ಪೀರಜಾದೆ ಫಹಿಮುದ್ದೀನ್​, ಹಳೆಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಪ್ರೊ.ಕೆ. ಲಿಂಗಪ್ಪ ಇತರರಿದ್ದರು. ಡಾ.ಯಶವಂತ ಮೆಂಜಿ, ಡಾ.ಮಹೇಶ ದಿವಟರ ಅತಿಥಿಗಳನ್ನು ಪರಿಚಯಿಸಿದರು. ನರ್ಮದಾ ತಳ್ಳೊಳ್ಳಿ ವಂದಿಸಿದರು. ಹುಜ್ಮಾ ಮತ್ತು ಹುಸ್ನಾ ನಿರೂಪಣೆ ಮಾಡಿದರು. ಸಮ್ಮೇಳನದ ಸ್ಮರಣ ಸಂಚಿಕೆ ಬಿಡುಗಡೆ ಮಾಡಲಾಯಿತು.
"

ದಿನದಿಂದ ದಿನಕ್ಕೆ ಜನರಲ್ಲಿ ಆರೋಗ್ಯ ಕಾಳಜಿ, ಉತ್ತಮ ಆಹಾರ ಸೇವನೆ ಮತ್ತು ಸಾವಯವ ಪದಾರ್ಥಗಳ ಬಳಕೆ ಬಗ್ಗೆ ಅರಿವು ಮೂಡುತ್ತಿದೆ. ಈ ಮೂಲಕ ಸೋಂಕುಗಳ ಬಗ್ಗೆ ಎಚ್ಚರಿಕೆ ಮತ್ತು ಆರಾಮದಾಯಕ ಜೀವನ ಕಂಡುಕೊಳ್ಳಲು ಸಾಧ್ಯವಾಗಿದೆ.

— > ಪ್ರೊ.ಶಶಿಕಾಂತ ಉಡಿಕೇರಿ ಕುಲಪತಿ, ಗುಲ್ಬರ್ಗ ವಿವಿ


ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net