ಮುಖ್ಯವಾಗಿ ಪಂಚ ಗ್ಯಾರಂಟಿ ಯೋಜನೆಗಳು ಮಹಿಳಾ ಮತದಾರರ ಮೇಲೆ ಪರಿಣಾಮ ಬೀರಿದಂತೆ ಸ್ಪಷ್ಟವಾಗಿ ಕಂಡು ಬರುತ್ತಿದೆ. ವಿಶೇಷವಾಗಿ -Àಲಾನುಭವಿ ಮಹಿಳೆಯರನ್ನು ಮಾತನಾಡಿಸಿದಾಗ ಅವರ ಮಾತುಗಳಲ್ಲಿ ಅದು ಸ್ಪಷ್ಟವಾಗಿ ಗೋಚರಿಸುತ್ತಿತ್ತು. ಈ ದುಭಾರಿ ಕಾಲದಲ್ಲಿ ಗ್ಯಾರಂಟಿಗಳು ಕುಟುಂಬಕ್ಕೆ ಹೆಚ್ಚಿನ ನೆರವಾಗಿವೆ ಎನ್ನುವ ಉದ್ಘಾರ ತೆಗೆಯುತ್ತಿದ್ದರು. ಇದರ ಜೊತೆಗೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ನಿರಂತರ ಪ್ರಚಾರ, ಮೆಡಿಕಲ್ ಕಾಲೇಜಿಗೆ ಅಡಿಗಲ್ಲು, ಮುಳುಗಡೆ ಜಮೀನಿಗೆ ಪರಿಹಾರದ ಚೆಕ್ ವಿತರಣೆಗೆ ಚಾಲನೆ, ಬಾಗಲಕೋಟೆ ನಗರದ ವ್ಯಾಪಾರಸ್ಥರಿಗೆ ವಾಣಿಜ್ಯ ಮಳಿಗೆ ಮಾಡಿಕೊಡುವ ಭರವಸೆ, ಬಿಜೆಪಿ ಗೆದ್ದರೂ ಕ್ಷೇತ್ರದಲ್ಲಿ ಕೆಲಸ ಆಗಲ್ಲ. ಅದೇ ಕಾಂಗ್ರೆಸ್ ಅಭ್ಯರ್ಥಿ ಗೆಲ್ಲಿಸಿದರೆ ಅಭಿವೃದ್ಧಿ ಕಾರ್ಯ ಮಾಡುತ್ತೇವೆ ಎನ್ನುವ ಕಾಂಗ್ರೆಸ್ ಮುಖಂಡರ ಪ್ರಚಾರ ವರಸೆ, ಕತ್ತಲ ರಾತ್ರಿ ಕರಾಮತ್ತು, ಚುನಾವಣೆ ಘೋಷಣೆ ಪೂರ್ವ ಸರ್ಕಾರದಿಂದ ವಿವಿಧ ಸಮುದಾಯ ಭವನಗಳ ಮಂಜೂರಾತಿ ಎಲ್ಲವೂ ಸೇರಿಕೊಂಡು ವಿಪಕ್ಷ ಬಿಜೆಪಿ ಚುನಾವಣೆಯಲ್ಲಿ ತರಗುಟ್ಟಿದಂತಾಯಿತು.