ಗೋ ಪೂಜೆಯಿಂದ ಮಾನಸಿಕ ನೆಮ್ಮದಿ

ಯಾದಗಿರಿ ಸಮೀಪದ ಅಬ್ಬೆತುಮಕೂರಿನ ವಿಶ್ವಾರಾಧ್ಯರ ಮಠದಲ್ಲಿ ಶನಿವಾರ ಅಮಾವಾಸ್ಯೆ ನಿಮಿತ್ತ ಪೀಠಾಧಿಪತಿ ಶ್ರೀ ಡಾ.ಗಂಗಾಧರ ಸ್ವಾಮೀಜಿ ಗೋವಿಗೆ ಪ್ರಸಾದ ನೀಡಿದರು. ಕಿರಿಯ ಶ್ರೀ ಶಿವಶೇಖರ ವಿಶ್ವಾರಾಧ್ಯ ಶಿವಾಚಾರ್ಯ ಇದ್ದರು.
ಯಾದಗಿರಿ ಸಮೀಪದ ಅಬ್ಬೆತುಮಕೂರಿನ ವಿಶ್ವಾರಾಧ್ಯರ ಮಠದಲ್ಲಿ ಶನಿವಾರ ಅಮಾವಾಸ್ಯೆ ನಿಮಿತ್ತ ಪೀಠಾಧಿಪತಿ ಶ್ರೀ ಡಾ.ಗಂಗಾಧರ ಸ್ವಾಮೀಜಿ ಗೋವಿಗೆ ಪ್ರಸಾದ ನೀಡಿದರು. ಕಿರಿಯ ಶ್ರೀ ಶಿವಶೇಖರ ವಿಶ್ವಾರಾಧ್ಯ ಶಿವಾಚಾರ್ಯ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಡಾ.ಗಂಗಾಧರ ಶ್ರೀಗಳ ಅಭಿಮತ
  • ಅಬ್ಬೆತುಮಕೂರಿನಲ್ಲಿ ಶಿವಾನುಭವ ಗೋಷ್ಠಿ
ಯಾದಗಿರಿ: ಗೋಮಾತೆಗೆ ಪೂಜೆ ಸಲ್ಲಿಸುವುದರಿಂದ ಮತ್ತು ಅವುಗಳ ರಕ್ಷಣೆಯಿಂದ ಮಾನಸಿಕ ನೆಮ್ಮದಿ ಜತೆ ಪವಿತ್ರ ಜಾನುವಾರು ಸಂತಾನ ಉಳಿಸಿದ ಶ್ರೇಯಸ್ಸು ಲಭಿಸುತ್ತದೆ ಎಂದು ಶ್ರೀ ಡಾ.ಗಂಗಾಧರ ಸ್ವಾಮೀಜಿ ಹೇಳಿದರು.
ಅಬ್ಬೆತುಮಕೂರಿನಲ್ಲಿ ಶನಿವಾರ ಅಮಾವಾಸ್ಯೆ ನಿಮಿತ್ತ ಗೋಮಾತೆಗೆ ಪ್ರಸಾದ ನೀಡುವ ಮೂಲಕ ಮಾಸಿಕ ಶಿವಾನುಭವ ಗೋಷ್ಠಿಗೆ ಚಾಲನೆ ನೀಡಿ ಮಾತನಾಡಿದ ಅವರು, ಹಸು ಹಾಲು ನೀಡಿದರೇ, ಎತ್ತು ರೈತನ ಜೀವನಾಡಿಯಾಗಿ ಕೆಲಸ ಮಾಡುತ್ತದೆ. ಹೀಗಾಗಿ ಜಾನುವಾರು ಸಂತತಿ ಉಳಿಸಿ ಬೇಳಿಸುವ ಕೆಲಸ ಪ್ರತಿಯೊಬ್ಬರಿಂದ ಆಗಬೇಕು ಎಂದರು.
ಬೇಸಿಗೆಯ ಈ ವೇಳೆಯಲ್ಲಿ ಜಾನುವಾರು, ಪಶು, ಪಕ್ಷಿಗಳಿಗೆ ಕುಡಿಯುವ ನೀರಿನ ಮತ್ತು ಆಹಾರ ವ್ಯವಸ್ಥೆ ಮಾಡಿದರೆ ಅದರಂತಹ ಪುಣ್ಯದ ಕೆಲಸ ಬೇರೊಂದಿಲ್ಲ. ತಮ್ಮ ಸುತ್ತ, ಮುತ್ತ ಎಲ್ಲಿಯೇ ಆಗಲಿ ಮೂಕ ಪ್ರಾಣಿಗಳು ಕಂಡರೆ ಅವುಗಳಿಗೆ ನೀರು, ಆಹಾರ ನೀಡುವ ಕಾಯಕ ಮಾಡಿ ಎಂದು ಸೇರಿದ ಭಕ್ತರಿಗೆ ಶ್ರೀಗಳು ಕಿವಿಮಾತು ಹೇಳಿದರು.
ವಿಶ್ವಾರಾಧ್ಯರು ತಮ್ಮ ಜೀವಿತದ ಅವಧಿಯಲ್ಲಿ ಸಕಲ ಜೀವರಾಶಿಗಳನ್ನು ಅತಿಯಾಗಿ ಪ್ರೀತಿಸುತ್ತಿದ್ದರು. ಅದರಲ್ಲೂ ಪ್ರಾಣಿ, ಪಕ್ಷಿಗಳಿಗೆ ಹೊಲದಲ್ಲಿ ಕಾಳು, ಕಡ್ಡಿ, ನೀರಿನ ವ್ಯವಸ್ಥೆ ಮಾಡುವ ಮೂಲಕ ಮೂಕ ಜೀವಗಳಿಗೆ ದೇವರಾಗಿದ್ದರು ಎಂದರು.
ಕಿರಿಯಶ್ರೀ ಶಿವಶೇಖರ ವಿಶ್ವಾರಾಧ್ಯ ಶಿವಾಚಾರ್ಯ, ಹಿರಿಯ ರಾಜಕೀಯ ಮುಖಂಡ ಶ್ರೀನಿವಾಸರೆಡ್ಡಿ ಚನ್ನೂರ್​, ಸರ್ಕಾರಿ ಪದವಿ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಸುಭಾಷಚಂದ್ರ ಕೌಲಗಿ, ವೇದಮೂರ್ತಿ ಬಸವರಾಜ ಶಾಸಿ ಇತರರಿದ್ದರು. ಬೆಳಗ್ಗೆ ವಿಶ್ವಾರಾಧ್ಯರ, ಭಗಳಾಂಭಿಕ ದೇವಿ ಮತ್ತು ಅಷ್ಟಸಿದ್ದಿಗಳ ಮೂರ್ತಿಗಳಿಗೆ ವಿಶೇಷ ಪೂಜೆ ನಡೆಯಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net