371(ಜೆ) ಸಮಗ್ರ ಅನುಷ್ಠಾನ ಚಿಂತನೆ ಸಭೆ 29ಕ್ಕೆ

ಚಿಂಚೋಳಿಯಲ್ಲಿ ಹಮ್ಮಿಕೊಂಡಿದ್ದ ಸಭೆಯಲ್ಲಿ ಹೈದರಾಬಾದ್​ ಕರ್ನಾಟಕ ಹೋರಾಟ ಸಮಿತಿ ತಾಲೂಕು ಅಧ್ಯ ಚಿತ್ರಶೇಖರ ಪಾಟೀಲ್​ ಮಾತನಾಡಿದರು. ಗೌತಮ ಪಾಟೀಲ್​, ಅಬ್ದುಲ್​ ಬಾಸೀದ್​, ಗೋಪಾಲರೆಡ್ಡಿ ಕೊಳ್ಳೂರ, ಉಮೇಶ ಪಾಟೀಲ್​, ಸಂತೋಷ ರೆಡ್ಡಿ, ಕೆ.ಎಂ.ಬಾರಿ ಇದ್ದರು.
ಚಿಂಚೋಳಿಯಲ್ಲಿ ಹಮ್ಮಿಕೊಂಡಿದ್ದ ಸಭೆಯಲ್ಲಿ ಹೈದರಾಬಾದ್​ ಕರ್ನಾಟಕ ಹೋರಾಟ ಸಮಿತಿ ತಾಲೂಕು ಅಧ್ಯ ಚಿತ್ರಶೇಖರ ಪಾಟೀಲ್​ ಮಾತನಾಡಿದರು. ಗೌತಮ ಪಾಟೀಲ್​, ಅಬ್ದುಲ್​ ಬಾಸೀದ್​, ಗೋಪಾಲರೆಡ್ಡಿ ಕೊಳ್ಳೂರ, ಉಮೇಶ ಪಾಟೀಲ್​, ಸಂತೋಷ ರೆಡ್ಡಿ, ಕೆ.ಎಂ.ಬಾರಿ ಇದ್ದರು.
Published on
ಚಿಂಚೋಳಿ : ಸಂವಿಧಾನದ 371 (ಜೆ) ಪರಿಣಾಮಕಾರಿ ಅನುಷ್ಠಾನ, ಅದರ ಉದ್ದೇಶಗಳ ಸಂಪೂರ್ಣ ಸಾಕಾರ, ಹೈದರಾಬಾದ್​ ಕರ್ನಾಟಕ ಹೋರಾಟ ಸಮಿತಿ ಬಲವರ್ಧನೆ ಹಾಗೂ ಸವಾಲುಗಳನ್ನು ಸಮರ್ಥವಾಗಿ ಎದುರಿಸಲು ಕೈಗೊಳ್ಳಬೇಕಾದ ಹೋರಾಟದ ರೂಪರೇಷಗಳ ಕುರಿತು ಚರ್ಚಿಸಲು ಜು.29ರಂದು ಚಿಂತನೆ ಸಭೆ ಹಮ್ಮಿಕೊಳ್ಳಲಾಗಿದೆ ಎಂದು ಹೈದರಾಬಾದ್​ ಕರ್ನಾಟಕ ಹೋರಾಟ ಸಮಿತಿ ತಾಲೂಕು ಅಧ್ಯ ಚಿತ್ರಶೇಖರ ಪಾಟೀಲ್​ ತಿಳಿಸಿದರು.
ವೈಜನಾಥ ಪಾಟೀಲ್​ ಸ್ಮಾರಕ ಸಭಾಂಗಣದಲ್ಲಿ ಹೈದರಾಬಾದ್​ ಕರ್ನಾಟಕ ಹೋರಾಟ ಸಮಿತಿಯಿಂದ ಭಾನುವಾರ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ಮಾಜಿ ಸಚಿವ ಹಾಗೂ 371(ಜೆ) ರೂವಾರಿ ವೈಜನಾಥ ಪಾಟೀಲ್​ ಅವರ ಜನ್ಮದಿನ ಅಂಗವಾಗಿ ಜು.29ರಂದು ಬೆಳಗ್ಗೆ 11ಕ್ಕೆ ಕಲಬುರಗಿಯ ಕೆಕೆಸಿಸಿಐ ಸಭಾಂಗಣದಲ್ಲಿ 371(ಜೆ) ಸಮಗ್ರ ಅನುಷ್ಠಾನ ಚಿಂತನೆ ಸಭೆ ಹಮ್ಮಿಕೊಳ್ಳಲಾಗಿದೆ ಎಂದರು.
ಕಲಬುರಗಿಯಲ್ಲಿ ಪ್ರತ್ಯೇಕ ರೈಲ್ವೆ ವಿಭಾಗ ಸ್ಥಾಪನೆ, ಕೆಕೆಆರ್​ಡಿಬಿಗೆ ಹೆಚ್ಚಿನ ಅನುದಾನ ನೀಡಬೇಕು, ಕೈಗಾರಿಕಾ ಕಾರಿಡಾರ್​ ಮತ್ತು ವಿಶೇಷ ಆರ್ಥಿಕ ವಲಯಗಳ ಸ್ಥಾಪನೆ, 371(ಜೆ) ಹುದ್ದೆಗಳ ಭರ್ತಿಯಲ್ಲಿ ಪಾರದರ್ಶಕತೆ, ಗೋವಿಂದರಾವ ಸಮಿತಿಯ ಶಿಫಾರಸುಗಳ ತ್ವರಿತ ಜಾರಿ ಮಾಡಬೇಕು. ಪ್ರದೇಶದ ನೈಸರ್ಗಿಕ ಸಂಪನ್ಮೂಲಗಳ ಸಮರ್ಪಕ ಬಳಕೆ, ಕಲ್ಯಾಣ ಕರ್ನಾಟಕದ 7 ಜಿಲ್ಲೆಗಳ ಸಮರ್ಪಕ ಅಭಿವೃದ್ಧಿ ಸೇರಿ ಹಲವು ವಿಷಯಗಳ ಕುರಿತು ಚರ್ಚಿಸಲಾಗುವುದು. ಕಲ್ಯಾಣ ಕರ್ನಾಟಕದ 7 ಜಿಲ್ಲೆಗಳ ಪ್ರಮುಖ ಮುಖಂಡರು, ಹೋರಾಟ ಸಮಿತಿಯ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಮನವಿ ಮಾಡಿದರು.
ಜಿಪಂ ಮಾಜಿ ಸದಸ್ಯ ಗೌತಮ ಪಾಟೀಲ್​, ಪುರಸಭೆ ಮಾಜಿ ಅಧ್ಯ ಅಬ್ದುಲ್​ ಬಾಸೀದ್​, ಪ್ರಮುಖರಾದ ಗೋಪಾಲರೆಡ್ಡಿ ಕೊಳ್ಳೂರ, ಉಮೇಶ ಪಾಟೀಲ್​, ಸಂತೋಷ ರೆಡ್ಡಿ, ಕೆ.ಎಂ.ಬಾರಿ, ಶ್ರೀಮಂತ ಕಟ್ಟಿಮನಿ, ಸುರೇಶ ನಿಡಗುಂದಾ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net