ಭಾಲ್ಕಿ: ಆನ್ಲೈನ್ನಲ್ಲಿ ಔಷಧ ಮಾರಾಟ ಖಂಡಿಸಿ ರಾಜ್ಯಾದ್ಯಂತ ಔಷಧ ಮಳಿಗೆಗಳಿಂದ ನಡೆಸಲಾಗಿರುವ ಮುಷ್ಕರಕ್ಕೆ ಬುಧವಾರ ಎಐಒಸಿಡಿ ಸಂಘಟನೆಯ ಪದಾಧಿಕಾರಿಗಳಿಂದ ಕರೆ ಕೊಟ್ಟ ಬಂದ್ಗೆ ಭಾಲ್ಕಿ ಪಟ್ಟಣದ ಸೇರಿದಂತೆ ಪಕ್ಕದ ಪ್ರತಿಷ್ಠಿತ ಗ್ರಾಮಗಳಲ್ಲಿಯ ಎಲ್ಲಾ ಮೆಡಿಕಲ್ ಅಂಗಡಿಗಳು ಒಂದು ದಿವಸದ ಮಟ್ಟಿಗೆ ಬಂದ್ ಮಾಡಿ ಯಶಸ್ಸು ಪ್ರದರ್ಶಿಸಿದರು. ಬೆಳಗ್ಗೆಯಿಂದಲೇ ಯಾವುದೇ ಮೆಡಿಕಲ್ಗಳು ತೆರೆಯದ ಕಾರಣ ಕೆಲಕಾಲ ರೋಗಿಗಳು ಪರದಾಡುವಂತಾಯಿತು. ಎಲ್ಲರೂ ಸರ್ಕಾರಿ ಆಸ್ಪತ್ರೆ ಮತ್ತು ಜನೌಷಧಿ ಕೇಂದ್ರಗಳಿಗೆ ಮುಗಿಬೀಳುವಂತಾಯಿತು. ಎಐಒಸಿಡಿ ನೀಡಿದ ಮುಷ್ಕರದ ಕರೆಗೆ ಆಸ್ಪತ್ರೆಗಳ ಒಳ ಮೆಡಿಕಲ್ಗಳು, ಮೆಡಿಕೇರ್, ಮೆಡಿಪ್ಲಸ್, ಅಪೊಲೋ ಸೇರಿ ಎಲ್ಲ ಮೆಡಿಕಲ್ಗಳು ಸಾಢ್ ನೀಡಿದ್ದರಿಂದ ಸಾರ್ವಜನಿಕರು, ರೋಗಿಗಳು ಪರಿತಪಿಸುವಂತಾಯಿತು. ಕೆಲ ಆಸ್ಪತ್ರೆಗಳಲ್ಲಿ ಸ್ಯಾಂಪಲ್ ಔಷಧಿಗಳಿಂದಲೇ ರೋಗಿಗಳಿಗೆ ತುರ್ತು ಚಿಕಿತ್ಸೆ ನೀಡುವಂತಾಯಿತು.