ಯುವಕರು ವ್ಯಸನಗಳಿಂದ ದೂರವಿರಲಿ

 ಬಸವಕಲ್ಯಾಣದ ಬಿಕೆಡಿಬಿ ಸಭಾಂಗಣದಲ್ಲಿ ನಶೆಮುಕ್ತ ಭಾರತ ಅಭಿಯಾನದ ನಿಮಿತ್ತ ಆಯೋಜಿಸಿದ್ದ ಕಾರ್ಯಕ್ರಮಕ್ಕೆ ಸಹಾಯಕ ಆಯುಕ್ತ ಪ್ರಕಾಶ ಕುದರಿ ಚಾಲನೆ ನೀಡಿದರು. ರಾಜಯೋಗಿನಿ ಬ್ರಹ್ಮಕುಮಾರಿ ಸರಸ್ವತಿ ಬಹನಜಿ, ತಹಸೀಲ್ದಾರ್​ ಡಾ.ದತ್ತಾತ್ರೇಯ ಗಾದಾ, ಬಿಕೆಡಿಬಿ ತಹಸೀಲ್ದಾರ್​ ಶಾಂತಗೌಡ ಬಿರಾದಾರ, ಗ್ರೇಡ್​-2 ತಹಸೀಲ್ದಾರ್​ ಡಾ.ರಮೇಶಬಾಬು ಹಾಲು,  ದಿಲೀಪಕುಮಾರ ಉತ್ತಮ,  ಮಿಲನಕುಮಾರ, ಬಿಕೆ ಬೀರಪ್ಪ ಗುಂಜೆಟ್ಟೆ ಇದ್ದರು.

Published on

ಪ್ರಮುಖ ಮುಖ್ಯಾಂಶಗಳು

  • ಎಸಿ ಪ್ರಕಾಶ ಕುದರಿ ಸಲಹೆ
  • ಕಲ್ಯಾಣದಲ್ಲಿ ನಶೆಮುಕ್ತ ಭಾರತ ಅಭಿಯಾನ ಚಾಲನೆ
ಬಸವಕಲ್ಯಾಣ: ಯುವಕರು ದುಶ್ಚಟಗಳಿಗೆ ಆಕರ್ಷಿತರಾಗದೇ ಉತ್ತಮ ಆರೋಗ್ಯ ಕಾಪಾಡಿಕೊಳ್ಳಬೇಕು. ವ್ಯಸನಗಳಿಂದ ದೂರ ಉಳಿಯುವ ಜತೆಗೆ ನಶೆಮುಕ್ತ ಭಾರತ ಅಭಿಯಾನದ ಯಶಸ್ವಿಗೆ ಕೈಜೋಡಿಸಬೇಕು ಎಂದು ಸಹಾಯಕ ಆಯುಕ್ತ ಪ್ರಕಾಶ ಕುದರಿ ಸಲಹೆ ನೀಡಿದರು.
ನಶೆಮುಕ್ತ ಭಾರತ ಅಭಿಯಾನದ ನಗರದ ಬಿಕೆಡಿಬಿ ಸಭಾಂಗಣದಲ್ಲಿ ಪ್ರಜಾಪಿತಾ ಬ್ರಹ್ಮಕುಮಾರಿ ಈಶ್ವರಿಯ ವಿಶ್ವವಿದ್ಯಾಲಯ ಕೇಂದ್ರದಿಂದ ಗುರುವಾರ ಆಯೋಜಿಸಿದ್ದ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಅಭಿಯಾನದ ನಿಮಿತ್ತ ಬಹನಜಿ ಜಾಗೃತಿ ಮೂಡಿಸುವ ಕಾರ್ಯ ಮಾಡುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಸಾನ್ನಿಧ್ಯ ವಹಿಸಿದ್ದ ಪ್ರಜಾಪಿತಾ ಬ್ರಹ್ಮಕುಮಾರಿ ಈಶ್ವರಿಯ ವಿಶ್ವವಿದ್ಯಾಲಯ ಬಸವಕಲ್ಯಾಣ ಕೇಂದ್ರದ ಮುಖ್ಯ ಸಂಚಾಲಕಿ ರಾಜಯೋಗಿನಿ ಬ್ರಹ್ಮಕುಮಾರಿ ಸರಸ್ವತಿ ಬಹನಜಿ ಮಾತನಾಡಿ, ನಶೆಮುಕ್ತರಾಗಬೇಕಾದರೆ ಶ್ರೇಷ್ಠ ವಿಚಾರ, ಸತ್ಸಂಗ ಅವಶ್ಯಕ. ಪರಮಾತ್ಮನನ್ನು ನೆನಪಿಸಿಕೊಂಡಾಗ ಸರಿಯಾದ ರ್ನಿಣಯ ಶಕ್ತಿ ಬರುವ ಜತೆಗೆ ಸುಖ ಶಾಂತಿ ದೊರಕುತ್ತದೆ ಎಂದು ಹೇಳಿದರು.
ತಹಸೀಲ್ದಾರ್​ ಡಾ.ದತ್ತಾತ್ರೇಯ ಗಾದಾ ಮಾತನಾಡಿ, ನಶೆಮುಕ್ತ ಭಾರತ ಅಭಿಯಾನದ ಅಡಿಯಲ್ಲಿ ದೇಶದ ಎಲ್ಲ ರಾಜ್ಯಗಳಲ್ಲಿಯೂ ಜಾಗೃತಿ ಮೂಡಿಸುವ ಕಾರ್ಯ ನಡೆಯುತ್ತಿದೆ. ಈ ಮಹತ್ವದ ಅಭಿಯಾನ ಯಶಸ್ವಿಗೊಳಿಸುವಲ್ಲಿ ಯುವಕರ ಪಾತ್ರ ಮಹತ್ವದ್ದು ಎಂದು ಹೇಳಿದರು.
ಬಿಕೆಡಿಬಿ ತಹಸೀಲ್ದಾರ್​ ಶಾಂತಗೌಡ ಬಿರಾದಾರ, ಗ್ರೇಡ್​-&2 ತಹಸೀಲ್ದಾರ್​ ಡಾ.ರಮೇಶಬಾಬು ಹಾಲು, ಸರ್ಕಾರಿ ನೌಕರರ ಸಂದ ತಾಲೂಕು ಅಧ್ಯಕ್ಷ ದಿಲೀಪಕುಮಾರ ಉತ್ತಮ, ಉಪ ತಹಸೀಲ್ದಾರ್​ ಮಿಲನಕುಮಾರ, ಬಿಕೆ ಬೀರಪ್ಪ ಗುಂಜೆಟ್ಟೆ ಸೇರಿದಂತೆ ಇತರರಿದ್ದರು. ಅಭಿಯಾನದ ನಿಮಿತ್ತ ಬಹನಜಿ ಪ್ರತಿಜ್ಞೆ ಮಾಡಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net