ಗಣಿತ ಜೀವನದ ಮೂಲಭೂತ ಕೌಶಲ

ಯಾದಗಿರಿಯಲ್ಲಿ ಸೋಮವಾರ ಆಯೋಜಿಸಿದ್ದ ಜಿಲ್ಲಾ ಮಟ್ಟದ ಗಣಿತ ವಿಚಾರ ಸಂಕಿರಣದಲ್ಲಿ ಗಣಿತ ವಿಷಯ ಸಾಧಕರನ್ನು ಡಿಡಿಪಿಐ ಸಿ.ಎಸ್​.ಮುಧೋಳ ಸನ್ಮಾನಿಸಿದರು. ರಂಗನಾಥ, ವೆಂಕಟರೆಡ್ಡಿ, ಮಂಜುನಾಥ ಗುರುಸುಣಿಗಿ, ಪ್ರದಿಪರೆಡ್ಡಿ ಇತರರಿದ್ದರು.
ಯಾದಗಿರಿಯಲ್ಲಿ ಸೋಮವಾರ ಆಯೋಜಿಸಿದ್ದ ಜಿಲ್ಲಾ ಮಟ್ಟದ ಗಣಿತ ವಿಚಾರ ಸಂಕಿರಣದಲ್ಲಿ ಗಣಿತ ವಿಷಯ ಸಾಧಕರನ್ನು ಡಿಡಿಪಿಐ ಸಿ.ಎಸ್​.ಮುಧೋಳ ಸನ್ಮಾನಿಸಿದರು. ರಂಗನಾಥ, ವೆಂಕಟರೆಡ್ಡಿ, ಮಂಜುನಾಥ ಗುರುಸುಣಿಗಿ, ಪ್ರದಿಪರೆಡ್ಡಿ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಡಿಡಿಪಿಐ ಸಿ.ಎಸ್​.ಮುಧೋಳ ಪ್ರತಿಪಾದನೆ
  • ಯಾದಗಿರಿಯಲ್ಲಿ ಜಿಲ್ಲಾ ಮಟ್ಟದ ವಿಚಾರ ಸಂಕಿರಣ
ಯಾದಗಿರಿ: ಗಣಿತ ಕೇವಲ ಪಠ್ಯ ವಿಷಯವಲ್ಲದೆ ಜೀವನದ ಪ್ರತಿಯೊಂದು ಕ್ಷೇತ್ರದಲ್ಲೂ ಬಳಸುವ ಮೂಲಭೂತ ಕೌಶಲ ಎಂದು ಡಿಡಿಪಿಐ ಸಿ.ಎಸ್​. ಮುಧೋಳ ಹೇಳಿದರು.
ಗಣಿತ ಕಲಿಕಾ ಆಂದೋಲನ ನಿಮಿತ್ತ ಶಾಲಾ ಶಿಣ ಇಲಾಖೆ ಹಾಗೂ ಅರ ಫೌಂಡೇಷನ್​ ಸಹಯೋಗದಡಿ ನಗರದಲ್ಲಿ ಸೋಮವಾರ ಆಯೋಜಿಸಿದ್ದ 2025&26ರ ಜಿಲ್ಲಾ ಮಟ್ಟದ ಗಣಿತ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದ ಅವರು, ಇಂದಿನ ತಂತ್ರಾನ ಯುಗದಲ್ಲಿ ಗಣಿತದ ಪಾತ್ರ ಇನ್ನಷ್ಟು ಮಹತ್ವ ಪಡೆದಿದ್ದು, ಮಕ್ಕಳ ಭವಿಷ್ಯ ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದರು.
ಮಕ್ಕಳಲ್ಲಿ ಗಣಿತದ ಬಗ್ಗೆ ಇರುವ ಭಯ ದೂರ ಮಾಡಿ ಆಸಕ್ತಿದಾಯಕ ಮತ್ತು ಅನುಭವಾತ್ಮಕವಾಗಿ ಕಲಿಸುವುದು ಶಿಕರ ಜವಾಬ್ದಾರಿ. ಕೇವಲ ಪಾಠ ಪುಸ್ತಕಗಳಿಗೆ ಸೀಮಿತವಾಗದೆ ಕ್ರಿಯಾತ್ಮಕ ಹಾಗೂ ಚಟುವಟಿಕೆ ಆಧಾರಿತ ಕಲಿಕೆಗೆ ಉತ್ತೇಜಿಸಬೇಕು ಎಂದು ಸಲಹೆ ನೀಡಿದರು.
ಅರ ಫೌಂಡೇಷನ್​ನ ಗಣಿತ ಕಲಿಕಾ ಆಂದೋಲನ ವಿಶೇಷವಾಗಿ ಗ್ರಾಮೀಣ ಮಕ್ಕಳಿಗೂ ಗುಣಮಟ್ಟದ ಶಿಣ ತಲುಪಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ. ಗಣಿತ ಕಲಿಕಾ ಕಿಟ್​ಗಳ ಮೂಲಕ ಮಕ್ಕಳಿಗೆ ಸ್ವತ@ ಕಲಿಯುವ ಅವಕಾಶ ಸಿಗುತ್ತಿದೆ. ಪಾಲಕರು ಮತ್ತು ಸಮುದಾಯದ ಸಹಭಾಗಿತ್ವ ಶಿಣದ ಗುಣಮಟ್ಟ ಹೆಚ್ಚಿಸಲು ಅಗತ್ಯವಾಗಿದೆ ಎಂದು ಹೇಳಿದರು.
ಅರ ಫೌಂಡೇಷನ್​ನ ಹಿರಿಯ ವಿಭಾಗೀಯ ೇತ್ರ ವ್ಯವಸ್ಥಾಪಕ ರಂಗನಾಥ ಮಾತನಾಡಿ, ಶಾಲಾ ಶಿಣದಲ್ಲಿ ಸಮುದಾಯ ಹಾಗೂ ಸ್ವಯಂಸೇವಕರ ಸಹಭಾಗಿತ್ವ ಅತ್ಯಂತ ಅಗತ್ಯ ಎಂದು ಪ್ರತಿಪಾದಿಸಿದರು.
ಡಯಟ್​ ಹಿರಿಯ ಉಪನ್ಯಾಸಕ ಎಂ. ಶೇಖರಪ್ಪ ಅವರು ಸಹ ಸಂಸ್ಥೆ ಸೇವೆಯನ್ನು ಪ್ರಶಂಸಿಸಿದರು. ವೆಂಕಟರೆಡ್ಡಿ ನಿರೂಪಣೆ ಮಾಡಿದರು. ಮಂಜುನಾಥ ಗುರುಸುಣಿಗಿ ಸ್ವಾಗತಿಸಿದರು. ಪ್ರದಿಪರೆಡ್ಡಿ ವಂದಿಸಿದರು. ಶಾಲಾ ಮಟ್ಟದ ಗಣಿತ ಸ್ಪರ್ಧೆಗಳ ಫಲಿತಾಂಶದ ಆಧರಿಸಿ ಜಿಲ್ಲೆಯ 25 ಕ್ಲಸ್ಟರ್​ ಸಿಆರ್​ಪಿ ಹಾಗೂ 25 ಹಿರಿಯ ಪ್ರಾಥಮಿಕ ಶಾಲೆ ಮುಖ್ಯಗುರು ಮತ್ತು ಎಸ್​ಡಿಎಂಸಿ ಅಧ್ಯರನ್ನು ಸನ್ಮಾನಿಸಲಾಯಿತು.
ಸಿ.ಎಸ್​.ಮುಧೋಳ ಡಿಡಿಪಿಐ ಯಾದಗಿರಿ
ಜಿಲ್ಲೆಯ ನಾಲ್ವರು ಯುಪಿಎಸ್​ಸಿ ಸಾಧಕರಾಗಿರುವುದು ಹೆಮ್ಮೆ ವಿಷಯ. ಆದರೆ ಯಶಸ್ಸಿನ ಬೆಳಕಿನಲ್ಲಿ ಮಾತ್ರ ನಮ್ಮ ವಿದ್ಯಾರ್ಥಿಗಳನ್ನು ಗುರುತಿಸುವುದು ಸರಿಯಲ್ಲ. ಹೋಟೆಲ್​ಗಳಲ್ಲಿ ಕೆಲಸ ಮಾಡುತ್ತ ಸಂಕಷ್ಟದಲ್ಲಿರುವವರೂ ನಮ್ಮ ಮಕ್ಕಳೇ. ಪ್ರತಿಯೊಬ್ಬ ವಿದ್ಯಾರ್ಥಿಯನ್ನು ಒಂದೇ ದೃಷ್ಟಿಯಿಂದ ನೋಡಬೇಕು. ಶಿಣಕ ಕ್ಷೇತ್ರದಲ್ಲಿ ಜಾತಿ, ಸ್ಥಿತಿ, ಹಿನ್ನೆಲೆ ಎಂಬ ಭೇದಗಳಿಗೆ ಸ್ಥಳವಿಲ್ಲ. ಇಲ್ಲಿ ಶಿಣವೇ ಒಂದು ಜಾತಿ ಎಂಬ ಸತ್ಯವನ್ನು ಅರಿಯುವುದು ಮುಖ್ಯ.
ರಂಗನಾಥ ಹಿರಿಯ ವಿಭಾಗೀಯ ಕ್ಷೇತ್ರ ವ್ಯವಸ್ಥಾಪಕ, ಅರ ಫೌಂಡೇಷನ್​
ಗಣಿತ ಕಲಿಕಾ ಆಂದೋಲನ ಯೋಜನೆ 2015ರಿಂದ ರಾಜ್ಯದಾದ್ಯಂತ ಸರ್ಕಾರಿ ಪ್ರಾಥಮಿಕ ಶಾಲಾ ಮಕ್ಕಳಲ್ಲಿ ಗಣಿತದ ಗುಣಮಟ್ಟವನ್ನು ಹೆಚ್ಚಿಸುವ ಉದ್ದೇಶದಿಂದ ಜಾರಿಯಲ್ಲಿದೆ. ಮಕ್ಕಳಿಗೆ ಗಣಿತವನ್ನು ಸರಳ ಮತ್ತು ಆಸಕ್ತಿದಾಯಕವಾಗಿ ಕಲಿಸಲು ಕಲಿಕಾ ಕಿಟ್​ಗಳನ್ನು ಒದಗಿಸಲಾಗುತ್ತಿದೆ. 2025ರ ನವೆಂಬರ್​ ಮತ್ತು ಡಿಸೆಂಬರ್​ನಲ್ಲಿ ಜಿಲ್ಲೆಯ 287 ಶಾಲೆಗಳಲ್ಲಿ 4, 5 ಮತ್ತು 6ನೇ ತರಗತಿ ಮಕ್ಕಳಿಗೆ ಶಾಲಾ ಮಟ್ಟದ ಗಣಿತ ಸ್ಪರ್ಧೆ ನಡೆಸಲಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net