ಅತಿಥಿ ಉಪನ್ಯಾಸಕಿಯರಿಗೆ ಮಾತೃತ್ವ ರಜೆ

ಅತಿಥಿ ಉಪನ್ಯಾಸಕಿಯರಿಗೆ ವೇತನ ಸಹಿತ ಮಾತೃತ್ವ ರಜೆ
ಅತಿಥಿ ಉಪನ್ಯಾಸಕಿಯರಿಗೆ ವೇತನ ಸಹಿತ ಮಾತೃತ್ವ ರಜೆ
Published on

ಪ್ರಮುಖ ಮುಖ್ಯಾಂಶಗಳು

  • 2026-27ನೇ ಶೈಕ್ಷಣಿಕ ಸಾಲಿನಿಂದ ಅನ್ವಯವಾಗುವಂತೆ 90 ದಿನಗಳ ವೇತನ ಸಹಿತ ಮಾತೃತ್ವ ರಜೆಯನ್ನು ಮಂಜೂರು ಮಾಡಿ ಸರ್ಕಾರ ಉನ್ನತ ಶಿಕ್ಷಣ ಇಲಾಖೆ ಆದೇಶ
  • ಅರ್ಹ ಮಹಿಳಾ ಅತಿಥಿ ಉಪನ್ಯಾಸಕಿಯರು ಹೆರಿಗೆಯ ಸಮಯದಲ್ಲಿ 90 ದಿನಗಳ ಕಾಲ ವೇತನ ಸಹಿತ ರಜೆಯನ್ನು ಪಡೆಯಬಹುದಾಗಿದೆ.
  • ಮಾತೃತ್ವ ರಜೆಯ ಮೇಲೆ ತೆರಳುವ ಉಪನ್ಯಾಸಕಿಯರ ಜಾಗದಲ್ಲಿ, ಬದಲಿ ಅತಿಥಿ ಉಪನ್ಯಾಸಕರನ್ನು ತಾತ್ಕಾಲಿಕವಾಗಿ ನೇಮಕ ಮಾಡಿಕೊಳ್ಳಲು ಅವಕಾಶ
ಬೆಂಗಳೂರು: ರಾಜ್ಯದ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳು, ಪಾಲಿಟೆಕ್ನಿಕ್ ಮತ್ತು ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಮಹಿಳಾ ಅತಿಥಿ ಉಪನ್ಯಾಸಕಿಯರಿಗೆ 2026-27ನೇ ಶೈಕ್ಷಣಿಕ ಸಾಲಿನಿಂದ ಅನ್ವಯವಾಗುವಂತೆ 90 ದಿನಗಳ ವೇತನ ಸಹಿತ ಮಾತೃತ್ವ ರಜೆಯನ್ನು ಮಂಜೂರು ಮಾಡಿ ಸರ್ಕಾರ ಉನ್ನತ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ.
ಇನ್ಮುಂದೆ, ಅರ್ಹ ಮಹಿಳಾ ಅತಿಥಿ ಉಪನ್ಯಾಸಕಿಯರು ಹೆರಿಗೆಯ ಸಮಯದಲ್ಲಿ 90 ದಿನಗಳ ಕಾಲ ವೇತನ ಸಹಿತ ರಜೆಯನ್ನು ಪಡೆಯಬಹುದಾಗಿದೆ. ಮಾತೃತ್ವ ರಜೆಯ ಮೇಲೆ ತೆರಳುವ ಉಪನ್ಯಾಸಕಿಯರ ಜಾಗದಲ್ಲಿ, ಬದಲಿ ಅತಿಥಿ ಉಪನ್ಯಾಸಕರನ್ನು ತಾತ್ಕಾಲಿಕವಾಗಿ ನೇಮಕ ಮಾಡಿಕೊಳ್ಳಲು ಸರ್ಕಾರ ಅವಕಾಶ ಕಲ್ಪಿಸಿದೆ. ಈ ಬದಲಿ ಉಪನ್ಯಾಸಕರಿಗೆ ಹಾಲಿ ಇರುವ ನಿಯಮದಂತೆ ಗೌರವಧನ ನೀಡಲಾಗುತ್ತದೆ. ರಜೆಯ ಮೇಲೆ ತೆರಳುವ ಉಪನ್ಯಾಸಕಿಯರಿಗೆ ವೇತನ ನೀಡಲು ಹಾಗೂ ಬದಲಿ ಉಪನ್ಯಾಸಕರ ಗೌರವಧನಕ್ಕಾಗಿ ಅಗತ್ಯವಿರುವ ಹೆಚ್ಚುವರಿ ಅನುದಾನವನ್ನು ಒದಗಿಸಲಾಗುವುದು ಎಂದು ಸರ್ಕಾರ ತಿಳಿಸಿದೆ.
ಈ ಹಿಂದೆ ಮಹಿಳಾ ಅತಿಥಿ ಉಪನ್ಯಾಸಕಿಯರಿಗೆ ಹೆರಿಗೆಯ ಸಮಯದಲ್ಲಿ ವೇತನ ರಹಿತ ರಜೆ ಮಾತ್ರ ಲಭ್ಯವಿತ್ತು. ಇದರಿಂದ ಅವರಿಗೆ ಆರ್ಥಿಕವಾಗಿ ತೊಂದರೆಯಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ಬಜೆಟ್ ನಲ್ಲಿ ಘೋಷಿಸಿದ್ದಂತೆ ಈಗ ಸೌಲಭ್ಯ ಪ್ರಕಟಿಸಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net