ಮಾಸ್ತಿ ಕೃತಿ ‘ಚಿಕ್ಕವೀರ ರಾಜೇಂದ್ರ’ ಪರಿಚಯ

ಅಂಗಳದಲ್ಲಿ ತಿಂಗಳ ಪುಸ್ತಕ
ಅಂಗಳದಲ್ಲಿ ತಿಂಗಳ ಪುಸ್ತಕ
Published on

ಪ್ರಮುಖ ಮುಖ್ಯಾಂಶಗಳು

  • * ಜು.9ಕ್ಕೆ ಜಯನಗರದಲ್ಲಿ ಕಾರ್ಯಕ್ರಮ
ಬೆಂಗಳೂರು: ಕನ್ನಡ ಪುಸ್ತಕ ಪ್ರಾಧಿಕಾರದ ‘ಅಂಗಳದಲ್ಲಿ ತಿಂಗಳ ಪುಸ್ತಕ ಯೋಜನೆ’ಯಡಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರ ‘ಚಿಕ್ಕವೀರ ರಾಜೇಂದ್ರ’ ಕೃತಿ ಕುರಿತು ಗುರುವಾರ (ಜು.9) ಬೆಳಗ್ಗೆ 11 ಗಂಟೆಗೆ ಜಯನಗರದ ರಾಣಿ ಸರಳಾದೇವಿ ವಿದ್ಯಾ ಸಂಸ್ಥೆಯ ಸಭಾಂಗಣದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ. ಪ್ರಾಧಿಕಾರದ ಅಧ್ಯಕ್ಷ ಡಾ. ಮಾನಸ ಕಾರ್ಯಕ್ರಮ ಉದ್ಘಾಟಿಸುವರು. ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಅಧ್ಯಕ್ಷ ಡಾ. ಚನ್ನಪ್ಪ ಕಟ್ಟಿ ಅವರು ಕೃತಿ ಕುರಿತು ಉಪನ್ಯಾಸ ನೀಡಲಿದ್ದಾರೆ. ಮೈಸೂರು ಬ್ಯಾಂಕ್ ಎಂಪ್ಲಾಯೀಸ್ ಎಜುಕೇಷನ್ ಸೊಸೈಟಿ ಉಪಾಧ್ಯಕ್ಷ ಡಾ. ಕೆ.ಲಕ್ಷ್ಮೀಶ ಇತರರು ಭಾಗವಹಿಸಲಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net