ವಿವಾಹ ಕೇವಲ ಕಾನೂನು ಒಪ್ಪಂದವಲ್ಲ

ಕಲಬುರಗಿ ಸಿಯುಕೆನಲ್ಲಿ ಮಂಗಳವಾರ ಆಯೋಜಿಸಿದ್ದ ರಾಷ್ಟ್ರೀಯ ವಿಚಾರ ಸಂಕಿರಣವನ್ನು ಹೈಕೋರ್ಟ್​ ವಿಶ್ರಾಂತ ನ್ಯಾಯಮೂರ್ತಿ ಕೃಷ್ಣ ದೀಕ್ಷಿತ್​ ಉದ್ಘಾಟಿಸಿದರು. ಪ್ರೊ.ಬಟ್ಟು ಸತ್ಯನಾರಾಯಣ, ಪ್ರೊ.ಬಸವರಾಜ ಕುಬಕಡ್ಡಿ, ಡಾ.ಅನಂತ ಚಿಂಚುರೆ, ಪ್ರೊ.ಸೀಮಾ ಇತರರಿದ್ದರು.
ಕಲಬುರಗಿ ಸಿಯುಕೆನಲ್ಲಿ ಮಂಗಳವಾರ ಆಯೋಜಿಸಿದ್ದ ರಾಷ್ಟ್ರೀಯ ವಿಚಾರ ಸಂಕಿರಣವನ್ನು ಹೈಕೋರ್ಟ್​ ವಿಶ್ರಾಂತ ನ್ಯಾಯಮೂರ್ತಿ ಕೃಷ್ಣ ದೀಕ್ಷಿತ್​ ಉದ್ಘಾಟಿಸಿದರು. ಪ್ರೊ.ಬಟ್ಟು ಸತ್ಯನಾರಾಯಣ, ಪ್ರೊ.ಬಸವರಾಜ ಕುಬಕಡ್ಡಿ, ಡಾ.ಅನಂತ ಚಿಂಚುರೆ, ಪ್ರೊ.ಸೀಮಾ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಹೈಕೋರ್ಟ್​ ವಿಶ್ರಾಂತ ನ್ಯಾಯಮೂರ್ತಿ ಕೃಷ್ಣ ದೀತ್​ ಅಭಿಮತ
  • ಸಿಯುಕೆನಲ್ಲಿ ರಾಷ್ಟ್ರೀಯ ವಿಚಾರ ಸಂಕಿರಣ
ಕಲಬುರಗಿ: ವಿವಾಹವನ್ನು ಕೇವಲ ಇಬ್ಬರ ನಡುವಿನ ಕಾನೂನು ಒಪ್ಪಂದವೆಂದು ಪರಿಗಣಿಸದೆ ಕುಟುಂಬದ ಸ್ಥಿರತೆ, ಸಾಮಾಜಿಕ ಮೌಲ್ಯ ಮತ್ತು ಮುಂದಿನ ಪೀಳಿಗೆಯ ಹಿತಾಸಕ್ತಿ ರೂಪಿಸುವ ಪ್ರಮುಖ ಸಾಮಾಜಿಕ ಅಂಶವಾಗಿ ನೋಡಬೇಕು ಎಂದು ಕರ್ನಾಟಕ ಮತ್ತು ಒಡಿಶಾ ಹೈಕೋರ್ಟ್​ ವಿಶ್ರಾಂತ ನ್ಯಾಯಮೂರ್ತಿ ಕೃಷ್ಣ ಎಸ್​.ದೀತ್​ ಅಭಿಪ್ರಾಯಪಟ್ಟರು.
ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಕಾನೂನು ವಿಭಾಗ, ಮರತೂರಿನ ವಿಜ್ಞಾನೇಶ್ವರ ಪ್ರತಿಷ್ಠಾನ ಟ್ರಸ್ಟ್​ ಸಹಯೋಗದಡಿ ಸಹ ಜೀವನದ ವಿಕಸನ: ವಿವಾಹ ಮತ್ತು ಲಿವ್​&ಇನ್​ ಸಂಬಂಧಗಳಲ್ಲಿನ ಪಾವಿತ್ರತೆ, ಕಾನೂನುಬದ್ಧತೆ ಮತ್ತು ಸಾಮಾಜಿಕ ಆಯಾಮ ಕುರಿತು ವಿವಿಯಲ್ಲಿ ಮಂಗಳವಾರ ಏರ್ಪಡಿಸಿದ್ದ ರಾಷ್ಟ್ರೀಯ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.
ಭಾರತೀಯ ಪದ್ಧತಿಯಲ್ಲಿ ವಿವಾಹ 16 ಸಂಸ್ಕಾರಗಳಲ್ಲಿ ಒಂದಾಗಿದೆ. ಬದ್ಧತೆ, ಪರಸ್ಪರ ಜವಾಬ್ದಾರಿ, ನಂಬಿಕೆ, ಕುಟುಂಬದ ನಿರಂತರತೆ ಮತ್ತು ಸಾಮಾಜಿಕ ಹೊಣೆಗಾರಿಕೆ ಒಳಗೊಂಡ ಸಂಸ್ಕಾರವಾಗಿದೆ. ಆದರೆ ಬದಲಾಗುತ್ತಿರುವ ಜೀವನಶೈಲಿ ಮತ್ತು ವಿದೇಶಿ ಸಂಸ್ಕೃತಿ
ವಿವಾಹಕ್ಕೆ ಸಂಬಂಧಿಸಿದ ಕುಟುಂಬ ಕಾನೂನು, ಉತ್ತರಾಧಿಕಾರ, ಆಸ್ತಿ ಹಕ್ಕು, ನಿರ್ವಹಣಾ ಹಕ್ಕು, ಪೋಷಕರ ಜವಾಬ್ದಾರಿ ಮತ್ತು ಮಕ್ಕಳ ಹಕ್ಕುಗಳು ಸೇರಿ ಹಲವು ಕಾನೂನು ಆಯಾಮಗಳು ಹೊಸ ಪ್ರಶ್ನೆಗಳನ್ನು ಹುಟ್ಟುಹಾಕುತ್ತಿವೆ. ಲಿವ್​-ಇನ್​ ಸಂಬಂಧಗಳನ್ನೂ ಕಾನೂನುಬದ್ಧ ಹಕ್ಕು, ಮಕ್ಕಳ ಹಿತಾಸಕ್ತಿ, ಉತ್ತರಾಧಿಕಾರ, ನಿರ್ವಹಣೆ ಮತ್ತು ಪೋಷಕರ ಜವಾಬ್ದಾರಿ ಇತರೆ ಅಂಶಗಳ ದೃಷ್ಟಿಯಿಂದ ಪರಿಶೀಲಿಸುವ ಅಗತ್ಯವಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಕುಲಪತಿ ಪ್ರೊ.ಬಟ್ಟು ಸತ್ಯನಾರಾಯಣ ಮಾತನಾಡಿ, ಆಧುನಿಕ ಜೀವನಶೈಲಿ ಪರಿಣಾಮ ಕುಟುಂಬ ವ್ಯವಸ್ಥೆಯಲ್ಲಿ ಬದಲಾವಣೆ ಕಂಡುಬರುತ್ತಿದೆ. ನಗರ ಪ್ರದೇಶಗಳಲ್ಲಿ ವೃದ್ಧಾಶ್ರಮಗಳ ಸಂಖ್ಯೆ ಹೆಚ್ಚುತ್ತಿರುವುದು ಹಾಗೂ ವೃದ್ಧ ಪಾಲಕರ ಕಡೆಗಣನೆ ಕಳವಳಕಾರಿ ಬೆಳವಣಿಗೆ ಎಂದು ಹೇಳಿದರು.
ಹಿಂದಿನ ಅವಿಭಕ್ತ ಕುಟುಂಬ ವ್ಯವಸ್ಥೆಯಲ್ಲಿ ಪರಸ್ಪರ ಸಹಕಾರ, ಬಾಂಧವ್ಯ ಮತ್ತು ಜವಾಬ್ದಾರಿ ಮನೋಭಾವವಿತ್ತು. ಆದರೆ ಬದಲಾಗುತ್ತಿರುವ ವಿವಾಹ ಪದ್ಧತಿ, ಲಿವ್​-ಇನ್​ ಸಂಬಂಧ, ಪರಸ್ಪರ ನಂಬಿಕೆ ಮತ್ತು ಗೌರವದ ಕೊರತೆಯಿಂದ ಕುಟುಂಬ ಮತ್ತು ಸಮಾಜ, ದೇಶದ ಮೇಲೆ ಪರಿಣಾಮ ಬೀರುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಕಾನೂನು ವಿಭಾಗದ ಡೀನ್​ ಪ್ರೊ.ಬಸವರಾಜ ಕುಬಕಡ್ಡಿ ಸ್ವಾಗತಿಸಿದರು. ವಿಭಾಗದ ಮುಖ್ಯಸ್ಥ ಡಾ.ಅನಂತ ಚಿಂಚುರೆ ವಂದಿಸಿದರು. ಡಾ.ರೇಣುಕಾ ಗುಬ್ಬೇವಾಡ ಕಾರ್ಯಕ್ರಮದ ಮಾಹಿತಿ ನೀಡಿದರು.
ವಿಜ್ಞಾನೇಶ್ವರ ಪ್ರತಿಷ್ಠಾನದ ಟ್ರಸ್ಟಿ ಮಹದೇವಯ್ಯ ಕರದಳ್ಳಿ, ದೆಹಲಿ ವಿಶ್ವವಿದ್ಯಾಲಯದ ಪ್ರೊ.ಸೀಮಾ, ಪ್ರಾಧ್ಯಾಪಕರಾದ ಪ್ರೊ.ಚನ್ನವಿರ ಆರ್​.ಎಂ., ಪ್ರೊ.ಪವಿತ್ರಾ ಆಲೂರು, ಪ್ರೊ.ಪ್ರಭಾಕರನ್​, ಡಾ.ಶಶಿರೇಖಾ ಮಾಳಗಿ, ಡಾ.ಜಗದೀಶ್​ಚಂದ್ರ ಟಿ.ಜಿ., ಡಾ.ಜಯಂತ ಬೋರುವಾ, ಡಾ.ಕೆ.ಎಂ. ಕೃಷ್ಣಶೇಖರ ಶರ್ಮಾ, ಪಿ.ವೈಷ್ಣವಿ ನಾರಾಯಣಿ, ಜುನು ದಾಸ್​ ಇತರರಿದ್ದರು.
"

ವೈಯಕ್ತಿಕ ಸ್ವಾಯತ್ತತೆ ಮತ್ತು ಸಾಮಾಜಿಕ ಜವಾಬ್ದಾರಿ ನಡುವೆ ಸಮತೋಲನ ಅಗತ್ಯ. ಮಹಿಳೆಯರ ಸ್ವಾತಂತ್ರ್ಯ , ಸಮಾನತೆ ಮತ್ತು ಸಬಲೀಕರಣ ಗೌರವಿಸುವುದರ ಜತೆಗೆ ಕುಟುಂಬ ಮತ್ತು ಸಮಾಜದ ವಿಶಾಲ ಹಿತಾಸಕ್ತಿಯನ್ನೂ ಪರಿಗಣಿಸುವ ಅಗತ್ಯವಿದೆ.

— > ಕೃಷ್ಣ ಎಸ್​.ದೀಕ್ಷಿತ್​ ವಿಶ್ರಾಂತ ನ್ಯಾಯಮೂರ್ತಿ, ಕರ್ನಾಟಕ&ಒಡಿಶಾ ಹೈಕೋರ್ಟ್​

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net