ಸರ್ಕಾರಿ ಜಮೀನುಗಳ ಗಡಿ ಗುರುತಿಸಿ

ಕಕ್ಕೇರಾ ಪಟ್ಟಣದಲ್ಲಿರುವ ಸರ್ಕಾರಿ ಜಮೀನುಗಳ ಗಡಿ ಗುರುತಿಸಬೇಕೆಂದು ಆಗ್ರಹಿಸಿ ಸಾಮೂಹಿಕ ಸಂಟಟನೆಗಳ ಪದಾಧಿಕಾರಿಗಳು ಕಂದಾಯ ಅಧಿಕಾರಿಗೆ ಮನವಿಪತ್ರ ಸಲ್ಲಿಸಿದರು. ಸುನೀಲ್​ ಶೆಟ್ಟಿ, ಮರೆಪ್ಪ ಕಾಂಗ್ರೆಸ್​, ಬಸವರಾಜ ಹೊಸಮನಿ, ಸಂಗಣ್ಣ ಸುಬೇದಾರ್​, ಸೋಮು ಬಂದೊಡ್ಡಿ ಇತರರಿದ್ದರು.
ಕಕ್ಕೇರಾ ಪಟ್ಟಣದಲ್ಲಿರುವ ಸರ್ಕಾರಿ ಜಮೀನುಗಳ ಗಡಿ ಗುರುತಿಸಬೇಕೆಂದು ಆಗ್ರಹಿಸಿ ಸಾಮೂಹಿಕ ಸಂಟಟನೆಗಳ ಪದಾಧಿಕಾರಿಗಳು ಕಂದಾಯ ಅಧಿಕಾರಿಗೆ ಮನವಿಪತ್ರ ಸಲ್ಲಿಸಿದರು. ಸುನೀಲ್​ ಶೆಟ್ಟಿ, ಮರೆಪ್ಪ ಕಾಂಗ್ರೆಸ್​, ಬಸವರಾಜ ಹೊಸಮನಿ, ಸಂಗಣ್ಣ ಸುಬೇದಾರ್​, ಸೋಮು ಬಂದೊಡ್ಡಿ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಸಾಮೂಹಿಕ ಸಂಟನೆ ಪದಾಧಿಕಾರಿಗಳು ಆಗ್ರಹ
  • ಕಂದಾಯ ಅಧಿಕಾರಿಗೆ ಮನವಿಪತ್ರ
ಕಕ್ಕೇರಾ: ಪಟ್ಟಣದಲ್ಲಿರುವ ಸರ್ಕಾರಿ ಜಮೀನುಗಳ ಗಡಿ ಗುರುತಿಸಬೇಕೆಂದು ಆಗ್ರಹಿಸಿ ವಿವಿಧ ಸಂಟನೆಗಳ ಪದಾಧಿಕಾರಿಗಳು ಪಟ್ಟಣದ ವಾಲ್ಮೀಕಿ ವೃತ್ತದಲ್ಲಿ ಗುರುವಾರ ಬೆಳಗ್ಗೆ ದಿಢೀರ್​ ಪ್ರತಿಭಟನೆ ನಡೆಸಿದರು.
ನಂತರ ಪದಾಧಿಕಾರಿಗಳು ಮಾತನಾಡಿ, ಪಟ್ಟಣದಲ್ಲಿ ಸರ್ಕಾರಕ್ಕೆ ಒಳಪಟ್ಟ ಜಾಗವು ಪುರಸಭೆ ವ್ಯಾಪ್ತಿಯಲ್ಲಿ ಸಾವಿರಾರು ಎಕರೆಗಳಿದ್ದು, ಅದು ಅಕ್ರಮಕೋರರ ಪಾಲಾಗುತ್ತಿದೆ. ಗಂವಠಾಣಾ ಜಾಗಕ್ಕೆ ಗಡಿ ಗುರುತಿಸಬೇಕು. ಸರ್ಕಾರದ ಗಂವಠಾಣಾ ಜಾಗ ಎಷ್ಟು ಎಕರೆ ಇದೆ ಎಂಬುದನ್ನ ಸ್ಪಷ್ಟಪಡಿಸಬೇಕು. ದಾರಿ ಹಾಗೂ ರಸ್ತೆಗಳನ್ನು ನಿರ್ಮಿಸಿ ಸಮಸ್ಯೆ ಬಗೆಹರಿಸಬೇಕು. ಪಟ್ಟಣದ ಕೆಲವರು ಅಭಿವೃದ್ಧಿ ಕಾರ್ಯಗಳಿಗೆ ಅಡೆ&ತಡೆ ಮಾಡಿ ಗೊಂದಲ ಸೃಷ್ಟಿಸುವವ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂಬುದು ಸೇರಿ ವಿವಿಧ ಬೇಡಿಕೆ ಈಡೇರಿಸಬೇಕೆಂದು ಆಗ್ರಹಿಸಿದರು.
ತಹಸೀಲ್ದಾರ್​ಗೆ ಬರೆದ ಮನವಿಪತ್ರವನ್ನು ಗ್ರಾಮಾಡಾಳಿತಾಧಿಕಾರಿ ಬಸವರಾಜ ಶೆಟ್ಟಿ ಅವರಿಗೆ ಸಲ್ಲಿಸಿದರು. ಉದ್ಯಮಿ ಸುನೀಲ್​ ಶೆಟ್ಟಿ, ಸಂಟನೆಗಳ ಪದಾಧಿಕಾರಿಗಳಾದ ಸಂಗಣ್ಣ ಸುಬೇದಾರ್​, ಮರೆಪ್ಪ ಕಾಂಗ್ರೆಸ್​, ಬಸವರಾಜ ಹೊಸಮನಿ, ನಿಂಗಪ್ಪ ಕೋಳೂರ್​, ಸೋಮು ಬಂದೊಡ್ಡಿ, ನಾಗರಾಜ ಚನ್ನಪಟ್ಟಣ, ಅಂಬ್ರೇಶ ಬೋಯಿ, ವೆಂಕಟೇಶ ದೊರೆ, ಮೌನೇಶ ಗುರಿಕಾರ, ಗೈಯ್ಯಪ್ಪ ಚನ್ನಪಟ್ಟಣ, ಭೀಮರಾಯ ದಿವಾಕರ್​, ಚಂದ್ರು ಮ್ಯಾಗೇರಿ, ಪ್ರವಿಣ ಜಕಾತಿ, ಮುದ್ದಣ್ಣ ಅಮ್ಮಾಪೂರ, ಬಸವರಾಜ ಕಟ್ಟಿಮನಿ, ಅಮರೇಶ ಬೂತಾರ್​, ಅಯೂಬ್​, ಸುರೇಶರಡ್ಡಿ, ಪಿಡ್ಡನಾಯಕ ಬಳಿಚಕ್ರ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net