ವಿವಿಧ ಗಣ್ಯರ ಆಹ್ವಾನಕ್ಕೆ ನಿರ್ಧಾರ

ಮಲ್ಲಮ್ಮನ ಬೆಳವಡಿ ಗ್ರಾಮದಲ್ಲಿ ಬೆಳವಡಿ ಮಲ್ಲಮ್ಮ ಉತ್ಸವ ವಿಚಾರ ಸಂಕಿರಣದ ಅಂಗವಾಗಿ ಪೂರ್ವಭಾವಿ ಸಭೆ ಜರುಗಿತು. ಎ.ಎನ್​.ಪ್ಯಾಟಿ, ಚಂದ್ರಶೇಖರಯ್ಯ ಕಾರಿಮನಿ, ರವಿ ಹಿರೇಮಠ ಇತರರಿದ್ದರು.
ಮಲ್ಲಮ್ಮನ ಬೆಳವಡಿ ಗ್ರಾಮದಲ್ಲಿ ಬೆಳವಡಿ ಮಲ್ಲಮ್ಮ ಉತ್ಸವ ವಿಚಾರ ಸಂಕಿರಣದ ಅಂಗವಾಗಿ ಪೂರ್ವಭಾವಿ ಸಭೆ ಜರುಗಿತು. ಎ.ಎನ್​.ಪ್ಯಾಟಿ, ಚಂದ್ರಶೇಖರಯ್ಯ ಕಾರಿಮನಿ, ರವಿ ಹಿರೇಮಠ ಇತರರಿದ್ದರು.
Published on
ಮಲ್ಲಮ್ಮನ ಬೆಳವಡಿ: ಗ್ರಾಮದ ಗ್ರಂಥಾಲಯದಲ್ಲಿ ಬೆಳವಡಿ ಮಲ್ಲಮ್ಮ ಉತ್ಸವ ವಿಚಾರ ಸಂಕಿರಣದ ಅಂಗವಾಗಿ ಬಿಇಒ, ವಿಚಾರ ಸಂಕಿರಣ ಸಮಿತಿ ಅಧ್ಯ ಎ.ಎನ್​.ಪ್ಯಾಟಿ ಅಧ್ಯತೆಯಲ್ಲಿ ಶನಿವಾರ ಪೂರ್ವಭಾವಿ ಸಭೆ ಜರುಗಿತು.
ವಿಚಾರ ಸಂಕಿರಣಕ್ಕೆ ದೊಡವಾಡದ ಜಡಿ ಸಿದ್ಧೇಶ್ವರ ಶಿವಾಚಾರ್ಯರು, ಧಾರ್ಮಿಕ ದತ್ತಿ ಇಲಾಖೆ ನಿರ್ದೇಶಕ ಮಹಾಂತಯ್ಯಶಾಸ್ತ್ರಿ ಆರಾದ್ರಿಮಠ, ಉಪನ್ಯಾಸ ನೀಡಲು ಮೈಸೂರಿನ ಸಾಹಿತಿಗಳಾದ ರಾಮಣ್ಣ ತಟ್ಟಿ, ಪ್ರೊ.ಶಿವಲೀಲಾ ಮುಕುಂದ ಹಾಗೂ ನೇತ್ರಾ ಬಿಸಿರೋಳ್ಳಿ, ಆಶಯ ನುಡಿ ಪ್ರಕಾಶ ಹುಂಬಿ, ಉದ್ಘಾಟಕರಾಗಿ ಶಾಸಕ ಮಹಾಂತೇಶ ಕೌಜಲಗಿ ಅವರನ್ನು ಆಹ್ವಾನಿಸಲು ನಿರ್ಧರಿಸಲಾಯಿತು. ಮೈಸೂರಿನ ನಿವೃತ್ತ ಕುಲಪತಿ ಎ.ಕೆ.ಉಪಾಧ್ಯಾಯ ಅಧ್ಯಕ್ಷತೆ ವಹಿಸುವರು ಎಂದು ತಿಳಿಸಿದರು.
ಗ್ರಾಪಂ ಅಧ್ಯಕ್ಷ ಚಂದ್ರಶೇಖರಯ್ಯ ಕಾರಿಮನಿ, ಬಿಆರ್​ಸಿ ರವಿ ಹಿರೇಮಠ, ವೀರಣ್ಣ ಕರಿಕಟ್ಟಿ, ಬಿ.ಜಿ.ದೇಗಾವಿ, ರಾಚಯ್ಯಸ್ವಾಮಿ ರೊಟ್ಟಯ್ಯನವರಮಠ, ಪ್ರಕಾಶ ಹುಂಬಿ, ಸಿ.ಎಸ್​.ಚಿಕ್ಕನಗೌಡರ, ಶಂಕ್ರಯ್ಯ ಗುಡ್ಡದಮಠ, ಎ್​.ಎಸ್​.ಕಡಕೋಳ, ವಿಶ್ವನಾಥ ಪೂಜಾರ, ಡಿ.ವೈ.ಗರಗದ, ಎ್​.ಎಸ್​.ಕಡಕೋಳ, ಯಾಸೀನ್​ ಕಿತ್ತೂರ, ಮಹಿಳಾ ಪ್ರತಿಷ್ಠಾನದ ಕಾರ್ಯದರ್ಶಿ ಸವಿತಾ ಪಾಟೀಲ, ಶಂಕರ ಕರಿಕಟ್ಟಿ, ಮಹಾಂತೇಶ ಕರಿಕಟ್ಟಿ, ಹನುಮಂತ ಸಾಲಹಳ್ಳಿ, ರೋಹಿತ ಕುಲಕರ್ಣಿ, ರಂಜಾನ್​ ನದ್​ಾ, ಶಂಕರ ಪರಮನಾಯ್ಕರ, ವಿರೂಪಾಪ್ಪ ವಾಲಿ, ಅಶೋಕ ತಡಕೋಡ ಇತರರಿದ್ದರು. ಶಿಕ ಶಿವಾನಂದ ಹುಂಬಿ ಸ್ವಾಗತಿಸಿದರು. ರಾಜು ಹಕ್ಕಿ ವಂದಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net