ಈ ಉನ್ನತಿಕರಿಸಿದ ಶಾಲೆಯಲ್ಲಿ ಸುಸಜ್ಜಿತ ಕಟ್ಟಡ, ಉತ್ತಮ ಗ್ರಂಥಾಲಯ, ಆಟದ ಮೈದಾನ, ಎಲ್ಲ ವಿಷಯಗಳ ನುರಿತ ಶಿಕ್ಷಕರು, ಪಠ್ಯದ ಜತೆಗೆ ಚಿತ್ರಕಲೆ, ಸಂಗೀತ, ಯೋಗ ಸೇರಿ ಹಲವು ಕಲಿಕೆಗಳನ್ನು ಇಲ್ಲಿ ಕಲಿಸಿಕೊಡಲಾಗುವುದು. ವಾರದ ಆರು ದಿನ ಪೌಷ್ಠಿಕ ಆಹಾರ, ಉಚಿತ ಪಠ್ಯಪುಸ್ತಕ, ಸಮವಸ, ಶೂ, ಕಂಪ್ಯೂರ್ ಕಲಿಕೆ, ಉಚಿತ ಆರೋಗ್ಯ ತಪಾಸಣೆ, ಶಾಲಾ ಶೈಕ್ಷಣಿಕ ಪ್ರವಾಸ, ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿಗೆ ಪರಿಹಾರ ಬೋಧನೆ. ನುರಿತ ಶಿಕ್ಷಕರಿಂದ ಆನ್ಲೈನ್ ತರಬೇತಿ ಸೇರಿ ಹಲವು ಉಪಯುಕ್ತ ಯೋಜನೆಗಳಿದ್ದು, ಪ್ರತಿಯೊಬ್ಬ ಪಾಲಕರು ತಮ್ಮ ಮಕ್ಕಳನ್ನು ಈ ಶಾಲೆಗೆ ಕಳಿಸಿ ಅವರನ್ನು ವಿದ್ಯಾವಂತರನ್ನಾಗಿ ಮಾಡಬೇಕು ಎಂದು ಸಲಹೆ ನೀಡಿದರು.