ಸರ್ಕಾರಿ ಯೋಜನೆ ಪ್ರತಿಯೊಬ್ಬರಿಗೂ ತಲುಪಿಸಿ

ಸೇಡಂನಲ್ಲಿ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಸೇವಾ ನಿವೃತ್ತಿ ಹೊಂದಿದ ಮುಖ್ಯಶಿಕ್ಷಕಿ ಶಿವಲೀಲಾ ಕೋರವಾರ ಅವರನ್ನು ಸನ್ಮಾನಿಸಿ ಬೀಳ್ಕೊಡಲಾಯಿತು. ಬಸವರಾಜ ಬಳೂಂಡಗಿ, ಸಂತೋಷ ಗಂಗೂ, ಶಿವಶಂಕ್ರಯ್ಯಸ್ವಾಮಿ, ಅರವಿಂದ ಪಸಾರ ಇತರರಿದ್ದರು.
ಸೇಡಂನಲ್ಲಿ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಸೇವಾ ನಿವೃತ್ತಿ ಹೊಂದಿದ ಮುಖ್ಯಶಿಕ್ಷಕಿ ಶಿವಲೀಲಾ ಕೋರವಾರ ಅವರನ್ನು ಸನ್ಮಾನಿಸಿ ಬೀಳ್ಕೊಡಲಾಯಿತು. ಬಸವರಾಜ ಬಳೂಂಡಗಿ, ಸಂತೋಷ ಗಂಗೂ, ಶಿವಶಂಕ್ರಯ್ಯಸ್ವಾಮಿ, ಅರವಿಂದ ಪಸಾರ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ನೌಕರರ ಸಂಘದ ಜಿಲ್ಲಾಧ್ಯಕ್ಷ ಬಳೂಂಡಗಿ ಕರೆ >
  • ಸೇಡಂನಲ್ಲಿ ಸೇವಾ ನಿವೃತ್ತಿ ಸಮಾರಂಭ
ಸೇಡಂ: ಸರ್ಕಾರಿ ನೌಕರರಾಗುವ ಭಾಗ್ಯ ಸಮಾಜದಲ್ಲಿ ಎಲ್ಲರಿಗೂ ಸಿಗುವುದಿಲ್ಲ. ಸಿಕ್ಕ ನಾವುಗಳೇ ಭಾಗ್ಯವಂತರಾಗಿದ್ದೇವೆ. ನೌಕರಿಯಲ್ಲಿರುವಷ್ಟು ದಿನ ಜವಾಬ್ದಾರಿಯಿಂದ ಕೆಲಸ ನಿರ್ವಹಿಸಿ ಜನರ ಪ್ರೀತಿಗೆ ಪಾತ್ರರಾಗಬೇಕು ಎಂದು ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಬಸವರಾಜ ಬಳೂಂಡಗಿ ಹೇಳಿದರು.
ಸರ್ಕಾರಿ ನೌಕರರ ಭವನದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಹಂದರಕಿ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕಿ ಶಿವಲೀಲಾ ಕೋರವಾರ ಅವರ ಸೇವಾ ನಿವೃತ್ತಿ ಹಾಗೂ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿ, ಸರ್ಕಾರ ಜಾರಿಗೊಳಿಸುವ ಯೋಜನೆಗಳನ್ನು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ತಲುಪಿಸುವ ಕೆಲಸ ಮಾಡಬೇಕು ಎಂದು ಕರೆ ನೀಡಿದರು.
ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಸಂತೋಷ ಗಂಗೂ ಮಾತನಾಡಿ, ಶಿಕ್ಷಕರ ಸಮಸ್ಯೆಗಳಿಗೆ ಅಧಿಕಾರಿಗಳು ಸ್ಥಳಿಯ ಹಂತದಲ್ಲಿ ಸ್ಪಂದಿಸಿದ್ರೆ, ಅವರು ಸರ್ಕಾರದ ಕೆಲಸಗಳನ್ನು ಪ್ರಾಮಾಣಿಕವಾಗಿ ನಿಭಾಯಿಸಲು ಸಾಧ್ಯವಾಗುತ್ತದೆ. ಇಲ್ಲದಿದ್ದಲ್ಲಿ ಸಮಸ್ಯೆಗಳ ಇತ್ಯರ್ಥಕ್ಕಾಗಿ ಅಲೆದಾಡಬೇಕಾಗುತ್ತದೆ. ಇದರಿಂದ ಸರ್ಕಾರಿ ಕೆಲಸ ಕುಂಠಿತಗೊಳ್ಳುತ್ತದೆ ಎಂದರು.
ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮರೆಪ್ಪ ಹೊಸ್ಮನಿ, ಕ್ಷೇತ್ರ ಶಿಕ್ಷಣಾಧಿಕಾರಿ ಮಾರುತಿ ಹುಜರಾತಿ, ನಿವೃತ್ತ ಮುಖ್ಯಶಿಕ್ಷಕಿ ಶಿವಲೀಲಾ ಕೋರವಾರ, ಶಂಕರಲಿಂಗಪ್ಪ ಮಾತನಾಡಿದರು.
ನೌಕರರ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಶಿವಶಂಕ್ರಯ್ಯಸ್ವಾಮಿ ಇಮಡಾಪುರ, ತಾಲೂಕು ಅಧ್ಯಕ್ಷ ಅರವಿಂದ ಪಸಾರ, ಪ್ರಾಥಮಿಕ ಶಾಲಾ ಶಿಕ್ಷಕರ ಸಂದ ತಾಲೂಕು ಅಧ್ಯಕ್ಷ ಬಸವರಾಜ ಸಾಗರ್​,ಕ್ಷೇತ್ರ ಸಮನ್ವಯಾಧಿಕಾರಿ ನರಸಪ್ಪ ರಾಹುಲ್​, ಪ್ರಮುಖರಾದ ಪ್ರಮಿಳಾ ಪಾಟೀಲ್​, ಲಕ್ಷ್ಮಣ ರಂಜೋಳಕರ್​, ಜಾಫರ್​ ಅಲಿ, ಗೋಪಾಲ ಸೇಡಂಕರ್​, ಶಿವರಾಯ ಭೋವಿ, ಶಿವಕುಮಾರ ಬಟಗೇರಾ, ಶಾರದಾ ಮಳಗಿ, ಜಾಕೀರ್​ ಹುಸೇನ್​, ರತ್ನಮ್ಮ ಕುದರಿ ಇತರರಿದ್ದರು.
ಪದ್ಮಾವತಿ ರೊಟ್ಟಿ ಪ್ರಾರ್ಥಿಸಿದರು. ಶಾರದಾ ಮಳಗಿ ಸ್ವಾಗತಿಸಿದರು. ಯಲ್ಲಪ್ಪ ಶಕಲಾಸಪಲ್ಲಿ ಪ್ರಾಸ್ತಾವಿಕ ಮಾತನಾಡಿದರು. ಶಕುಂತಲಾರೆಡ್ಡಿ ನಿರೂಪಣೆ ಮಾಡಿದರು. ಲಕ್ಷ್ಮಣ ರಂಜೋಳಕರ್​ ವಂದಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net