ಸೌಲಭ್ಯಗಳ ಸದುಪಯೋಗ ಪಡೆದು ಸಾಧನೆ ಮಾಡಿ

ಮಾಡಿಯಾಳದ ಸರ್ಕಾರಿ ಪ್ರೌಢಶಾಲೆಯಲ್ಲಿ ಸಮತಾ ಲೋಕ ಶಿಕ್ಷಣ ಸಮಿತಿಯಿಂದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಎಲ್​ಡಿಎ ಪುಸ್ತಕ ವಿತರಿಸಲಾಯಿತು. ಆರ್​.ಕೆ.ಪಾಟೀಲ್​, ಸಿದ್ದರಾಮ ಪ್ಯಾಟಿ, ಗುರುಶರಣ ಪಾಟೀಲ್​, ನಾದಕೆಂಚಪ್ಪ ಇತರರಿದ್ದರು.
ಮಾಡಿಯಾಳದ ಸರ್ಕಾರಿ ಪ್ರೌಢಶಾಲೆಯಲ್ಲಿ ಸಮತಾ ಲೋಕ ಶಿಕ್ಷಣ ಸಮಿತಿಯಿಂದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಎಲ್​ಡಿಎ ಪುಸ್ತಕ ವಿತರಿಸಲಾಯಿತು. ಆರ್​.ಕೆ.ಪಾಟೀಲ್​, ಸಿದ್ದರಾಮ ಪ್ಯಾಟಿ, ಗುರುಶರಣ ಪಾಟೀಲ್​, ನಾದಕೆಂಚಪ್ಪ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಆರ್​.ಕೆ.ಪಾಟೀಲ್​ ಕರೆ
  • ಮಾಡಿಯಾಳದ ಶಾಲೆ ಮಕ್ಕಳಿಗೆ ಪುಸ್ತಕ ವಿತರಣೆ
ನಿಂರ್ಬಗಾ: ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳು ಅನವಶ್ಯಕ ಕಾಲಹರಣ ಮಾಡದೆ ದೊರೆತ ಸೌಲಭ್ಯಗಳ ಸದುಪಯೋಗ ಪಡೆದುಕೊಂಡು ಪರಿಶ್ರಮದೊಂದಿಗೆ ಅಧ್ಯಯನ ಮಾಡಿದರೆ ಯಶಸ್ಸು ಲಭಿಸುತ್ತದೆ ಎಂಂದು ಸಮತಾ ಲೋಕ ಶಿಕ್ಷಣ ಸಮಿತಿ ಅಧ್ಯಕ್ಷ ಆರ್​.ಕೆ.ಪಾಟೀಲ್​ ಹೇಳಿದರು.
ಮಾಡಿಯಾಳದ ಸರ್ಕಾರಿ ಪ್ರೌಢಶಾಲೆಯ ಎಸ್​ಎಸ್​ಎಲ್​ಸಿ ವಿದ್ಯಾರ್ಥಿಗಳಿಗೆ ಸಮತಾ ಲೋಕ ಶಿಕ್ಷಣ ಸಮಿತಿಯಿಂದ ಎಲ್​ಡಿಎ ಪುಸ್ತಕಗಳನ್ನು ಗುರುವಾರ ವಿತರಿಸಿ ಮಾತನಾಡಿ, ಕಳೆದ ಸಾಲಿನಲ್ಲಿ ಆಳಂದ ತಾಲೂಕಿನ 55 ಪ್ರೌಢಶಾಲೆಗಳ ವಿದ್ಯಾರ್ಥಿಗಳ ಫಲಿತಾಂಶ ಕೇವಲ ಶೇ.37 ಇತ್ತು. ನಂತರ ಎಲ್​ಡಿಎ ಪುಸ್ತಕಗಳನ್ನು ಎಲ್ಲ ಪ್ರೌಢಶಾಲೆಗಳಿಗೆ ವಿತರಣೆ ಹಾಗೂ ಶಿಕ್ಷಕರ ಉತ್ತಮ ಬೋಧನೆಯಿಂದ ಕಳೆದ ಪರೀೆಯಲ್ಲಿ ತಾಲೂಕಿಗೆ ಶೇ.90.78 ರಿಸಲ್ಟ್​ ಲಭಿಸಿದೆ ಎಂದು ಹೇಳಿದರು.
ಮುಂಬರುವ ವರ್ಷದಲ್ಲಿ ಶೇ.100 ಸಾಧನೆ ಗುರಿ ಹೊಂದಲಾಗಿದೆ. 55 ಸರ್ಕಾರಿ ಪ್ರೌಢಶಾಲೆಗಳ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ ಶೇ.100 ಅಂಕ ಪಡೆಯುವ ನಿಟ್ಟಿನಲ್ಲಿ ನಮ್ಮ ಸಂಸ್ಥೆಯಿಂದ ಉಚಿತ ಊಟ, ವಸತಿಯೊಂದಿಗೆ ಮೂರು ತಿಂಗಳು ನುರಿತ ಶಿಕ್ಷಕರಿಂದ ತರಬೇತಿ ಕೊಡಿಸಲಾಗುವುದು ಎಂದರು.
ಜಿಪಂ ಮಾಜಿ ಸದಸ್ಯ ಸಿದ್ದರಾಮ ಪ್ಯಾಟಿ, ಗುರುಶರಣ ಪಾಟೀಲ್​, ಚನ್ನು ಬಿರಾದಾರ ಮಾತನಾಡಿದರು.
ಪ್ರಮುಖರಾದ ನಾದಕೆಂಚಪ್ಪ, ಜಾಫರ್​ಅಲಿ, ಸಂಗಣ್ಣ ಮುದ್ದಡಗಿ, ಸತೀಶ ಪನಶೆಟ್ಟಿ, ಆನಂದ ಪಾಟೀಲ್​, ಪ್ರಭುರಾಯ ಪೂಜಾರಿ, ಸದಾಶಿವ ಉಪ್ಪಿನ್​, ಶರಣಬಸಪ್ಪ ಕಲಶೆಟ್ಟಿ, ಹಣಮಂತರಾಯ ರಾಯಚೂರ, ಅಮೃತ ಬನಶೆಟ್ಟಿ, ಶರಣಬಸಪ್ಪ ಉಪ್ಪಿನ್​, ಪ್ರಭಾಕರ ಬಿರಾದಾರ, ಸಿದ್ದರಾಮ ಆಳಂದ, ಹಣಮಂತ ನಡಗೇರಿ, ಬಸವರಾಜ ಕೌಲಗಿ, ಹಣಮಂತ್ರಾಯ ಶಿರೂರ, ಪೀರಪ್ಪ ಶ್ರೀಗಣಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net