ಗುರುಮಠಕಲ್: ಮುಸ್ಲಿಂ ಪಂಚ್ ಅಧ್ಯಕ್ಷರಾಗಿ ಸೈಯಾದ್ ಖಾಜಾ ಮೈನೋದ್ದೀನ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಪಟ್ಟಣದಲ್ಲಿ ಭಾನುವಾರ ನಡೆದ ಗುರುಮಠಕಲ್ ನಗರ ಮುಸ್ಲಿಂ ಪಂಚ್ ಅಧ್ಯಕ್ಷ&ಉಪಾಧ್ಯಕ್ಷ ಹಾಗೂ ಕಾರ್ಯದರ್ಶಿ ಮತ್ತು ಖಜಾಂಚಿ ಆಯ್ಕೆ ಚುನಾವಣೆ ಗುರುಮಠಕಲ್ನ ಖತೀಬ್ ಡಾ.ಮುಜಾಫರ್ ಖಾನ್ ಅವರ ನೇತೃತ್ವದಲ್ಲಿ ನಡೆದಿದ್ದು, ಎಲ್ಲರೂ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಸೈಯಾದ್ ಖಾಜಾ ಮೈನೋದ್ದೀನ್ (ಅಧ್ಯಕ್ಷ), ಫಯಾಜ್ ಅಹಮದ್(ಉಪಾಧ್ಯಕ್ಷ), ಅಬ್ದುಲ್ ನಬಿ ಹವಾಲ್ದಾರ್ (ಕಾರ್ಯದರ್ಶಿ) ಚಂದಪಾಷಾ (ಖಜಾಂಚಿ)ಯಾಗಿ ಆಯ್ಕೆಯಾಗಿದ್ದಾರೆ. ಈ ವೇಳೆ ಮುಬಾರಕ ಬೀನ್ ಜಮೀಲ್, ಪಾಶ ಪ್ಯಾರೇ, ಅಕ್ತರ್ ಪ್ಯಾರೆ, ಮುಜುದ್ದಿನ್ ಖಾನ್, ಅಕ್ಬರ್, ಸೈಯಾದ್ ಬಾಬಾ, ಬಾಬಾ ಚಿಂತಕುಂಟ, ವಹಿದ್ ಚಿಂತಕುಂಟಿ, ನಹಿಮ್, ಸೀರಾಜ್, ಪೀರ್ ಅಹಮದ್ ಜಾಕ್, ಹಬೀದ್ ಬಾಬು, ಸಜೀದ್ ಇತರರಿದ್ದರು.