ಗಡಿ ಭಾಗದಲ್ಲಿ ಕಟ್ಟೆಚ್ಚ ವಹಿಸಿ

ಔರಾದ್​ ತಾಲೂಕಿನ ವಿಜಯನಗರ (ಬಾರ್ಡರ್​ ತಾಂಡಾ) ಚೆಕ್​ಪೋಸ್ಟ್​ ಗೆ ಬುಧವಾರ ಭಾಲ್ಕಿ ವಿಭಾಗದ ಡಿವೈಎಸ್​ಪಿ ಬಲ್ಲಪ್ಪ ನಂದಗಾಂವೆ ಭೇಟಿ ನೀಡಿ  ಪರಿಶೀಲಿಸಿದರು. ಪಿಎಸ್​ಐ ದಿನೇಶ ಎಂ.ಟಿ, ಶರಣಪ್ಪ ಹುಣಜೆ, ಸುಭಾಷ ಲಕ್ಕೆ, ದತ್ತು ನರೋಟೆ ಇತರರಿದ್ದರು.

Published on
ಔರಾದ್​: ತೆಲಂಗಾಣ ಮತ್ತು ಮಹಾರಾಷ್ಟ್ರ ರಾಜ್ಯಗಳ ಗಡಿಯಿರುವುದರಿಂದ ಎಲ್ಲ ಚೆಕ್​ಪೋಸ್ಟ್​ ಗಳಲ್ಲಿ ಪೊಲೀಸರು ಉತ್ತಮ ರೀತಿಯಿಂದ ಕರ್ತವ್ಯ ನಿರ್ವಹಿಸಿ ಯಾವುದೇ ಅಕ್ರಮ ಚಟುವಟಿಕೆಗಳು ನಡೆಯದಂತೆ ಮುನ್ನೆಚ್ಚರಿಕೆ ವಹಿಸಬೇಕು ಎಂದು ಭಾಲ್ಕಿ ಉಪ ವಿಭಾಗದ ಡಿವೈಎಸ್​ಪಿ ಬಲ್ಲಪ್ಪ ನಂದಗಾಂವೆ ಹೇಳಿದರು. ತಾಲೂಕಿನ ವಿಜಯನಗರ (ಬಾರ್ಡರ್​ ತಾಂಡಾ) ಚೆಕ್​ಪೋಸ್ಟ್​ ಗೆ ಬುಧವಾರ ಭೇಟಿ ನೀಡಿ ಪರಿಶೀಲಿಸಿ ಮಾತನಾಡಿದ ಅವರು, ಗಡಿಗಳಲ್ಲಿ ನೆರೆಯ ರಾಜ್ಯಗಳಿಂದ ನಮ್ಮ ಚೆಕ್​ಪೋಸ್ಟ್​ಗಳ ಮೂಲಕ ಸಾಗಣೆ ಮಾಡುವ ಅಕ್ರಮ ಚಟುವಟಿಕೆಗಳ ಮೇಲೆ ತೀವ್ರ ನಿಗಾವಹಿಸಬೇಕು. ಗಡಿಯಲ್ಲಿ ವ್ಯಾಪಕ ಬಿಗಿಭದ್ರತೆ ಇರಬೇಕು. ಅಕ್ರಮವಾಗಿ ಸಾಗಾಟವಾಗುತ್ತಿರುವ ವಸ್ತುಗಳ ಬಗ್ಗೆ ಮಾಹಿತಿ ಕಲೆ ಹಾಕಬೇಕು. ಯಾವುದೇ ರೀತಿಯ ಅಕ್ರಮ, ಅವ್ಯವಹಾರ ನಡೆಯದಂತೆ ಎಚ್ಚರ ವಹಿಸಬೇಕು ಸೂಚಿಸಿದರು. ಸಂತಪುರ ಪೊಲೀಸ್​ ಠಾಣೆಯ ಪಿಎಸ್​ಐ ದಿನೇಶ ಎಂ.ಟಿ, ಶರಣಪ್ಪ ಹುಣಜೆ, ಸುಭಾಷ ಲಕ್ಕೆ, ದತ್ತು ನರೋಟೆ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net