ಉಗರಗೋಳ: ಆತ್ಮವಿಶ್ವಾಸ, ಪ್ರಯತ್ನ ಹಾಗೂ ಕ್ರಿಯಾಶೀಲತೆಯನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಯಶಸ್ಸು ಕಟ್ಟಿಟ್ಟ ಬುತ್ತಿ ಎಂದು ಚಿಕ್ಕುಂಬಿ ಅಜಾತ ನಾಗಲಿಂಗಮಠದ ಪೀಠಾಧಿಪತಿ ಅಭಿನವ ನಾಗಲಿಂಗ ಸ್ವಾಮೀಜಿ ಹೇಳಿದರು. ಸವದತ್ತಿ ತಾಲೂಕಿನ ಚಿಕ್ಕುಂಬಿ ಗ್ರಾಮದಲ್ಲಿ ಜಗದ್ಗುರು ಅಜಾತ ನಾಗಲಿಂಗ ಸ್ವಾಮೀಜಿ 145ನೇ ಪುಣ್ಯಾರಾಧನೆ ಕಾರ್ಯಕ್ರಮದ ಅಂಗವಾಗಿ ಈಚೆಗೆ ಹಮ್ಮಿಕೊಂಡಿದ್ದ ಪಲ್ಲಕ್ಕಿ ಉತ್ಸವಕ್ಕೆ ಚಾಲನೆ ನೀಡಿ ಮಾತನಾಡಿ, ಇಂದಿನ ಯುವ ಪೀಳಿಗೆ ಶರಣರ, ಸಾಧುಸಂತ, ಮಹಾತ್ಮರ ಪ್ರವಚನ ಆಲಿಸಿ ಎಂದರು. ಸುಮಂಗಲಿಯರ ಆರತಿ, ಭಜನೆ, ಕರಡಿ ಮಜಲು, ಬಾಜಾಬಜಂತ್ರಿಗಳೊಂದಿಗೆ ನಾಗಲಿಂಗ ಸ್ವಾಮೀಜಿ ಪಲ್ಲಕ್ಕಿ ಉತ್ಸವ ಜರುಗಿತು. ಬೆನಕನಕೊಪ್ಪದ ಶಿವಾನಂದ ಸ್ವಾಮೀಜಿ, ಮಾತೋಶ್ರೀ ಶಿವಯೋಗಿ ತಾಯಿ, ರಾಹುಲ ಸಂಗ್ರೇಶ, ಪಿ.ಎಂ.ತೋರಗಲ್ಲ್, ಮಮ್ಮದಲಿ ದೊಡಮನಿ, ಎಸ್.ಬಿ.ವಾರೇಪ್ಪನವರ, ಮಲ್ಲಪ್ಪ ಬಡಿಗೇರ, ನಿಂಗನಗೌಡ್ರ ಸಂಗನಗೌಡ್ರ, ರಂಗಪ್ಪ ಜಂಬಳ್ಳಿ, ಮಂಜುನಾಥ ಸಂಗ್ರೇಶ, ಪ್ರಭು ಗೊವಣ್ಣವರ, ಅಶೋಕ ಕರಿ, ಪುಂಡಲೀಕ ಗೊವಣ್ಣವರ, ರಂಗನಾಥ ಸಂಗ್ರೇಶಿ, ಫಕೀರಪ್ಪ ತಳವಾರ, ಸಚಿನ ಸಂಗ್ರೇಶ, ಮಹಾಂತೇಶ ಸಂಗ್ರೇಶ, ಈಶ್ವರ ಕುರಿ, ನಾಗನಗೌಡ ಮೆಣಸಿನಕಾಯಿ, ಉಮೇಶ ಮೆಣಸಿನಕಾಯಿ ಇತರರಿದ್ದರು.