ಒಂದೇ ಸ್ಥಳದಲ್ಲಿ ಸುದೀರ್ ಸೇವೆ ಶ್ಲಾಘನೀಯ

ಶಹಾಬಾದ್​ನಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಸೇವಾ ನಿವೃತ್ತ ನಗರಸಭೆ ಸಿಬ್ಬಂದಿ ಸಾಬಣ್ಣ ಸುಂಗುಲಕರ್​ ಅವರನ್ನು ಸನ್ಮಾನಿಸಿ ಬೀಳ್ಕೊಡಲಾಯಿತು. ಫಕ್ರುದ್ದಿನ್​ ಸಾಬ್​, ಶರಣು ಪಗಲಾಪುರ, ನಿಂಗಣ್ಣ ಪೂಜಾರಿ, ರವಿ ರಾಠೋಡ್​, ಡಾ.ಅಹ್ಮದ್​ ಪಟೇಲ್​, ಸೂರ್ಯಕಾಂತ ಕೋಬಾಳ, ಕಾಶಿನಾಥ ಜೋಗಿ ಇತರರಿದ್ದರು.

Published on

ಶಹಾಬಾದ್​: ಸರ್ಕಾರಿ ನೌಕರರು ದೀರ್ ಕಾಲ ಒಂದೇ ಸ್ಥಳದಲ್ಲಿ ಸೇವೆ ಸಲ್ಲಿಸುವುದು ತುಂಬಾ ಅಪರೂಪ. ಹೀಗಿರುವಾರ ಮಲ್ಲಣ್ಣ ಅವರು ವಿಶ್ವಾಸ ಮತ್ತು ಸಹಕಾರದೊಂದಿಗೆ ಸೇವೆ ಸಲ್ಲಿಸಿ ನಿವೃತ್ತಿ ಹೊಂದುತ್ತಿರುವುದು ತುಂಬಾ ಹೆಮ್ಮೆ ಎಂದು ತಹಸೀಲ್ದಾರ್​ ನೀಲಪ್ರಭಾ ಬಬಲಾದ ಹೇಳಿದರು. ನಗರಸಭೆ ಆವರಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ನಗರಸಭೆ ಸಿಬ್ಬಂದಿ ಸಾಬಣ್ಣ ಸುಂಗುಲಕರ್​ ಅವರ ವಯೋನಿವೃತ್ತಿ ಸಮಾರಂಭದಲ್ಲಿ ಮಾತನಾಡಿದರು. ಟಿಐ ಪರಶುರಾಮ ವನಂಜಕರ, ಕಾಡಾ ಅಧ್ಯಕ್ಷ ಡಾ.ಎಂ.ಎ.ರಶೀದ್​, ಮುಖಂಡರಾದ ಮರಿಯಪ್ಪ ಹಳ್ಳಿ, ಮೃತ್ಯುಂಜಯ ಸ್ವಾಮಿ ಹಿರೇಮಠ, ಸುರೇಶ ಮೆಂಗನ್​, ಶಿವಪುತ್ರ ಕರಣಿಕ ಮಾತನಾಡಿದರು. ನಗರಸಭೆ ಪೌರಾಯುಕ್ತ ಫಕ್ರುದ್ದೀನ್​ ಸಾಬ್​, ಡಿ.ಡಿ.ಓಣಿ, ಶರಣು ಪಗಲಾಪುರ, ನಿಂಗಣ್ಣ ಪೂಜಾರಿ, ರವಿ ರಾಠೋಡ್​, ಡಾ.ಅಹ್ಮದ್​ ಪಟೇಲ್​, ಹಾಶಂ ಖಾನ್​, ಎಸ್​.ಪಿ.ನಂದಗಿರಿ, ಪುರುಷೋತ್ತಮ, ರಾಜೇಶ ಯನಗುಂಕಟಿಕರ್​, ಸಾಹೇಬಗೌಡ ಬೂಗುಂಡಿ, ಸೂರ್ಯಕಾಂತ ಕೋಬಾಳ, ಕಾಶಿನಾಥ ಜೋಗಿ, ಸಾಬೇರಾ ಬೇಗಂ, ಪಾರ್ವತಿ ಪವಾರ್​ ಇತರರಿದ್ದರು. ರಘುನಾಥ ನರಸಾಳೆ ನಿರೂಪಣೆ ಮಾಡಿದರು. ಶರಣಗೌಡ ಪಾಟೀಲ ಸ್ವಾಗತಿಸಿ, ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net