ಜೇವರ್ಗಿ: ಹಾಲಗಡ್ಲಾ ಗ್ರಾಮದಲ್ಲಿ 2023-24ನೇ ಸಾಲಿನಲ್ಲಿ ಕೈಗೆತ್ತಿಕೊಂಡಿರುವ ಕೆರೆ ಸುಧಾರಣೆ ಕಾಮಗಾರಿಯನ್ನು ಲೋಕಾಯುಕ್ತ ಕೇಂದ್ರ ಕಚೇರಿ ಅಧಿಕಾರಿ ತೇಜಸ್ ಬುಧವಾರ ಪರೀಶಿಲಿಸಿದರು. 50 ಲಕ್ಷ ರೂ. ವೆಚ್ಚದಲ್ಲಿ ಕೆರೆಯ 60 ಎಕರೆ ಪ್ರದೇಶದಲ್ಲಿ ಹೂಳು ಎತ್ತುವುದು, ಸಮರ್ಪಕ ನೀರು ಸಂಗ್ರಹ, ಕಾಲುವೆ ದುರಸ್ತಿ, ಸಿಡಿ ನಿರ್ಮಾಣ ಕಾಮಗಾರಿ ನಡೆಯುತ್ತಿದೆ. ಆದರೆ ಈ ಕುರಿತು ಸಾಕಷ್ಟು ದೂರಗಳು ಬಂದಿದ್ದು, ಹೀಗಾಗಿ ಪರಿಶೀಲನೆ ಮಾಡಲಾಗುತ್ತಿದೆ. ಕಾಲುವೆ 2.5 ಫೀಟ್ ಇದ್ದು, ಅದನ್ನು 3 ಫೀಟ್ಗೆ ವಿಸ್ತರಿಸಬೇಕು. ಕಾಮಗಾರಿ ಕುರಿತಂತೆ ಸಮಗ್ರ ವರದಿ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಸಣ್ಣ ನೀರಾವರಿ ಇಲಾಖೆ ಸಹಾಯಕ ಅಭಿಯಂತರ ಮಹಾಂತಪ್ಪ, ಮಧುಸೂದನ ತಿಮ್ಮಾಪೂರಿ ಇತರರಿದ್ದರು.