ಕಡಿಮೆ ಬಡ್ಡಿ ದರದಲ್ಲಿ ಸಾಲ ಸೌಲಭ್ಯ

ಕೈಲಾಂಚ ಹೋಬಳಿ ವಿಭೂತಿಕೆರೆ ವಿಎಸ್‌ಎಸ್‌ಎನ್ ಸಂಘದ ಆವರಣದಲ್ಲಿ ಹಮ್ಮಿಕೊಂಡಿದ್ದ ಸರ್ವ ಸದಸ್ಯರ ಸಭೆಯಲ್ಲಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಸಂಘದ ಅಧ್ಯಕ್ಷ ಅಂಜನಾಪುರ ವಾಸು, ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಟಿ.ಎಲ್. ಕೆಂಪೇಗೌಡ, ವೃತ್ತಿಪರ ನಿರ್ದೇಶಕ ಪಿ. ಅಶ್ವತ್ಥ್, ಸಂಘದ ಉಪಾಧ್ಯಕ್ಷ ಪಿ. ಕುಮಾರಸ್ವಾಮಿ, ಸಂಘದ ಸಿಇಒ ಕೆ. ಶಾಂತಕುಮಾರ್ ಇದ್ದರು.

Published on

ಕೈಲಾಂಚ :

ಸಂಘ ಪ್ರಸಕ್ತ ಸಾಲಿನಲ್ಲಿ 4.62 ಲಕ್ಷ ರೂ. ಆದಾಯಗಳಿಸಿದ್ದು, ಅಭಿವೃದ್ಧಿಯತ್ತ ದಾಪುಗಾಲು ಇಡುತ್ತಿದೆ ಎಂದು ವಿಭೂತಿಕೆರೆ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ಅಧ್ಯಕ್ಷ ಅಂಜನಾಪುರ ವಾಸು ತಿಳಿಸಿದರು.

ರಾಮನಗರ ತಾಲೂಕಿನ ಕೈಲಾಂಚ ಹೋಬಳಿಯ ವಿಭೂತಿಕೆರೆ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ಆವರಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ 2025-2026ನೇ ಸಾಲಿನ ಸರ್ವ ಸದಸ್ಯರ ಮಹಾಸಭೆಯಲ್ಲಿ ಮಾತನಾಡಿದರು.
ಸಂಘದಲ್ಲಿ ಕಡಿಮೆ ಬಡ್ಡಿ ದರದಲ್ಲಿ ರೈತರಿಗೆ, ಪುರುಷ, ಮಹಿಳಾ ಸಂಘಗಳಿಗೆ ಸಾಲಸೌಲಭ್ಯ ನೀಡಲಾಗುತ್ತಿದೆ. ರಸಗೊಬ್ಬರ ಕೊರತೆ ಉಂಟಾಗದಂತೆ ವರ್ಷದ ಎಲ್ಲ ದಿನಗಳಲ್ಲಿ ರಸಗೊಬ್ಬರ ಸಿಗುವ ಅನುಕೂಲತೆ ಮಾಡಲಾಗಿದೆ.
ಸಂಘದಲ್ಲಿ ಸಾಲ ಪಡೆದ ಮಹಿಳಾ ಸಂಘಗಳು ಅತ್ಯುತ್ತಮ ವ್ಯವಹಾರ ಮಾಡಿವೆ. ರೈತರಿಗೆ ಕೆಸಿಸಿ ಬೆಳೆ ಸಾಲ ಸೇರಿ ಸುಮಾರು 6 ಕೋಟಿ ರೂ. ಗೂ ಹೆಚ್ಚು ಸಾಲ ವಿತರಿಸಲಾಗಿದೆ. ಸಂಘದಲ್ಲಿ 1470 ಷೇರು ದಾರರಿದ್ದಾರೆ. ಮುಂದಿನ ದಿನಗಳಲ್ಲಿ ಹಲವು ಜನಪರ ಕೆಲಸ ಸಂಘದಿಂದ ಮಾಡಲಾಗುತ್ತದೆ ಎಂದು ತಿಳಿಸಿದರು.
ಸಂಘದ ಸಿಇಒ ಕೆ. ಶಾಂತಕುಮಾರ್ ಮಾತನಾಡಿ, ಗ್ರಾಹಕರು ಸಂಘದಲ್ಲಿ ಉತ್ತಮ ವ್ಯವಹಾರ ಮಾಡುತ್ತಿದ್ದಾರೆ. ಸಂಘ ಸಂಪೂರ್ಣ ಗಣಕೀಕರಣವಾಗಿದೆ. ಆನ್‌ಲೈನ್ ವಹಿವಾಟು ನಡೆಯುತ್ತಿದೆ. ಕಾಲಕಾಲಕ್ಕೆ ಸಾಲ ತೀರುವಳಿ ಮಾಡುತ್ತಾ ರೈತರು ಬಂದಿದ್ದಾರೆ. ಇದರಿಂದ ಬ್ಯಾಂಕ್ ಅಭಿವೃದ್ಧಿಯತ್ತ ಸಾಗಿದೆ. ಸಂಘದ ಅಭಿವೃದ್ಧಿಗೆ ರೈತರೇ ಕಾರಣವಾಗಿದ್ದಾರೆ ಎಂದರು.
ನಿರ್ದೇಶಕರಾದ ಶಿವಕುಮಾರಸ್ವಾಮಿ, ಪಾರ್ಥ, ರಾಜು, ಗುರುಸ್ವಾಮಿ, ಶಿವಲಿಂಗಪ್ರಸಾದ್, ಟಿ. ಚಂದ್ರಪ್ಪ, ಡಿ. ರಮೇಶ್, ಚಂದ್ರಮ್ಮ ಅಂಕಪ್ಪ, ಚಂದ್ರಮ್ಮ ಆನಂದ್ ಸಿಬ್ಬಂದಿಗಳಾದ ಪವಿತ್ರ, ಎ.ಎಂ. ವೀರೇಶ್, ಪಿ. ರವೀಂದ್ರ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net